ರಷ್ಯಾ-ಉಕ್ರೇನ ಯುದ್ಧ ಮುಗಿಸಲು ಭಾರತ ವಿಶೇಷ ಪಾತ್ರವನ್ನು ನಿರ್ವಹಿಸಬೇಕಾಗಿದೆ ! – ಅಮೇರಿಕಾ

ವಾಶಿಂಗ್ಟನ (ಅಮೇರಿಕಾ) – ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಭಾರತ ರಷ್ಯಾ- ಉಕ್ರೇನ ನಡುವಿನ ಯುದ್ಧವನ್ನು ನಿಲ್ಲಿಸಲು ವಿಶೇಷ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಕಾರಣ, ಭಾರತ ರಷ್ಯಾದೊಂದಿಗೆ ಅನೇಕ ವರ್ಷಗಳಿಂದ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಹಾಗೆಯೇ ಭಾರತಕ್ಕೆ ನೈತಿಕವಾಗಿ ಸ್ಪಷ್ಟವಾಗಿ ಮಾತನಾಡುವ ಕ್ಷಮತೆಯಿದೆ, ಅದನ್ನು ನಾವು ಪ್ರಧಾನ ಮಂತ್ರಿ ಮೋದಿಯವರಲ್ಲಿ ನೋಡಿದ್ದೇವೆ ಎಂದು ಅಮೇರಿಕಾವು ಮಂಡಿಸಿದೆ. ಯುದ್ಧವನ್ನು ನಿಲ್ಲಿಸಲು ಉಪಾಯವನ್ನು ಕಂಡುಹಿಡಿಯಲು ಭಾರತದೊಂದಿಗೆ ಕೆಲಸ ಮಾಡುವ ಇಚ್ಛೆಯನ್ನು ಕೂಡ ಅಮೇರಿಕಾ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.

ಭಾರತಕ್ಕೆ ಇಂದಲ್ಲ ನಾಳೆಯಾದರೂ ಉಕ್ರೇನ ಯುದ್ಧದ ಸಂದರ್ಭದಲ್ಲಿ ಒಂದು ದೇಶದ ಪರ ವಹಿಸಬೇಕಾಗಲಿದೆ ! – ಅಮೇರಿಕೆಯ ಸಂಸದ ಮಾರ್ಕ ವಾರ್ನರ

ಭಾರತ ನೈತಿಕ ಮೌಲ್ಯದ ಅಭಿಮಾನ ಹೊಂದಿರುವ ಒಂದು ಶಕ್ತಿಶಾಲಿ ದೇಶವಾಗಿದೆ; ಆದರೆ ಅದು ಇಂದಲ್ಲ ನಾಳೆ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಒಂದು ದೇಶದ ಪರ ವಹಿಸಬೇಕಾಗಲಿದೆಯೆಂದು ಅಮೇರಿಕಾದ ಹಿರಿಯ ಸಂಸದ ಮಾರ್ಕ ವಾರ್ನರ ಹೇಳಿದ್ದಾರೆ. ಅನೇಕ ವರ್ಷಗಳಿಂದ ಅಮೇರಿಕಾ ಮತ್ತು ಭಾರತದ ನಡುವೆ ಒಳ್ಳೆಯ ಸಂಬಂಧಗಳಿಗಾಗಿ ವಾರ್ನರ ಪ್ರಯತ್ನಿಸುತ್ತಿದ್ದಾರೆ.

2 ವರ್ಷಗಳಿಂದ ಭಾರತದಲ್ಲಿ ಅಮೇರಿಕಾದ ರಾಯಭಾರಿ ಇಲ್ಲದಿರುವುದು ನಾಚಿಕೆಗೇಡು !

ಮಾರ್ಕ ವಾರ್ನರ ಮಾತನ್ನು ಮುಂದುವರಿಸುತ್ತಾ, ಕಳೆದ 2 ವರ್ಷಗಳಿಂದ ಭಾರತದಲ್ಲಿ ಅಮೇರಿಕೆಯು ತನ್ನ ರಾಯಭಾರಿಯನ್ನು ನೇಮಿಸಿಲ್ಲ. ಇದು ನಾಚಿಕೆಗೇಡಿನ ವಿಷಯವಾಗಿದೆ. ಈ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿರುವ ಎರಿಕ ಗಾರ್ಸೆಟಿ ಇವರಿಗೆ ಸಂಸದರ ಮತಗಳಿಸಲು ಸಾಧ್ಯವಾಗದಿದ್ದರೆ, ಅವರ ತುಲನೆಯಲ್ಲಿ ಇತರೆ ವ್ಯಕ್ತಿಯ ಉಮೇದುವಾರಿಕೆಯ ಬಗ್ಗೆ ವಿಚಾರ ಮಾಡಬೇಕೆಂದು ವಾರ್ನರ್ ಸೂಚಿಸಿದರು.