ಇದೇ ವರ್ಷದಲ್ಲಿ ಮೂರನೇ ಮಹಾಯುದ್ಧ ! – ಭವಿಷ್ಯಕಾರ ಕ್ರೆಗ ಹೈಮಿಲ್ಟನ್ ಪಾರ್ಕರ್

‘ಆಧುನಿಕ ನಾಸ್ಟ್ರೆಡಮಸ’ ಈ ಹೆಸರಿನಿಂದ ಗುರುತಿಸಲಾದ ಕ್ರೆಗ ಹೈಮಿಲ್ಟನ್ ಪಾರ್ಕರ್

ವಾಷಿಂಗ್ಟನ್ – ೨೦೨೩ ರಲ್ಲಿ ಮೂರನೇ ಮಹಾಯುದ್ಧ ನಡೆಯುವುದು, ಎಂದು ಕ್ರೆಗ ಹೈಮಿಲ್ಟನ್ ಪಾರ್ಕರ್ ಇವರು ಭವಿಷ್ಯ ನುಡಿದಿದ್ದಾರೆ. ೨ ವಿಮಾನಗಳು ಅಥವಾ ೨ ಜಲಾಂತರ್ಗಾಮಿಯಲ್ಲಿ ಡಿಕ್ಕಿ ನಡೆದು ಅದೇ ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಲಿದೆ, ಎಂದು ಕೂಡ ಸ್ಪಷ್ಟಪಡಿಸಿದ್ದಾರೆ. ಕ್ರೆಗ ಹೈಮಿಲ್ಟನ್ ಪಾರ್ಕರ್ ಇವರು ಬ್ರಿಟನ್ನಿನ ಮಹಾರಾಣಿ ಎಲಿಜಾಬೇಥ ದ್ವಿತೀಯ ಇವರ ನಿಧನದ ಬಗ್ಗೆ ನಿಖರ ಭವಿಷ್ಯ ನುಡಿದಿದ್ದರು. ಈ ಭವಿಷ್ಯವಾಣಿಯ ನಂತರ ಅವರನ್ನು ‘ಆಧುನಿಕ ನಾಸ್ಟ್ರೆಡಮಸ’ ಈ ಹೆಸರಿನಿಂದ ಗುರುತಿಸುತ್ತಿದ್ದಾರೆ. ಮೂಲ ನಾಸ್ಟ್ರೆಡಮಸ ಇವರು ಕೂಡ ೨೦೨೩ ಈ ವರ್ಷ ಜಗತ್ತಿಗಾಗಿ ಮಹತ್ವದ್ದಾಗಿದೆ’, ಎಂದು ಹೇಳಿದ್ದರು.

ಚೀನಾ ಮತ್ತು ತೈವಾನ್ ನಡೆವೆ ಘರ್ಷಣೆ !

ಕ್ರೆಗ ಹೈಮಿಲ್ಟನ್ ಪಾರ್ಕರ್ ಮಾತನ್ನು ಮುಂದುವರೆಸುತ್ತಾ, ಮೂರನೇ ಮಹಾಯುದ್ಧವು ರಷ್ಯಾ-ಯುಕ್ರೇನ್ ಅಲ್ಲ, ಅದು ತೈವಾನದಿಂದ ನಡೆಯುವುದು. ತೈವಾನ್ ನಲ್ಲಿ ಒಂದು ಭೀಕರ ವಿಮಾನ ಪತನವಾಗಲಿದೆ ಮತ್ತು ಅದೇ ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತದೆ. ಈ ಯುದ್ಧದ ಗಂಭೀರ ಪರಿಣಾಮ ಆಗುವುದು. ಚೀನಾ ಅನೇಕ ಭಾಗಗಳಲ್ಲಿ ವಿಭಜನೆ ಆಗುವುದು.

ಈ ಹಿಂದೆ ಜಗತ್ತಿನ ೧೯೧೪ ರಿಂದ ೧೯೧೯ ರ ಕಾಲಾವಧಿಯಲ್ಲಿ ಮೊದಲ ಮಹಾಯುದ್ಧ ಹಾಗೂ ೧೯೩೬ ರಿಂದ ೧೯೪೫ ರ ಕಾಲಾವಧಿಯಲ್ಲಿ ಎರಡನೆಯ ಮಹಾಯುದ್ಧ ನಡೆದಿತ್ತು.