ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ !

ಪುಲ್ವಾಮಾ (ಜಮ್ಮು-ಕಾಶ್ಮೀರ) – ಇಲ್ಲಿ ಜಿಹಾದಿ ಭಯೋತ್ಪಾದಕರು ಸಂಜಯ ಶರ್ಮ ಎಂಬ(ವಯಸ್ಸು ೪೦ ವರ್ಷ) ಈ ಕಾಶ್ಮೀರಿ ಹಿಂದೂಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಶರ್ಮ ಇವರು ಬ್ಯಾಂಕ ನೌಕರರಾಗಿದ್ದರು. ಅವರು ಮಾರುಕಟ್ಟೆಗೆ ಹೋಗುತ್ತಿರುವಾಗ ಅವರ ಮೇಲೆ ಗುಂಡು ಹಾರಿಸಲಾಯಿತು. ಲಷ್ಕರ್-ಏ-ತೋಯ್ಬಾದ ಶಾಖೆ ಆಗಿರುವ ‘ದ ರೇಜಿಸ್ಟನ್ಸ್ ಫ್ರಂಟ್ ‘ ಈ ಹೊಣೆಯನ್ನು ತೆಗೆದುಕೊಂಡಿದೆ. (ಒಂದು ಜಿಹಾದಿ ಸಂಘಟನೆ ನಾಶ ಮಾಡದೆ ಇರುವ ಪರಿಣಾಮ ಅದರ ಶಾಖೆಗಳು ನಿರ್ಮಾಣ ಆಗಿವೆ, ಇದು ಸುರಕ್ಷಾ ವ್ಯವಸ್ಥೆಗೆ ಲಜ್ಜಾಸ್ಪದ ! – ಸಂಪಾದಕರು )

ಪೊಲೀಸರು, ಈ ಘಟನೆ ಬೆಳಗ್ಗೆ ೧೧ ಗಂಟೆಯ ಸುಮಾರು ನಡೆದಿದೆ. ಮೃತಪಟ್ಟ ವ್ಯಕ್ತಿ ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿನ ಅಚನ ಪ್ರದೇಶದ ನಿವಾಸಿ ಆಗಿದ್ದರು. ಮೃತ ವ್ಯಕ್ತಿಯ ಗ್ರಾಮದಲ್ಲಿ ಸಶಸ್ತ್ರ ದಳ ನೇಮಕ ಮಾಡಿದ್ದು ಪರಿಸರದ ನಾಕಾಬಂದಿ ಮಾಡಿದ್ದಾರೆ. ಹಾಗೂ ಮುಂದಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ೩೩ ವರ್ಷದ ನಂತರ ಕೂಡ ಕಾಶ್ಮೀರದಲ್ಲಿ ಹಿಂದುಗಳು ಅಸುರಕ್ಷಿತವಾಗಿರುವುದು, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಾಜ್ಜಾಸ್ಪದ ! ಈ ಸ್ಥಿತಿ ಬದಲಾಗಬೇಕೆಂದರೆ ಹಿಂದೂ ರಾಷ್ಟ್ರವೇ ಬೇಕು !

* ಭಯೋತ್ಪಾದಕರು ಕಾಶ್ಮೀರದಲ್ಲಿ ಸರಕಾರಿ ಸಿಬ್ಬಂದಿಯಾಗಿರುವ ಹಿಂದೂಗಳನ್ನು ಗುರಿ ಮಾಡುತ್ತಿರುವಾಗ ಅವರ ರಕ್ಷಣೆ ಮಾಡಲು ಸಾಧ್ಯವಿಲ್ಲದೆ ಇದ್ದರೆ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುವ ಬೇಡಿಕೆ ಏಕೆ ಸ್ವೀಕರಿಸುತ್ತಿಲ್ಲ ? ಅವರನ್ನು ಸಾವಿನದವಡೆಗೆ ಏಕೆ ತಳ್ಳಲಾಗುತ್ತಿದೆ ?