ಪಂಜಾಬದ ಪ್ರತಿಯೊಂದು ಮನೆಯಲ್ಲಿ ಸ್ಪೋಟಕಗಳು ತಯಾರಿಸಲಾಗುತ್ತಿದ್ದು ಅದರ ಸ್ಪೋಟಕದಲ್ಲಿ ಮುಖ್ಯಮಂತ್ರಿ ಮಾನ ಮತ್ತು ಗೃಹ ಸಚಿವ ಅಮೀತ ಶಾಹ ಇವರ ರಾಜಕೀಯ ಹತ್ಯೆ ಆಗಲಿದೆ !

ಖಲಿಸ್ತಾನಿ ಭಯೋತ್ಪಾದಕ ಗುರುಪವಂತಸಿಂಹ ಪನ್ನು ಇವರ ಬೆದರಿಕೆ !

ಲಿಸ್ತಾನಿ ಭಯೋತ್ಪಾದಕ ಗುರುಪವಂತಸಿಂಹ

ನವ ದೆಹಲಿ – ಕೇಂದ್ರ ಮತ್ತು ಪಂಜಾಬ್ ಸರಕಾರವು ಪಂಜಾಬ ರಾಜ್ಯದಲ್ಲಿನ ನೂರಾರು ಮನೆಗಳಿಗೆ ಪೊಲೀಸರನ್ನು ಕಳುಹಿಸಿದ್ದರು. ಜನರಿಗೆ ಕಿರುಕುಳ ಮತ್ತು ಮಹಿಳೆಯರ ಮಾನಭಂಗ ಮಾಡಿದ್ದಾರೆ. ಪಂಜಾಬನ ಪ್ರತಿಯೊಂದು ಮನೆಯಲ್ಲಿ ಸ್ಪೋಟಕಗಳು ತಯಾರಾಗುತ್ತಿವೆ. ಜನರಿಗೆ ಯಾವಾಗ ಬೇಕು ಅವಾಗಲೇ ಇದರ ಸ್ಫೋಟ ಆಗುವುದು. ಇದರಲ್ಲಿ ಕೇಂದ್ರ ಗೃಹ ಸಚಿವ ಶಾಹ ಮತ್ತು ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ರಾಜಕೀಯ ಮೃತ್ಯು ಆಗುವುದು, ಎಂದು ‘ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತಸಿಂಹ ಪನ್ನು ಇವನು ಬೆದರಿಕೆ ನೀಡಿದನು. ಆತ ಮಾರ್ಚ್ ೪ ರಂದು ಬೆಳಿಗ್ಗೆ ಪಂಜಾಬ್ ಮತ್ತು ಹರಿಯಾಣದ ಶಂಭೂ ಗಡಿಯಲ್ಲಿ ಖಲಿಸ್ತಾನಿಗಳ ಬೆಂಬಲಿಗರೊಂದಿಗೆ ‘ಜಿ ೨೦’ ದೇಶಗಳ ಪ್ರತಿನಿಧಿಗೆ ಖಲಿಸ್ತಾನದಲ್ಲಿ ಸ್ವಾಗತ’, ಎಂದು ಫಲಕಗಳು ಹಾಕಿದ್ದಾರೆ. ಈ ಫಲಕಗಳ ಕುರಿತು ಪನ್ನು ಇವರು, ಶಂಭೂ ಗಡಿಯಲ್ಲಿ ಬರೆದಿರುವ ಘೋಷಣೆ ಇದು ಭಾರತಕ್ಕೆ ಸಂದೇಶವಾಗಿದೆ. ಈಗ ಪಂಜಾಬ್ ಮತ್ತು ಹರಿಯಾಣ ಭಾರತದ ಭಾಗವಾಗಿರದೇ ಅದು ಖಲಿಸ್ತಾನವಾಗಿದೆ ಎಂದು ಹೇಳಿದನು.

೧. ಪನ್ನು ಇವನು ಪಂಜಾಬನ ಯುವಕರಿಗೆ ಮಾರ್ಚ್ ೧೫ ಮತ್ತು ೧೬ ರಂದು ‘ಜಿ ೨೦’ ಗಾಗಿ ಬರುವ ಪ್ರತಿನಿಧಿಗಳಿಗೆ ಖಲಿಸ್ತಾನದ ಸಂದೇಶ ನೀಡುವುದಕ್ಕಾಗಿ ಒಟ್ಟಾಗಿ ಸೇರಲು ಕರೆ ನೀಡಿದ್ದಾನೆ.

೨. ಪನ್ನುವಿನ ಬೆದರಿಕೆಯ ಮೊದಲೇ ಪಂಜಾಬನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಭಗವಂತ ಮಾನ ಇವರು ಈ ಮೊದಲೇ ಗೃಹಸಚಿವ ಅಮಿತ ಶಾಹ ಇವರನ್ನು ಭೇಟಿ ಮಾಡಿದ್ದರು. ಅದರ ನಂತರ ಮಾರ್ಚ್ ೧೫ ರಿಂದ ೧೭ ರ ವರೆಗೆ ಪಂಜಾಬನಲ್ಲಿ ಭದ್ರತೆಗಾಗಿ ಅಮೃತಸರದಲ್ಲಿ ೫೦ ಕೇಂದ್ರ ಪೊಲೀಸ ಪಡೆಗಳನ್ನು ನೇಮಿಸಲಾಗಿದೆ.

ಸಂಪಾದಕೀಯ ನಿಲುವು

ಖಲಿಸ್ತಾನಿಯರ ದೇಶದ್ರೋಹದ ಚಳವಳಿ ಈಗ ಹತ್ತಿಕ್ಕುವ ಸಮಯ ಬಂದಿದೆ, ಇದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು !