ತ್ರಿಶೂರ್ (ಕೇರಳ) ಇಲ್ಲಿಯ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಾಗಿ ಯಾಂತ್ರಿಕ ಆನೆಗಳ ಉಪಯೋಗ ಮಾಡಲಾಗುವುದು !

ತ್ರಿಶೂರ್ (ಕೇರಳ) – ಇಲ್ಲಿಯ ಇರಿಂಜಾದಾಪಲ್ಲಿ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಈಗ ಧಾರ್ಮಿಕ ವಿಧಿಗಳಿಗಾಗಿ ಆನೆಯ ಬದಲು ಯಾಂತ್ರಿಕ ಆನೆ ಉಪಯೋಗಿಸುವರು. ಈ ಆನೆಯ ಎತ್ತರ ೧೦.೩೦ ಅಡಿಯಾಗಿದ್ದು. ಅದರ ಒಟ್ಟು ತೂಕ ೮೦೦ ಕಿಲೋ ಇರಲಿದೆ. ಇದರ ಮೇಲೆ ೪ ಜನರು ಕುಳಿತುಕೊಳ್ಳಬಹುದು. ಈ ಆನೆಯ ಸೊಂಡಿಲು, ತಲೆ, ಕಣ್ಣು ಮತ್ತು ಕಿವಿ ಇವು ವಿದ್ಯುತ್ ಮೂಲಕ ನಡೆಯುತ್ತದೆ.

೧. ಕೇರಳದ ದೇವಸ್ಥಾನದಲ್ಲಿ ಮಾಡಲಾಗುವ ಧಾರ್ಮಿಕ ವಿಧಿಯಲ್ಲಿ ಆನೆಗೆ ಬಹಳ ಮಹತ್ವವಿದೆ. ಕೆಲವು ಸಾರಿ ಈ ಆನೆ ವಿಧಿಯ ಸಮಯದಲ್ಲಿ ಅಥವಾ ಅದಕ್ಕೆ ಮೊದಲು ಆಕ್ರೋಶಗೊಳ್ಳುತ್ತದೆ. ಆದ್ದರಿಂದ ಅನೇಕ ಸಾರಿ ಜನರು ಜೀವ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯು ಧಾರ್ಮಿಕ ವಿಧಿಗಾಗಿ ಆನೆಯ ಉಪಯೋಗ ಮಾಡದಿರಲು ತೀರ್ಮಾನಿಸಿತು. ಇದರ ಬಗ್ಗೆ ಪ್ರಾಣಿಗಳ ಸಂರಕ್ಷಣೆಗಾಗಿ ಕೆಲಸ ಮಾಡುವ ‘ಪೇಟಾ ಇಂಡಿಯಾ’ ಈ ಸಂಸ್ಥೆಯಿಂದ ಯಾಂತ್ರಿಕ ಆನೆ ದೇವಸ್ಥಾನದಲ್ಲಿಡುವ ನಿರ್ಣಯ ತೆಗೆದುಕೊಂಡಿತು.

೨. ‘ಪೇಟ ಇಂಡಿಯಾ’, ಬಂಧಿಸಿರುವುದರಿಂದ ಆನೆಗಳು ಬಹಳ ಬಾರಿ ಸಿಟ್ಟಾಗುತ್ತದೆ. ಯಾವಾಗ ಅದರ ಇಚ್ಛೆಯ ವಿರುದ್ಧ ಕಾರ್ಯ ಮಾಡುತ್ತೇವೆ, ಆಗ ಅದು ಕೋಪಗೊಳ್ಳುತ್ತದೆ ಮತ್ತು ಅದರಿಂದ ಜನರಿಗೆ ಜೀವ ಕಳೆದುಕೊಳ್ಳಬೇಕಾಗುತ್ತದೆ, ಎಂದು ಹೇಳಿದೆ.

೩. ‘ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್’ ನ ವರದಿಯ ಪ್ರಕಾರ ಕೇರಳದಲ್ಲಿ ಕಳೆದ ೧೫ ವರ್ಷಗಳಲ್ಲಿ ಆನೆಯ ದಾಳಿಯಿಂದ ೫೨೬ ಜನರು ಸಾವನ್ನಪ್ಪಿದ್ದಾರೆ. ಚಿಕ್ಕುಟ್ಟುಕವು ರಾಮಚಂದ್ರನ್ ಎಂಬ ಆನೆ ಕೇರಳದ ಹಬ್ಬಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಈ ಆನೆ ಇಂದ ೬ ಮಾವುತ, ೪ ಮಹಿಳೆ ಮತ್ತು ಇತರೆ ೩ ಆನೆಗಳ ಸಹಿತ ೧೩ ಜನರನ್ನು ಬಲಿ ತೆಗೆದುಕೊಂಡಿದೆ.