ಭೋಪಾಲನಲ್ಲಿ ೨ ಮಹಿಳಾ ಶಿಕ್ಷಕರಿಂದ ತರಗತಿಲ್ಲಿ ನಮಾಜ್ !

ಭೋಪಾಲ – ಇಲ್ಲಿಯ ರಾಶಿದಿಯಾ ಶಾಲೆಯಲ್ಲಿ ೨ ಮಹಿಳಾ  ಶಿಕ್ಷಕರು ವಿದ್ಯಾರ್ಥಿಗಳನ್ನು ತರಗಿತಿಯ ಹೊರಗೆ ಕಳುಹಿಸಿ ತರಗತಿಯಲ್ಲಿ ನಮಾಜ್ ಮಾಡಿದರು. ಫೆಬ್ರವರಿ ೨೮ ರಂದು ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಪ್ರತಿ ಶುಕ್ರವಾರ ವಿದ್ಯಾರ್ಥಿಗಳು ಕೂಡ ನಮಾಜ್ ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದಿದೆ; ಆದರೆ ಯಾರು ಮಾತನಾಡುವುದಿಲ್ಲ, ಎಂದು ಇತರ ಕೆಲವು ಶಿಕ್ಷಕರು ಮಾಹಿತಿ ನೀಡಿದರು. ಆದರೂ ಈ ಶಾಲೆಯ ಮುಖ್ಯೋಪಾಧ್ಯಾಯರು ಕೆ.ಡಿ. ಶ್ರೀವಾಸ್ತವ ಇವರಿಗೆ ಈ ಬಗ್ಗೆ ಕೇಳಿದಾಗ ಅವರು, ‘ನನಗೆ ಇದರ ಬಗ್ಗೆ ಏನು ಗೊತ್ತಿಲ್ಲ ಮತ್ತು ಈ ರೀತಿ ನಾನು ಎಂದು ಶಾಲೆಯಲ್ಲಿ ನೋಡಿಲ್ಲ’, ಎಂದು ಉತ್ತರ ನೀಡಿದರು.

ಶಾಲೆಗೆ ನೋಟಿಸ್ ಕಳಿಸುವೆವು ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ತರಗತಿಯಲ್ಲಿ ಧಾರ್ಮಿಕ ಕಾರ್ಯ ನಡೆಸುವುದು, ಇದು ಕಾನೂನಿನ ದೃಷ್ಟಿಯಲ್ಲಿ ತಪ್ಪಾಗಿದೆ. ಹೀಗೆ ನಡೆಯುತ್ತಿದ್ದರೆ, ನಾವು ಹಸ್ತಕ್ಷೇಪ ಮಾಡಿ ಸಂಬಂಧಪಟ್ಟ ಶಾಲೆಗೆ ನೋಟಿಸ್ ಕಳಿಸುವುವೇವು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಪ್ರಿಯಂಕ ಕಾನೂನಗೋ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

  • ತರಗತಿಯಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆಗರ ಅವಕಾಶ ಕೊಡದಿರುವ ಪ್ರಗತಿ(ಅಧೋಗತಿ)ಪರರು, ತಥಾ ಕಥಿತ ನಾಸ್ತಿಕರು, ಕಮ್ಯುನಿಸ್ಟರು ಈಗ ಈ ವಿಷಯದ ಬಗ್ಗೆ ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !
  • ಈ ರೀತಿ ಹಿಂದೂ ಶಿಕ್ಷಕರಿಂದ ತರಗತಿಯಲ್ಲಿ ಭಗವದ್ಗೀತೆ ಕಲಿಸಿದ್ದರೆ, ಆಗ ತಥಾ ಕಥಿತ ನಾಸ್ತಿಕರು ‘ಶಿಕ್ಷಣ ವ್ಯವಸ್ಥೆಯಲ್ಲಿ ಕೇಸರಿ ಕರಣವಾಗುತ್ತಿದೆ’ ಎಂದು ಬೊಬ್ಬೆ ಹಾಕುತ್ತಿದ್ದರು !