ಭಾಗ್ಯನಗರದಲ್ಲಿ (ತೆಲಂಗಾಣ) ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಯುವಕನನ್ನು ಹುಡುಗಿಯ ಸಹೋದರರಿಂದ ಹತ್ಯೆ !

ಭಾಗ್ಯನಗರ (ತೇಲಂಗಾಣಾ) – ಇಲ್ಲಿ ಮುಸಲ್ಮಾನ ಯುವತಿಯನ್ನು ವಿವಾಹವಾದ ಹರೀಶ ಹೆಸರಿನ ಯುವಕನನ್ನು ಯುವತಿಯ ಸಹೋದರರು ದೇವಸ್ಥಾನದ ಹತ್ತಿರ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ 10 ದಿನಗಳಿಂದ ಹರೀಶ ನಾಪತ್ತೆಯಾಗಿದ್ದನು. ಪೊಲೀಸರು ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆದಿದೆ.

1. ದೇವರಕೊಂಡಾದಲ್ಲಿ ವಾಸಿಸುವ ಹರೀಶನು 7 ತಿಂಗಳ ಹಿಂದೆ ಭಾಗ್ಯನಗರದ ಎಲ್ಲಾರೆಡ್ಡಿಗುಡಾ ಪ್ರದೇಶದಲ್ಲಿ ವಾಸಿಸಲು ಬಂದಿದ್ದನು. ಅಲ್ಲಿ ಅವನಿಗೆ ಮುಸಲ್ಮಾನ ಯುವತಿಯ ಪರಿಚಯವಾಗಿತ್ತು. ಅವರಲ್ಲಿ ಪ್ರೀತಿ ನಿರ್ಮಾಣವಾಗಿತ್ತು; ಆದರೆ ಯುವತಿಯ ಕುಟುಂಬದವರಿಗೆ ಅದು ಒಪ್ಪಿಗೆಯಿರಲಿಲ್ಲ. ಯುವತಿಯ ಸಹೋದರರು ಹರೀಶನನ್ನು ಅವಳಿಂದ ದೂರವಿರುವಂತೆ ಹೇಳಿದ್ದರು ಮತ್ತು ಅವನ ಮೇಲೆ ಹಲ್ಲೆ ಮಾಡಿದ್ದರು.

2. ತದನಂತರವೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು. 10 ದಿನಗಳ ಹಿಂದೆ ಅವರು ಕದ್ದುಮುಚ್ಚಿ ವಿವಾಹ ಮಾಡಿಕೊಂಡರು; ಆದರೆ ಅವರು ಪ್ರತ್ಯೇಕವಾಗಿಯೇ ಇರುತ್ತಿದ್ದರು. ಹರೀಶನ ಕುಟುಂಬದವರಿಗೆ ‘ಅವನು ಎಲ್ಲಿ ವಾಸಿಸುತ್ತಿದ್ದಾನೆ ?’ ಎನ್ನುವುದು ತಿಳಿದಿರಲಿಲ್ಲ. ಇನ್ನೊಂದೆಡೆ ಮುಸಲ್ಮಾನ ಯುವತಿಯೂ ನಾಪತ್ತೆಯಾಗಿದ್ದರಿಂದ ಅವಳ ಸಹೋದರರು ಹುಡುಕುತ್ತಿದ್ದರು. ಅವರು ಹರೀಶನ ಸ್ನೇಹಿತ ಶಿವನನ್ನು ಅಪಹರಿಸಿ ಅವನಿಂದ ಹರೀಶನ ಮಾಹಿತಿಯನ್ನು ಪಡೆದುಕೊಂಡರು.

3. ಯುವತಿಯ ಸಹೋದರರಿಗೆ ದುಲಪಲ್ಲಿ ಪ್ರದೇಶದಲ್ಲಿ ಹರೀಶ ಇದ್ದಾನೆಂದು ತಿಳಿದಾಗ ಅವನನ್ನು ಭೇಟಿಯಾಗಲು ಹೋದನು. ಅವನನ್ನು ಅಲ್ಲಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಭೇಟಿಯಾದಾಗ ಯುವತಿಯ ಸಹೋದರರು ಹರೀಶನನ್ನು ಚೂರಿಯಿಂದ ಹಲ್ಲೆ ಮಾಡುತ್ತಾ ಇರಿದನು. ಆ ಸಮಯದಲ್ಲಿ ಯುವತಿಯೂ ಅಲ್ಲಿ ಉಪಸ್ಥಿತಳಿದ್ದಳು. ಆಕೆಯ ಸಹೋದರನು ಅವಳನ್ನು ಅಲ್ಲಿಂದ ಕರೆದುಕೊಂಡು ಹೋದನು. ಈ ಪ್ರಕರಣದಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, 5 ಜನರನ್ನು ವಶಕ್ಕೆ ಪಡೆದಿದ್ದಾರೆ.

ಸಂಪಾದಕೀಯ ನಿಲುವು

‘ಲವ್ ಜಿಹಾದ’ ವಿರುದ್ಧ ಹಿಂದೂಗಳು ಧ್ವನಿಯೆತ್ತಿದ ಬಳಿಕ ಅವರಿಗೆ ‘ಪ್ರೀತಿಗೆ ಧರ್ಮ ಇರುವುದಿಲ್ಲ’ ಎಂದು ಹೇಳುವ ಜಾತ್ಯತೀತವಾದಿಗಳು ಮತ್ತು ಸುಧಾರಣಾವಾದಿಗಳು ಇಂತಹ ಘಟನೆಯ ಬಳಿಕ ಮಾತ್ರ ಅಡಗಿ ಕುಳಿತಿರುತ್ತಾರೆ !