ಉತ್ತರ ಪ್ರದೇಶದ ಕೆಲವೆಡೆ ಹೋಳಿ ಹಿನ್ನಲೆಯಲ್ಲಿ ಮಸೀದಿಗಳನ್ನು ಮುಚ್ಚಲಾಗುತ್ತಿದೆ !

  • ಶಾಹಜಹಾಪುರದಲ್ಲಿ ಪೊಲೀಸರ ಸಭೆಯಲ್ಲಿ ಮೌಲ್ವಿಯಿಂದ ‘ಹೋಳಿಗೆ ಅನಿವಾರ್ಯಗೊಳಿಸಿದರೆ ಗಲಭೆ ಆಗುವುದು’, ಎಂದು ಬೆದರಿಕೆ !

  • ಪೊಲೀಸರಿಂದ ಮೌಲ್ವಿಯ ವಿರುದ್ಧ ದೂರು ದಾಖಲು : ಮೌಲ್ವಿಯಿಂದ ಕ್ಷಮಾಯಾಚನೆ !

ಮುರಾದಾಬಾದ (ಉತ್ತರಪ್ರದೇಶ) – ಹೋಳಿಯ ಹಿನ್ನೆಲೆಯಲ್ಲಿ ಶಾಹಜಹಾಪುರದಲ್ಲಿ ೬೭ ಮಸೀದಿಗಳನ್ನು ಬಟ್ಟೆಯಿಂದ ಮುಚ್ಚುತ್ತಿದ್ದಾರೆ. ಸಂಭಲನಲ್ಲಿ ೮ ಮಸೀದಿ ಮುಚ್ಚಿದ್ದಾರೆ. ಮುರಾದಾಬಾನಲ್ಲಿ ಹೋಳಿಯ ಮೊದಲು ಪೊಲೀಸರು ಶಾಂತಿಯ ಸಭೆಯಲ್ಲಿ ಮೌಲ್ವಿ ಸದಾಕತ ಹುಸೈನ್ ಇವನು ಗಲಭೆಯ ಬೆದರಿಕೆ ನೀಡಿದನು. ಈ ಸಂದರ್ಭದಲ್ಲಿನ ವಿಡಿಯೋ ಪ್ರಸಾದವಾದ ನಂತರ ಮುರಾದ ಬಾದ ಪೊಲೀಸರು ಟ್ವೀಟ್ ಮೂಲಕ ಮೌಲ್ವಿ ಹುಸೇನನ ವಿರುದ್ಧ ದೂರು ದಾಖಲಿಸಿರುವ ಮಾಹಿತಿ ನೀಡಿದನಂತರ ಮೌಲ್ವಿ ಕ್ಷಮೆ ಯಾಚಿಸಿದನು. ‘ಹಬ್ಬಗಳ ಬಗ್ಗೆ ಹೇಳಿಕೆ ನೀಡಿ ಯಾರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ವಿರಲಿಲ್ಲ’, ಎಂದು ಮೌಲ್ವಿ ಹೇಳಿದನು. ಹೋಳಿಯ ಸಮಯದಲ್ಲಿ ಮಸೀದಿಯ ಮೇಲೆ ಬಣ್ಣ ಬಿದ್ದರೆ ಬಿಗುವಿನ ವಾತಾವರಣದ ವಾಗುವ ಹಿನ್ನೆಲೆಯಲ್ಲಿ ಮಸೀದಿ ಮುಚ್ಚಲಾಗುತ್ತಿದೆ. ಹಾಗೂ ಇನ್ನೊಂದು ಕಡೆಗೆ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಶಾಂತಿ ಸಭೆ ನಡೆಸುತ್ತಿದ್ದಾರೆ.

ಮೌಲ್ವಿ ಸದಾಕತ ಹುಸೇನ್, ಯಾರಿಗೂ ಹೋಳಿಗೆ ಅನಿವಾರ್ಯಗೊಳಿಸಬಾರದು, ಹೀಗೆ ಮಾಡಿದಲ್ಲಿ ಮತ್ತೆ ಗದ್ದಲ ಆಗುವ ಸಾಧ್ಯತೆ ಇದೆ. ಈ ಹಿಂದೆ ಎರಡು ಸಾರಿ ಗದ್ದಲ ಆಗಿತ್ತು, ಈಗ ಹಾಗಾದರೇ ಗಲಭೆ ಆಗುವುದು ಎಂದು ನಾನು ಎಚ್ಚರಿಕೆ ನೀಡುತ್ತಿದ್ದೇನೆ, ಆದ್ದರಿಂದ ಸರಕಾರ ಜಾಗೃತವಾಗಿರಬೇಕು ಎಂದು ಹೇಳಿದ.

ಸಂಪಾದಕೀಯ ನಿಲುವು

ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಪೊಲೀಸರ ಸಭೆಯಲ್ಲಿ ಈ ರೀತಿಯ ಬೆದರಿಕೆ ನೀಡುವ ಧೈರ್ಯ ಮಾಡುತ್ತಾರೆ ಮತ್ತು ಭಾಜಪದ ಸರಕಾರ ಇರುವಾಗ ಪೊಲೀಸರು ಅವರನ್ನು ಏಕೆ ಬಂಧಿಸುವುದಿಲ್ಲ, ಇದು ಹಿಂದುಗಳಿಗೆ ಅಪೇಕ್ಷಿತವಾಗಿಲ್ಲ !