ಬ್ರಿಸ್ಬೆನ್ ನ ಲಕ್ಷ್ಮೀನಾರಾಯಣ ದೇವಸ್ಥಾನದ ಮೇಲೆ ಬರೆಯಲಾದ ಪ್ರಧಾನಮಂತ್ರಿ ಮೋದಿ ಅವರ ವಿರುದ್ಧ ಘೋಷಣೆ !

ಆಸ್ಟ್ರೇಲಿಯಾದಲ್ಲಿ ಪುನಃ ಹಿಂದೂ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳಿಂದ ದಾಳಿ

ಬ್ರಿಸ್ಬೇನ್ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದಲ್ಲಿ ನಿರಂತರವಾಗಿ ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿಯ ಘಟನೆ ನಡೆಯುತ್ತಿವೆ. ಇದನ್ನು ನಿಷೇಧಿಸಲು ಆಸ್ಟ್ರೇಲಿಯಾ ಸರಕಾರ ವಿಫಲವಾಗಿದೆ; ಕಾರಣ ಇಲ್ಲಿಯ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಮೇಲೆ ಖಲಿಸ್ತಾನಿವಾದಿಗಳು ದಾಳಿ ನಡೆಸಿ ಪ್ರಧಾನಿ ಮೋದಿಯ ವಿರುದ್ಧ ಘೋಷಣೆಗಳನ್ನು ಬರೆದಿದ್ದಾರೆ. ಕಳೆದ ೨ ತಿಂಗಳಲ್ಲಿ ದೇವಸ್ಥಾನದ ಮೇಲೆ ದಾಳಿಯ 4 ನೇ ಘಟನೆಯಾಗಿದೆ. ಇದರ ಹಿಂದೆ ಫೆಬ್ರವರಿ ೨೧ ರಂದು ರಾತ್ರಿ ಬ್ರಿಸ್ಬೆನ್ ನಲ್ಲಿಯ ಭಾರತೀಯ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದ್ದರು.

ಆಸ್ಟ್ರೇಲಿಯಾದಲ್ಲಿ ಹಿಂದೂ ಧರ್ಮವು ಮೂರನೇ ಅತಿದೊಡ್ಡ ದೊಡ್ಡ ಧರ್ಮ !

೨೦೨೧ ರ ಜನಗಣತಿಯ ಪ್ರಕಾರ ಆಸ್ಟ್ರೇಲಿಯಾದಲ್ಲಿ ೬ ಲಕ್ಷ ೮೪ ಸಾವಿರ ಹಿಂದುಗಳು ವಾಸಿಸುತ್ತಾರೆ. ಅವರು ಅಲ್ಲಿಯ ಜನಸಂಖ್ಯೆಯ ಶೇಕಡ ೨.೭ ರಷ್ಟು ಇದ್ದಾರೆ. ಸಿಖ್ಖರು ಸುಮಾರು 2 ಲಕ್ಷ 9 ಸಾವಿರ ಇದ್ದಾರೆ. ಇದು ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೦.೮ ಆಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನದ ಮೇಲೆ ಖಲಿಸ್ತಾನಿಗಳಿಂದಾಗುವ ದಾಳಿಗಳು ಹಾಗೂ ಹಿಂದೂಗಳ ಮೇಲೆ ನಡೆಯುವ ದಾಳಿ ತಡೆಯುವಲ್ಲಿ ಆಸ್ಟ್ರೇಲಿಯಾದ ಸರಕಾರ ವಿಫಲವಾಗುತ್ತಿರುವುದು ಲಜ್ಜಾಸ್ಪದ ! ಭಾರತ ಸರಕಾರ ಅದಕ್ಕೆ ಈ ವಿಷಯವಾಗಿ ಪ್ರಶ್ನೆ ಕೇಳುವ ಅವಶ್ಯಕತೆ ಇದೆ !