ಭಾರತವು ಚೀನಾದಿಂದ ಉದ್ಯೋಗ ಕ್ಷೇತ್ರದಲ್ಲಿನ ಪ್ರಾಮಾಣಿಕತೆ ಕಲಿಯಬೇಕು ! – ಉದ್ಯಮಿ ನಾರಾಯಣ ಮೂರ್ತಿ

ನಾರಾಯಣ ಮೂರ್ತಿ

ನವ ದೆಹಲಿ – ಚೀನಾದಿಂದ ಭಾರತವು ಉದ್ಯೋಗ ಕ್ಷೇತ್ರದಲ್ಲಿನ ಪ್ರಾಮಾಣಿಕತೆ ಕಲಿಯುವ ಅವಶ್ಯಕತೆ ಇದೆ. ೧೯೪೦ ರ ವರೆಗೆ ಭಾರತ ಮತ್ತು ಚೀನಾ ಇವುಗಳ ಆರ್ಥಿಕ ವ್ಯವಸ್ಥೆ ಹೆಚ್ಚು ಕಡಿಮೆ ಒಂದೇ ರೀತಿಯಾಗಿತ್ತು; ಆದರೆ ಅದರ ನಂತರ ಚೀನಾದ ವೇಗವಾಗಿ ಅಭಿವೃದ್ಧಿಯಾಯಿತು ಮತ್ತು ಇಂದು ಅದರ ಆರ್ಥಿಕ ವ್ಯವಸ್ಥೆ ಭಾರತಕ್ಕಿಂತಲೂ ೬ ಪಟ್ಟು ಇದೆ. ಇದರ ಹಿಂದೆ ಚೀನಾದ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಂಸ್ಕೃತಿಯೆ ಕಾರಣವಾಗಿದೆ, ಎಂದು ‘ಇನ್ಫೋಸಿಸ್’ ಕಂಪನಿಯ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ‘ನನ್ನ ಈ ಅಭಿಪ್ರಾಯದಿಂದ ನನ್ನನ್ನು ದೇಶದ್ರೋಹಿ ಎನ್ನಬಾರದು’ ಎಂದು ಕೂಡ ಅವರು ಹೇಳಿದರು. ಅವರು ವಿದೇಶಾಂಗ ಸಚಿವಾಲಯದಿಂದ ಆಯೋಜಿಸಿದ್ದ ‘ಏಷ್ಯಾ ಎಕನಾಮಿಕ್ ಡೈಲಾಗ್’ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ನಾರಾಯಣ ಮೂರ್ತಿ ಮಾತು ಮುಂದುವರಿಸಿ,

೧. ನಾವು ಬೇಗನೆ ನಿರ್ಣಯ ತೆಗೆದುಕೊಳ್ಳುವುದು, ತ್ವರಿತ ಕಾರ್ಯಾಚರಣೆ ಮಾಡುವುದು ಹಾಗೂ ಯಾವುದೇ ಸಮಸ್ಯೆ ಇಲ್ಲದೆ ವ್ಯವಹಾರ, ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ಪಕ್ಷಪಾತ ಮಾಡದೇ ಇರುವ ಸಂಸ್ಕೃತಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ.

೨. ದೇಶದಲ್ಲಿ ಕೇವಲ ಒಂದು ಚಿಕ್ಕ ವರ್ಗ ಕಠಿಣ ಪರಿಶ್ರಮ ಪಡುತ್ತದೆ ಮತ್ತು ಬಹಳಷ್ಟು ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮಹತ್ವಾಕಾಂಕ್ಷೆ ಪೂರ್ಣಗೊಳಿಸಲು ಅವಶ್ಯಕತೆವಾಗಿರುವ ಸಂಸ್ಕೃತಿ ಅಳವಡಿಸಿಕೊಂಡಿಲ್ಲ.

೩. ಚೀನಾದಲ್ಲಿ ಭ್ರಷ್ಟಾಚಾರ ಬಹಳ ಕಡಿಮೆ ಇದೆ ಮತ್ತು ಪ್ರಾಮಾಣಿಕ ಜನರು ಹೆಚ್ಚಾಗಿದ್ದಾರೆ. ಉದ್ಯೋಗಿಗಳು ಕೇವಲ ಭಾರತದಲ್ಲಿಯೇ ಇರಬೇಕು ಮತ್ತು ಭಾರತದಲ್ಲಿಯೇ ಎಲ್ಲವೂ ಮಾಡಬೇಕು, ಹೇಗೆ ಅನಿಸುತ್ತಿದ್ದರೆ ಆಗ ಉದ್ಯೋಗದ ಬಗೆಗಿನ ನಿರ್ಣಯಗಳು ಬೇಗ ಬೇಗನೆ ತೆಗೆದುಕೊಳ್ಳಬೇಕು ಎಂದು ಹೇಳಿದರು.