ನವಹಿಂದುತ್ವವಾದಿಗಳಿಂದ ಎಚ್ಚರ !

ವೇದಮೂರ್ತಿ ಭೂಷಣ ಜೋಶಿ

೧. ನವಹಿಂದುತ್ವವಾದಿಗಳ ಬೌದ್ಧಿಕ ದಿವಾಳಿತನ ತೋರಿಸುವ ಹೇಳಿಕೆಗಳು

ಸದ್ಯ ಸಾಮ್ಯವಾದಿ ಮಾಸ್ತರರಿಂದ ಪಳಗಿದ ಅನೇಕ ಬೌದ್ಧಿಕ ದಿವಾಳಿಕೋರರು ಹೊಸ ಹೊಸ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ.

ಅ. ಕುಂಕುಮ ಅಥವಾ ತಿಲಕ ಹಚ್ಚುವುದೆಂದರೆ ಹಿಂದುತ್ವವಲ್ಲ.

ಆ. ಜುಟ್ಟು ಬಿಡುವುದು, ಜನಿವಾರ ಹಾಕುವುದು ಎಂದರೆ ಹಿಂದುತ್ವವಲ್ಲ.

ಇ. ಉಪಾಸನೆ ಮಾಡುವುದೆಂದರೆ ಹಿಂದುತ್ವವಲ್ಲ.

ಈ. ನಾಮಸ್ಮರಣೆ, ಜಪ, ತಪ, ಯಜ್ಞಯಾಗ ಇವು ಹಿಂದುತ್ವವಲ್ಲ.

ಉ. ಧರ್ಮಕಾರ್ಯಗಳಲ್ಲಿ ಧೋತಿ ಉಡುವುದು, ಮಡಿ ಉಟ್ಟುಕೊಳ್ಳುವುದು ಎಂದರೆ ಹಿಂದುತ್ವವಲ್ಲ.

ಊ. ಗೋಮಾತೆ, ಭೂಮಾತೆ ಇವರ ರಕ್ಷಣೆ ಬಗ್ಗೆ ಆತ್ಮೀಯತೆಯಿಂದ ಉಗ್ರ ವಿಚಾರ ಮಂಡಿಸುವುದೆಂದರೆ ಹಿಂದುತ್ವವಲ್ಲ.

ಎ. ಸಂತಸಜ್ಜನ, ಋಷಿಮುನಿಗಳ ಮಾರ್ಗ ಅನುಸರಿಸುವುದೆಂದರೆ ಹಿಂದುತ್ವವಲ್ಲ.

ಏ. ದೇವಸ್ಥಾನಕ್ಕೆ ಹೋಗುವುದೆಂದರೆ ಹಿಂದುತ್ವವಲ್ಲ.

‘ಹಿಂದುತ್ವವು ಜೀವನಶೈಲಿಯಾಗಿದೆ ಎಂಬುದು ಇವರ ಹೇಳಿಕೆಯಾಗಿದೆ. ಋಷಿಮುನಿಗಳು ಮತ್ತು ಸಾಧುಸಂತರು ನೀಡಿದ ಸದಾಚರಣೆಯ ಜೀವನಶೈಲಿ ಬಿಟ್ಟು ಇನ್ನೇನು ಉಳಿದಿದೆ ? ಉದಾಹರಣೆಗೆ ಗೃಹಸ್ಥಾಶ್ರಮಿ ಮನುಷ್ಯನು ತಾನು ಭೋಜನ ಮಾಡುವ ಮೊದಲು ದೇವರಿಗೆ ನೈವೇದ್ಯ, ವೈಶ್ವದೇವ, ಕಾಗೆಗುಬ್ಬಿಗಳಿಗೆ ಕಾಕಬಲಿ, ದನಕರುಗಳಿಗೆ ಗೋಗ್ರಾಸ, ಅತಿಥಿಗಳಿಗೆ ನಾಲ್ಕು ತುತ್ತು ಬದಿಗಿಟ್ಟು, ಮೊದಲು ಪೋಷಕವರ್ಗ (ತಂದೆ, ತಾಯಿ, ಮನೆಕೆಲಸದವರು, ಕುಟುಂಬದವರು, ಆಶ್ರಿತರು) ಇವರ ಭೋಜನದ ವ್ಯವಸ್ಥೆ ಮಾಡಿ ನಂತರ ಊಟ ಮಾಡಬೇಕಾಗಿರುತ್ತದೆ. ಇದು ಧರ್ಮಶಾಸ್ತ್ರದ ಪದ್ಧತಿಯಾಗಿದೆ. ಇದರಲ್ಲಿ ಸರ್ವಸಮಾವೇಶಕತೆಯಿದೆ. ಶಾಸ್ತ್ರಕಾರರು ಕೊಟ್ಟ ಈ ಸರ್ವಸಮಾವೇಶಕತೆಯನ್ನು ಒಪ್ಪದಿದ್ದರೆ, ಮತ್ತೇನು ಒಪ್ಪುವಿರಿ?

೨. ತಮ್ಮತನವನ್ನು ಮರೆತ ಈಗಿನ ನವಹಿಂದುತ್ವವಾದಿಗಳು

ನಿಮ್ಮ ‘ತಮ್ಮತನ’ದ ಗುರುತು ಏನಾದರೂ ಗುಣವಿಶೇಷಗಳಿಂದ ಕೂಡಿರುತ್ತದೆ. ಆ ಗುಣವಿಶೇಷ, ಲಕ್ಷಣಗಳನ್ನು ದೂರಗೊಳಿಸುವುದೆಂದರೆ ‘ತಮ್ಮತನದ ಗುರುತು, ತಮ್ಮತನವನ್ನು ಕಳೆದುಕೊಂಡಂತಾಗಿದೆ. ಡಾಕ್ಟರ್ ಎಂದ ಕೂಡಲೇ ಕಣ್ಣೆದುರು ಬಿಳಿ ಕೋಟನ್ನು ಧರಿಸಿದ ವ್ಯಕ್ತಿ ಬರುತ್ತಾನೆ. ಖಾಕಿ ಸಮವಸ್ತ್ರ, ತಲೆಯ ಮೇಲೆ ಟೋಪಿ, ಕೈಯಲ್ಲಿ ಲಾಠಿ ಇದು ಯಾರ ವರ್ಣನೆ ಎಂದರೆ ಕೂಡಲೇ ‘ಪೊಲೀಸ್’ ಎಂಬ ಉತ್ತರ ಬರುತ್ತದೆ. ‘ಕಿವಿ ಚುಚ್ಚಿರುವ, ಹಣೆಯಲ್ಲಿ ಗಂಧ ಅಥವಾ ಕುಂಕುಮ ತಿಲಕ ಇರುವ ಮನುಷ್ಯನು ಬಾಹ್ಯ ಲಕ್ಷಣಗಳಿಂದ ಹಿಂದೂ ಆಗಿದ್ದಾನೆ’ ಎಂಬುದು ಗಮನಕ್ಕೆ ಬರುತ್ತದೆ.

ಯವನರು (ಮುಸಲ್ಮಾನ) ದೇವಸ್ಥಾನಕ್ಕೆ ಹೋಗುವುದಿಲ್ಲ ಮತ್ತು ನವಹಿಂದುತ್ವವಾದಿಗಳೂ ‘ದೇವಸ್ಥಾನಕ್ಕೆ ಹೋಗುವುದು ಎಂದರೆ ಹಿಂದುತ್ವವಲ್ಲ’ ಎಂದು ದೇವಸ್ಥಾನಕ್ಕೆ ಹೋಗುವುದಿಲ್ಲ. ಯವನರು ಹಣೆಗೆ ತಿಲಕ ಹಚ್ಚಿಕೊಳ್ಳುವುದಿಲ್ಲ, ಹಾಗೆಯೇ ನವಹಿಂದುತ್ವವಾದಿಗಳೂ ‘ತಿಲಕ ಹಚ್ಚಿಕೊಳ್ಳುವುದು ಎಂದರೆ ಹಿಂದುತ್ವವಲ್ಲ’ ಎಂದು ಅವರೂ ಹಚ್ಚಿಕೊಳ್ಳುವುದಿಲ್ಲ. ಯವನರು ಜಪ, ತಪ, ನಾಮಸ್ಮರಣೆ ಯಜ್ಞಯಾಗ ಮಾಡುವುದಿಲ್ಲ. ನವಹಿಂದುತ್ವವಾದಿಗಳೂ ‘ಇದು ಹಿಂದುತ್ವವಲ್ಲ’ ಎಂದು ಮಾಡುವುದಿಲ್ಲ. ಯವನರು ದನವನ್ನು ಕಡಿಯುತ್ತಾರೆ ಮತ್ತು ನವಹಿಂದುತ್ವವಾದಿಗಳು ಉಪಯುಕ್ತ ಪ್ರಾಣಿಯೆಂದು ತಿಳಿದುಕೊಳ್ಳುತ್ತಾರೆ. ನೀವು ಒಂದು ಸಲ ‘ತಮ್ಮತನ’ವನ್ನು ಮರೆತರೆ, ಈ ಹೊಸ ಖಾಲಿ ಸ್ಲೇಟಿನ ಮೇಲೆ ರೆಹಮಾನ್ ಅಥವಾ ಸುಲೇಮಾನ್ ಎಂದು ಬರೆದರೂ ಏನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ನೀವು ತಮ್ಮತನವನ್ನು ಮರೆತಿರುತ್ತೀರಿ. ನಂತರ ಮುಂದೆ ‘ಇದರಿಂದ ವ್ಯತ್ಯಾಸವೇನು ?’ ಎಂದು ಹೇಳುತ್ತಾ ಹೇಳುತ್ತಾ ನೀವು ಸಲೀಸಾಗಿ ಅವರ ಆಚರಣೆಗಳನ್ನು ಸ್ವೀಕರಿಸಿರುವುದು ನಿಮ್ಮ ಗಮನಕ್ಕೇ ಬರುವುದಿಲ್ಲ.

೩. ಋಷಿಮುನಿಗಳು ಮತ್ತು ಸಂತಸಜ್ಜನರ ತತ್ತ್ವಜ್ಞಾನಕ್ಕೆ ದೇವತೆಗಳ ಆಶೀರ್ವಾದವಿರುವುದು

ಅವರು (ಮುಸಲ್ಮಾನರು) ‘ಕೇವಲ ಉಪಾಸನಾಪದ್ಧತಿಯನ್ನು ಬದಲಾಯಿಸಿದ್ದಷ್ಟೇ ಅಲ್ಲದೇ ಕ್ರೌರ್ಯತೆಯನ್ನು ಅಳವಡಿಸಿಕೊಂಡರು ಮತ್ತು ಅದನ್ನು ಇಡೀ ಜಗತ್ತು ಅನುಭವಿಸುತ್ತಿದೆ. ಇಂದಿಗೂ ಸಿರಿಯಾದಲ್ಲಿ ಮಹಿಳೆಯರ ಮಾರಾಟ ಮಾಡಲಾಗುತ್ತಿದೆ. ಹೊಸತನ ಸ್ವೀಕರಿಸಬೇಡಿ ಎಂದು ಖಂಡಿತ ಹೇಳುತ್ತಿಲ್ಲ. ಆದರೆ ಯಾವುದು ಹೊಸತನವೋ ಮತ್ತು ಒಳ್ಳೆಯದೋ, ಯಾವುದರಿಂದ ಸಂತಸಜ್ಜನರು ತೋರಿಸಿದ ಮಾರ್ಗಕ್ಕೆ ಅಡಚಣೆ ಬರುವುದಿಲ್ಲವೋ, ಅಂತಹದು ಖಂಡಿತವಾಗಿಯೂ ಸ್ವಾಗತಾರ್ಹವಾಗಿದೆ, ಆದರೆ ಹಳೆಯದು ತ್ಯಾಜ್ಯವೇ ಆಗಿದೆ, ಅದನ್ನು ಬಿಟ್ಟು ಹೊಸ ಹಿಂದುತ್ವನಿಷ್ಠ ವಿಚಾರಸರಣಿ ನಿರ್ಮಿಸುವುದು ಅಸಾಧ್ಯವೇ ಆಗಿದೆ. ಋಷಿಮುನಿಗಳು, ಸಂತಸಜ್ಜನರು ಮಂಡಿಸಿದ ತತ್ತ್ವಜ್ಞಾನಕ್ಕೆ ದೇವತೆಗಳ ಆಶೀರ್ವಾದವೂ ಇದೆ. ಅದರ ಹಿಂದೆ ನಿಷ್ಕಾಮ ಉಪಾಸನೆಯ ಪ್ರಚಂಡ ಸಾಮರ್ಥ್ಯವೂ ಇದೆ.

೪. ಕೇವಲ ಸಮಾಜಸೇವೆ ಅಥವಾ ಸಾಮಾಜಿಕ ಕಾರ್ಯವೆಂದರೆ ಹಿಂದುತ್ವವಲ್ಲ !

‘ದುಃಖಿತರು ಪೀಡಿತರು ನನ್ನವರು ಎಂದು ಹೇಳುವವನು ನಿಜವಾದ ಸಾಧು’ ಎಂದು ಜಗದ್ಗುರು ಸಂತ ತುಕಾರಾಮ ಮಹಾರಾಜರು ಹೇಳುವ ಮೊದಲು ಭಂಡಾರಾ ಪರ್ವತದ ಮೇಲೆ ತಪಶ್ಚರ್ಯೆ ಮಾಡಿದ್ದಾರೆ. ‘ಇಡೀ ಸಂಸಾರವನ್ನು ಸುಖಿಯಾಗಿಸುವೆನು’ ಎಂದು ಸಂತಶ್ರೇಷ್ಠ ಜ್ಞಾನೇಶ್ವರರು ಹೇಳುವುದರ ಹಿಂದೆ ಅವರು ಮಾಡಿದ ಉಪಾಸನೆಯ ಬಲವಿದೆ. ಸಂತ ಏಕನಾಥರು ‘ಕತ್ತೆಯ ಬಾಯಲ್ಲಿ ಗಂಗಾಜಲ ಸುರಿದರು’ ಎಂದು ನಾವು ಹೇಳುತ್ತೇವೆ, ಆದರೆ ಜನಾರ್ದನಸ್ವಾಮಿಗಳ ಅನುಗ್ರಹದಿಂದ ಅವರು ಮಾಡಿದ ಉಪಾಸನೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವರೆಲ್ಲರೂ ಮೊದಲು ಉಪಾಸನೆ ಮಾಡಿದ್ದಾರೆ, ನಂತರ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಆಚರಣಸಂಪನ್ನ ಉಪಾಸನೆಯ ಸಾಮರ್ಥ್ಯ ಮತ್ತು ಸಾಮರ್ಥ್ಯದ ಉಪಾಸನೆಯು ಹಿಂದುತ್ವವಾಗಿದೆ. ಕೆಟ್ಟ ವಿಷಯಗಳು ಕೂಡಲೇ ಆಕರ್ಷಿಸುತ್ತವೆ, ಆದರೆ ಒಳ್ಳೆಯ ವಿಷಯಗಳನ್ನು ಪ್ರಯತ್ನಪೂರ್ವಕವಾಗಿ ಕಲಿಯಬೇಕಾಗುತ್ತದೆ. ಬೈಗುಳಗಳನ್ನು ಕೇಳಿಯೇ ಹೇಳಬಹುದು, ಆದರೆ ‘ಕರಾಗ್ರೇ ವಸತೇ..’ ಎಂಬುದನ್ನು ಮಕ್ಕಳಿಂದ ಹೇಳಿಸಿಕೊಳ್ಳಬೇಕಾಗುತ್ತದೆ. ಚಿತ್ರಗೀತೆಗಳು ಕೇಳಿ ಕಂಠಪಾಠವಾಗುತ್ತವೆ, ಆದರೆ ಮಗ್ಗಿಗಳನ್ನು ಪ್ರಯತ್ನಪೂರ್ವಕವಾಗಿ ಕಂಠಪಾಠ ಮಾಡಬೇಕಾಗುತ್ತದೆ.

ಋಷಿಮುನಿಗಳು, ಸಂತಸಜ್ಜನರು ತೋರಿಸಿದ ಆಚಾರಗಳು ಅನುಭವಸಿದ್ಧವಾಗಿವೆ ಮತ್ತು ಆಶೀರ್ವಾದಾತ್ಮಕವಾಗಿವೆ. ಅವನ್ನು ಬಿಡಬೇಡಿ ಎಂಬುದಷ್ಟೇ ನಮ್ಮ ಇಚ್ಛೆ !

– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ವೆಂಗರ್ಲಾ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ. (೯.೧೨.೨೦೨೨)