ರಷ್ಯಾ ಮತ್ತು ಯುಕ್ರೇನ್ ಇದರಲ್ಲಿನ ಯುದ್ಧ ಬೇಗನೆ ಮುಗಿಯಬೇಕು ! – ಪ್ರಧಾನಮಂತ್ರಿ ಮೋದಿ

ನವ ದೆಹಲಿ – ಭಾರತದಲ್ಲಿ ಯಾವಾಗಲೂ ರಷ್ಯಾ ಮತ್ತು ಯುಕ್ರೇನ್ ಇವರಲ್ಲಿನ ವಿವಾದದ ಈ ಚರ್ಚೆ ಮತ್ತು ಮುತ್ಸದ್ದಿತನದಿಂದ ಪರಿಹರಿಸುವುದರ ಬಗ್ಗೆ ವತ್ತು ನೀಡುತ್ತಿದ್ದಾರೆ. ಭಾರತ ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ಯೋಗದಾನ ನೀಡಲು ಸಿದ್ಧವಿದೆ. ಈ ಎರಡು ದೇಶದಲ್ಲಿನ ಯುದ್ಧ ಬೇಗನೆ ಮುಗಿಯಬೇಕು, ಎಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರು ಜರ್ಮನಿಯ ಚಾನ್ಸಲರ್ ಒಲಾಫ ಸ್ಕೊಲ್ಖ ಇವರ ಜೊತೆ ನಡೆಸಿರುವ ಚರ್ಚೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಮೋದಿ ಇವರು, ಭಾರತ ಮತ್ತು ಜರ್ಮನಿ ಈ ಎರಡು ದೊಡ್ಡ ಪ್ರಜಾಪ್ರಭುತ್ವ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಸಹಕಾರ ಎರಡೂ ದೇಶದ ಜನರಿಗಾಗಿ ಲಾಭವಾಗಲಿದೆ. ಜರ್ಮನಿ ಇದು ಯುರೋಪಿನಲ್ಲಿ ಭಾರತದ ದೊಡ್ಡ ವ್ಯಾಪಾರಿ ಪಾಲುದಾರಾಗಿದೆ. ನಾವು ರಕ್ಷಣೆ ಮತ್ತು ಭದ್ರತೆ ಇದರ ಸಂಬಂಧದಲ್ಲಿ ವಿಸ್ತಾರ ಮಾಡುವ ದಿಕ್ಕಿನತ್ತ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಭಾರತ ಹೆಚ್ಚಿನ ಪ್ರಗತಿ ಮಾಡಿದೆ ! – ಚಾನ್ಸಲರ್ ಒಲಾಫ್ ಸ್ಕೊಲ್ಜ

ಚಾನ್ಸಲರ್ ಒಲಾಫ್ ಸ್ಕೊಲ್ಜ ಇವರು ಈ ಸಮಯದಲ್ಲಿ, ಭಾರತ ಹೆಚ್ಚಿನ ಪ್ರಗತಿ ಮಾಡಿದೆ ಮತ್ತು ಅದು ಎರಡು ದೇಶದ ಸಂಬಂಧಗಳಿಗಾಗಿ ಒಳ್ಳೆಯದಿದೆ. ರಷ್ಯಾದ ಆಕ್ರಮಣದ ಪರಿಣಾಮ ಜಗತ್ತು ಅನುಭವಿಸುತ್ತಿದೆ. ಇಂತಹ ಸಮಯದಲ್ಲಿ ಎಲ್ಲಾ ದೇಶಗಳು ಆಹಾರ ಮತ್ತು ವಿದ್ಯುತ್ ಇದರ ಪೂರೈಕೆಕಡೆಗೆ ಗಮನ ನೀಡುತ್ತಿದೆ ಎಂದು ಹೇಳಿದರು.