ಸಂದೇಹನಿವಾರಣೆ

ಸತತ ಗಣಕೀಯ ಕೆಲಸ ಮಾಡುವವರಿಗೆ ‘೨೦-೨೦-೨೦ ರ ನಿಯಮಗಳು !

ಶ್ರೀ. ರಜತ ವಾಣಿ, ಬೆಳಗಾವ : ಪ್ರತಿದಿನ ದಿನಕ್ಕೆ ೭ ಗಂಟೆ ಗಣಕಯಂತ್ರದಲ್ಲಿ ಕೆಲಸ ಇರುತ್ತದೆ. ಆದ್ದರಿಂದ ಕಣ್ಣುಗಳ ಮೇಲೆ ಒತ್ತಡ ಬರುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ?

ಉತ್ತರ : ‘ಗಣಕಯಂತ್ರದಲ್ಲಿ ಕೆಲಸವನ್ನು ಮಾಡುವಾಗ ೨೦ ನಿಮಿಷಗಳಿಗೊಮ್ಮೆ ಸುಮಾರು ೨೦ ಸೆಕೆಂಡ್‌ಗಳ ವರೆಗೆ ೨೦ ಅಡಿಗಿಂತಲೂ ದೂರದಲ್ಲಿ (ಉದಾ. ಕಿಟಕಿಯಿಂದ ಹೊರಗೆ ದೂರ) ನೋಡಬೇಕು ಅಥವಾ ೨೦ ಸೆಕೆಂಡಗಳ ವರೆಗೆ ಕಣ್ಣುಗಳನ್ನು ಮುಚ್ಚಿ ಅಂಗೈಗಳನ್ನು ಕಣ್ಣುಗಳ ಮೇಲಿಡ ಬೇಕು. ಇದಕ್ಕೆ ‘೨೦-೨೦-೨೦ ರ ನಿಯಮ ಎನ್ನುತ್ತಾರೆ.

‘eye care ೨೦ ೨೦ ೨೦, ಹೀಗೆ ಗೂಗಲ್‌ನಲ್ಲಿ ‘ಸರ್ಚ ಮಾಡಿದರೆ ೨೦-೨೦ ನಿಮಿಷಗಳ ಅಲಾರಾಂ ಇಡಲು ವಿಶಿಷ್ಟ ‘ಆಪ್ಸ್ ಕೂಡ ಸಿಗುತ್ತವೆ.

೨೦೧೩ ರಲ್ಲಿ ಅಮೇರಿಕದಲ್ಲಿ ವಿಶ್ವವಿದ್ಯಾಲಯದಲ್ಲಿನ ೭೯೫ ವಿದ್ಯಾರ್ಥಿಗಳಿಂದ ಈ ನಿಯಮಗಳಿಗನುಸಾರ ಕೃತಿಯನ್ನು ಮಾಡಿಸಿಕೊಳ್ಳಲಾಯಿತು. ‘ಕೇವಲ ಇಷ್ಟನ್ನೇ ಮಾಡಿದರಿಂದ ಈ ವಿದ್ಯಾರ್ಥಿಗಳ ಕಣ್ಣುಗಳ ಮೇಲಿನ ಒತ್ತಡವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಯಿತು, ಎಂಬುದು ಸಂಶೋಧನೆಯ ಮೂಲಕ ಗಮನಕ್ಕೆ ಬಂದಿತು.

ಕೃತಿಯು ಸಣ್ಣದಿದೆ ಎನಿಸಿದರೂ, ಹೆಚ್ಚು ಪರಿಣಾಮಕಾರಿ ಯಾಗಿರುವುದರಿಂದ ಎಲ್ಲರೂ ಕೃತಿಯಲ್ಲಿ ತರಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ