ಗಡಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಒಟ್ಟಾಗಿ ಕೆಲಸ ಮಾಡಬೇಕು ! – ಚೀನಾ

ಚೀನಾದ ವಿದೇಶಾಂಗ ಮಂತ್ರಿ ಕಿನ್ ಗಾಂಗರ ಮತ್ತು ಭಾರತದ ವಿದೇಶಾಂಗ ಮಂತ್ರಿಗಳಾದ ಡಾ. ಎಸ್ ಜಯಶಂಕರ

ಬೀಜಿಂಗ (ಚೀನಾ) – ಚೀನಾದ ವಿದೇಶಾಂಗ ಮಂತ್ರಿ ಕಿನ್ ಗಾಂಗರವರು ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧದಲ್ಲಿ ಗಡಿ ಸಮಸ್ಯೆಯನ್ನು ಯೋಗ್ಯ ಸ್ಥಾನದಲ್ಲಿ ಇರಿಸಬೇಕು ಮತ್ತು ಗಡಿಯಲ್ಲಿರುವ ಸ್ಥಿತಿಯನ್ನು ಬಗೆಹರಿಸಲು ಆದಷ್ಟು ಬೇಗ ಒಟ್ಟಾಗಿ ಕೆಲಸ ಮಾಡಬೇಕು, ಎಂದು ಭಾರತದ ವಿದೇಶಾಂಗ ಮಂತ್ರಿಗಳಾದ ಡಾ. ಎಸ್ ಜಯಶಂಕರ ರವರೊಂದಿಗೆ ಮಾತನಾಡುವಾಗ ಹೇಳಿದ್ದಾರೆ. ಕಿನ್ ಗಾಂಗರವರು ಜಿ-೨೦ ದೇಶಗಳ ವಿದೇಶಾಂಗ ಮಂತ್ರಿಗಳ ಸಭೆಗಾಗಿ ಭಾರತಕ್ಕೆ ಬಂದಿದ್ದಾರೆ. ಕಿನರವರು ಲಡಾಖಿನಲ್ಲಿ ಕಳೆದ ೩೪ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಗಡಿ ವಿವಾದ ನಡೆಯುತ್ತಿದೆ ಎಂದೂ ಹೇಳಿದ್ದಾರೆ.