ಐ.ಐ.ಟಿ. ಮುಂಬಯಿಯ ವರದಿಯ ಮಾಹಿತಿ
ಮುಂಬಯಿ – ಇಲ್ಲಿಯ ಪ್ರಾಚೀನ ಬಾಬುಲನಾಥ ಶಿವಲಿಂಗದಲ್ಲಿ ಬಿರುಕು ಮೂಡಿದೆ. ಐ.ಐ.ಟಿ. ಮುಂಬಯಿಯ ವರದಿಯಿಂದ ಈ ವಿಷಯ ಬಹಿರಂಗವಾಗಿದೆ. ಇದರಿಂದ ಅಲ್ಲಿ ಭಕ್ತರಿಗೆ ಅಭಿಷೇಕ ಮಾಡುವುದನ್ನು ಆಡಳಿತವರ್ಗವು ನಿರ್ಬಂಧಿಸಿದೆ. (ಭಕ್ತರಿಗೆ ಅಭಿಷೇಕ ಮಾಡಲು ನಿರ್ಬಂಧಿಸುವುದು ಪರ್ಯಾಯವಲ್ಲ, ಅವರಿಗೆ ಅಭಿಷೇಕ ಮಾಡಲು ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಒದಗಿಸುವುದು ಪರ್ಯಾಯವಾಗಿದೆ. ಸರಕಾರಕ್ಕೆ ಅದನ್ನು ಒದಗಿಸುವುದು ಅಡಚಣೆ ಅನಿಸುತ್ತದೆಯೇ ?- ಸಂಪಾದಕರು)
ಕಲಬೆರಕೆ ಬಣ್ಣ, ಗುಲಾಲ, ಭಸ್ಮ, ಕುಂಕುಮ, ಚಂದನ, ಹಾಲು ಅರ್ಪಿಸಿರುವುದರಿಂದ ಶಿವಲಿಂಗಕ್ಕೆ ಬಿರುಕು ಮೂಡಿರುವುದು ಪ್ರಾಥಮಿಕ ಮಾಹಿತಿ ಕಂಡು ಬಂದಿದೆ.
Mumbai’s Babulnath temple limits offerings as 350-year-old shivling weathering https://t.co/Y6h7jnYGoX
— TOI Mumbai (@TOIMumbai) March 1, 2023
1. ಬಾಬುಲನಾಥ ಮಂದಿರದಲ್ಲಿ ಸ್ಥಾಪಿಸಿರುವ ಶಿವಲಿಂಗ ಹನ್ನೆರಡನೇ ಶತಕದ್ದಾಗಿದೆಯೆಂದು ಹೇಳಲಾಗುತ್ತಿದೆ. ಈ ಮಂದಿರ ದಕ್ಷಿಣ ಮುಂಬಯಿಯ ಮಲಬಾರ ಹಿಲ್ ನ ಒಂದು ಸಣ್ಣ ಗುಡ್ಡದ ಮೇಲೆ ಇದೆ. ರಾಜಾ ಭೀಮದೇವ ಇವರು ಈ ಮಂದಿರವನ್ನು ನಿರ್ಮಿಸಿದ್ದರು. ಮಂದಿರವು ಕಾಲಾನುಸಾರ ನೆಲಸಮವಾಗಿದೆ; ಆದರೆ 1780 ರಲ್ಲಿ ಮಂದಿರದ ಕೆಲವು ಅವಶೇಷಗಳು ಕಂಡು ಬಂದಿದ್ದರಿಂದ ಅದರ ಜೀರ್ಣೋದ್ಧಾರ ಮಾಡಲಾಯಿತು.
2. ‘ಶ್ರೀ ಬಾಬುಲನಾಥ ಮಂದಿರ ಧರ್ಮದತ್ತಿ ಸಂಸ್ಥೆ’ಯ ಅಧ್ಯಕ್ಷ ನಿತಿನ ಠಕ್ಕರ ಇವರು ಮಾತನಾಡುತ್ತಾ, ”ಕೊರೊನಾ ಕಾಲದಿಂದ ಮಂದಿರದಲ್ಲಿ ಹಾಲಿನ ಅಭಿಷೇಕವನ್ನು ನಿಲ್ಲಿಸಲಾಗಿದೆ. ಕಳೆದ 8 ರಿಂದ 10 ತಿಂಗಳುಗಳಿಂದ ರಸಾಯನಯುಕ್ತ ಪದಾರ್ಥಗಳೊಂದಿಗೆ ವಿಧಿಗಳನ್ನು ನಡೆಸಿರುವುದರಿಂದ ಶಿವಲಿಂಗ ಹಾಳಾಗುತ್ತಿದೆಯೆಂದು ಮಂದಿರದ ಅರ್ಚಕರಿಗೆ ಗಮನಕ್ಕೆ ಬಂದಿತು. ತದನಂತರ ಮಂದಿರ ಟ್ರಸ್ಟ ಐ.ಐ.ಟಿ. ಬಾಂಬೆಯಿಂದ ಸಮೀಕ್ಷೆ ನಡೆಸುವ ನಿರ್ಣಯವನ್ನು ತೆಗೆದುಕೊಂಡಿತು. ಅವರು ಶಿವಲಿಂಗ ಸಂವರ್ಧನೆಯ ವಿಷಯದಲ್ಲಿ ಸಲಹೆ ನೀಡುವವರಿದ್ದಾರೆ. ಅದರ ವರದಿ ಮಾರ್ಚವರೆಗೆ ಬರಬಹುದು. ಬಾಬುಲನಾಥ ಮಂದಿರದ ಬಗ್ಗೆ ಮುಂಬಯಿ ಜನರಿಗೆ ಶ್ರದ್ಧೆಯಿದೆ. ಶಿವಲಿಂಗದ ವಿಷಯದಲ್ಲಿ ನಾವು ಅತ್ಯಂತ ಸಂವೇದನಾಶೀಲರಾಗಿದ್ದೇವೆ. ಅದನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮ ಕೈಕೊಳ್ಳಲಾಗುವುದು.” ಎಂದು ಹೇಳಿದ್ದಾರೆ.