ಇತರ ಖಲಿಸ್ತಾನಿಗಳಿಂದ ಖಾಲಿಸ್ತಾನಿ ಅಮೃತಪಾಲ ಸಿಂಹರ ಮೇಲೆ ದಾಳಿ ನಡೆಸಿ ಪಂಜಾಬನಲ್ಲಿ ಹಿಂಸಾಚಾರ ನಡೆಸುವ ಷಡ್ಯಂತ್ರ !

ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟಾಗಿ ರಾಜ್ಯದಲ್ಲಿನ ಸುರಕ್ಷೆಗಾಗಿ ಕಾರ್ಯ ಮಾಡಲಿದೆ !

ನವದೆಹಲಿ – ಇತರ ಖಲಿಸ್ಥಾನಿಗಳು ಖಲಿಸ್ಥಾನವಾದಿ ವಾರಿಸ ಪಂಜಾಬ ದೇ (ಪಂಜಾಬಿನ ವಾರಸದಾರರು) ಎಂಬ ಸಂಘಟನೆಯ ಪ್ರಮುಖರಾದ ಅಮೃತ ಸಿಂಹರ ಮೇಲೆ ದಾಳಿ ನಡೆಸಿ ಪಂಜಾಬಿನಲ್ಲಿ ಹಿಂಸಾಚಾರ ನಡೆಸುವ ಷಡ್ಯಂತ್ರ ರೂಪಿಸಿದ್ದರು, ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದರ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಜಾಗೃತೆಯಿಂದ ಇರಲು ಆದೇಶಿಸಿದೆ.

೧. ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯ ಆಧಾರದಲ್ಲಿ ನಿಷೇಧಿತ ಖಲಿಸ್ಥಾನಿ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ ಭಾರತದಲ್ಲಿ ನಡೆಯಲಿರುವ ಜಿ-೨೦ ಶಿಖರ ಸಮ್ಮೇಳನದ ಮೊದಲು ರಕ್ತಪಾತ ನಡೆಸುವುದಾಗಿ ಬೆದರಿಕೆ ನೀಡುತ್ತಿದೆ.

೨. ಈ ಹಿನ್ನೆಲೆಯಲ್ಲಿ ಪಂಜಾಬಿನ ಮುಖ್ಯಮಂತ್ರಿ, ಭಗವಂತ ಮಾನ, ಕೇಂದ್ರೀಯ ಗೃಹ ಮಂತ್ರಿ ಅಮಿತ ಶಾಹರವರನ್ನು ದೆಹಲಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಇಬ್ಬರೂ ರಾಜ್ಯದ ಸುರಕ್ಷೆಗಾಗಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿದ್ದಾರೆ.