ಮೊಬೈಲನ್ನು ಚಾರ್ಜ್ ಗೆ ಹಾಕಿ ಮಾತನಾಡುವಾಗ ಸ್ಫೋಟ ವೃದ್ಧನ ಮೃತ್ಯು

ಉಜ್ಜೈನ್ (ಮಧ್ಯಪ್ರದೇಶ) – ಇಲ್ಲಿಯ ಬಡನಗರದಲ್ಲಿ ಮೊಬೈಲ ಚಾರ್ಜ್ ಗೆ ಹಾಕಿ ಮಾತನಾಡುತ್ತಿರುವಾಗ ಸ್ಫೋಟ ಆಗಿದೆ. ಇದರಲ್ಲಿ ೬೮ ವಯಸ್ಸಿನ ದಯಾರಾಮ್ ಬಾರೋಡ ಈ ವೃದ್ಧರು ಸಾವನ್ನಪ್ಪಿದ್ದಾರೆ. ಈ ಸ್ಫೋಟ ಎಷ್ಟು ಭಯಾನಕವಾಗಿತ್ತು ಎಂದರೆ, ಬಾರೋಡ್ ಇವರ ತಲೆಯಿಂದ ಎದೆಯ ಭಾಗದವರೆಗೆ ಛಿದ್ರ ಛಿದ್ರವಾಗಿದೆ.

ಮೊಬೈಲ ಸ್ಪೋಟ ಆಗಬಾರದೆಂದರೆ; ಇದನ್ನು ಮಾಡಿರಿ !

೧. ಸ್ಮಾರ್ಟ್ ಫೋನ್ ನಲ್ಲಿ ಬಹಳಷ್ಟು ಆಪ್ ಗಳು ಮತ್ತು ವಿಷಯಗಳು ಇದ್ದರೆ, ಆಗ ಸಂಚಾರವಾಣಿ ಬೇಗನೆ ಬಿಸಿಯಾಗುತ್ತದೆ. ಆದ್ದರಿಂದ ಮೆಮೊರಿ ಶೇಕಡ ೭೫ ರಿಂದ ೮೦ ರಷ್ಟು ಖಾಲಿ ಬಿಡಬೇಕು.

೨. ಖರೀದಿಸುವಾಗ ಮೊಬೈಲ ಜೊತೆಗೆ ನೀಡಿರುವ ಚಾರ್ಜರ್ ಒರಿಜಿನಲ್ ಇರುತ್ತದೆ. ನಕಲಿ ಚಾರ್ಜರ್ ನಿಂದ ಬ್ಯಾಟರಿ ಹಾಳಾಗಿ ಅದು ಬೇಗನೆ ಬಿಸಿಯಾಗುತ್ತದೆ.

೩. ಮೊಬೈಲ ಚಾರ್ಜ್ ಗೆ ಹಾಕಿರುವಾಗ ಗೇಮ್ ಆಡುವುದು ಅಥವಾ ಮಾತನಾಡುವುದು ಮಾಡಬಾರದು.

ಈ ಕುರಿತು ವಿಜ್ಞಾನಿ ವಿಕೀ ಅದ್ದಾನಿ ಇವರು, ಚಾರ್ಜಿಂಗ್ ಸಮಯದಲ್ಲಿ ಮೊಬೈಲನಲ್ಲಿ ರಾಸಾಯನಿಕ ಬದಲಾವಣೆಯಾಗುತ್ತದೆ ಮತ್ತು ಈ ಸಮಯದಲ್ಲಿ ಮಾತನಾಡುವುದು ಅಥವಾ ಗೇಮ್ ಆಡುವುದರಿಂದ ಬ್ಯಾಟರಿ ಬಿಸಿಯಾಗಿ ಸ್ಫೋಟವಾಗುತ್ತದೆ ಎಂದು ಹೇಳಿದರು.