ನವ ದೆಹಲಿ – ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರದ ‘ಅಗ್ನಿಪಥ’ ಈ ಸೈನ್ಯದಲ್ಲಿ ಸೇರುವ ಬಗೆಗಿನ ಯೋಜನೆಗೆ ಸವಾಲು ನೀಡಿರುವ ಎಲ್ಲಾ ಮನವಿಗಳು ತಿರಸ್ಕರಿಸಿದೆ. ‘ಈ ಯೋಜನೆ ತರುವ ಉದ್ದೇಶ ದೇಶದ ಸೈನ್ಯವನ್ನು ಹೆಚ್ಚೆಚ್ಚು ಸಕ್ಷಮಗೊಳಿಸುವುದು ಮತ್ತು ಅದು ದೇಶದ ಹಿತಕ್ಕಾಗಿ ಇರುವುದು’, ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮನವಿ ತಿರಸ್ಕರಿಸುವಾಗ ಹೇಳಿದೆ. ಈ ಯೋಜನೆಗೆ ಸವಾಲೊಡ್ಡುವ ಮನವಿಗಳು ದೇಶದ ವಿವಿಧ ಪ್ರದೇಶದಲ್ಲಿ ದಾಖಲಿಸಲಾಗಿತ್ತು. ಅದರ ನಂತರ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪಿತು; ಆದರೆ ಸರ್ವೋಚ್ಚ ನ್ಯಾಯಾಲಯದಿಂದ ಈ ಎಲ್ಲಾ ಪ್ರಕರಣದ ಆಲಿಕೆಯನ್ನು ದೆಹಲಿ ಉಚ್ಚ ನ್ಯಾಯಾಲಯದ ಬಳಿ ವರ್ಗಾಯಿಸಿತ್ತು.
‘Find no reason to interfere’: #Delhi HC dismisses pleas challenging Agnipath scheme.https://t.co/LtgjXiGLUB
— TIMES NOW (@TimesNow) February 27, 2023