ತ್ರಿಪುರ ಮತ್ತು ನಾಗಾಲ್ಯಾಂಡನಲ್ಲಿ ಭಾಜಪ ಅಧಿಕಾರ ಉಳಿಸಿಕೊಂಡಿದೆ !

  • ಈಶಾನ್ಯ ಭಾರತದಲ್ಲಿ ೩ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ

  • ಮೇಘಾಲಯದಲ್ಲಿ ತ್ರಿಶಂಕು ಸ್ಥಿತಿ !

ನವ ದೆಹಲಿ – ಈಶಾನ್ಯ ಭಾರತದಲ್ಲಿ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರ ಈ ೩ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆಯು ಮಾರ್ಚ್ ೨ ರಂದು ಸಂಜೆಯ ವರೆಗೆ ನಡೆಯಿತು. ತ್ರಿಪುರ ಮತ್ತು ನಾಗಾಲ್ಯಾಂಡ್ ಇಲ್ಲಿ ಭಾಜಪ ಅಧಿಕಾರ ಉಳಿಸಿಕೊಂಡಿದೆ. ತ್ರಿಪುರದಲ್ಲಿ ಭಾಜಪಾಗೆ ಬಹುಮತ ದೊರೆತರೇ ನಾಗಾಲ್ಯಾಂಡ್ ದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ ಮತ್ತು ಭಾಜಪ ಮೈತ್ರಿ ಸರಕಾರ 19 ಸ್ಥಳಗಳಲ್ಲಿ ಜಯ ಸಾಧಿಸಿದರೇ 17 ಸ್ಥಳಗಳಲ್ಲಿ ಅದು ಮಂಚೂಣಿಯಲ್ಲಿರುವುದರಿಂದ ಅಲ್ಲಿ ಮೈತ್ರಿ ಸರಕಾರ ಬರುವುದು ನಿಶ್ಚಿತವಾಗಿದೆ. ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಎಲ್ಲಕ್ಕಿಂತ ಹೆಚ್ಚು ಸ್ಥಾನಗಳು ಸಿಕ್ಕಿವೆ, ಆದರೂ ಬಹುಮತ ಇಲ್ಲದಿರುವುದರಿಂದ ಅಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ತ್ರಿಪುರದಲ್ಲಿ ಭಾಜಪಗೆ ೩೧ ಸ್ಥಾನ ಸಿಕ್ಕಿ ಬಹುಮತ ದೊರೆತಿದೆ. ಹಾಗೂ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಟಿಪರಾ ಮೋತಾ ಪಾರ್ಟಿ ೧೧ ಸ್ಥಾನದಲ್ಲಿ ಮುಂಚೂಣಿಯಲ್ಲಿದೆ.

ಮೇಘಾಲಯ – ೬೦, ಎನ್‌.ಪಿ.ಪಿ.- ೨೫, ಭಾಜಪ – ೩, ಕಾಂಗ್ರೆಸ್ – ೫, ತೃಣಮೂಲ ಕಾಂಗ್ರೆಸ್ – ೫, ಟಿ.ಪಿ.ಪಿ. – ೬, ಇತರ – ೧೬ ನಾಗಾಲ್ಯಾಂಡ್ – ೬೦, ಭಾಜಪ – ೧೨, ಎನ್.ಡಿ.ಪಿ.ಪಿ. – ೨೫, ಕಾಂಗ್ರೆಸ್ – ೦, ಎನ್.ಪಿ.ಪಿ. – ೫, ಇತರ – ೧೮ ತ್ರಿಪುರ – ೬೦, ಭಾಜಪ – ೩೩, ಟಿಪರಾ ಮೋಥಾ ಪಾರ್ಟಿ – ೧೩, ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ – ೧೧, ಕಾಂಗ್ರೆಸ್ – ೩