ಬಾಂಗ್ಲಾದೇಶದಲ್ಲಿ ಐದು ರೂಪಾಯಿಯ ಹಳೆ ನಾಣ್ಯವನ್ನು ಕಳ್ಳಸಾಗಾಣಿಕೆ ಮಾಡಿ ಬ್ಲೇಡ್ ತಯಾರಿಸುತ್ತಿರುವುದರಿಂದ ನಾಣ್ಯ ಚಲಾವಣೆಗೆ ನಿರ್ಬಂಧ !

ನವದೆಹಲಿ – ರೀಸರ್ವ ಬ್ಯಾಂಕಿನಿಂದ ೫ ರೂಪಾಯಿಯ ನಾಣ್ಯ ಚಲಾವಣೆ ನಿಲ್ಲಿಸಿದ್ದಾರೆ. ಅದರ ಬದಲು ಹೊಸ ನಾಣ್ಯ ಚಲಾವಣೆ ಮಾಡುತ್ತಿದ್ದಾರೆ. ಇದರ ಹಿಂದಿನ ಆಘಾತಕಾರಿ ಕಾರಣ ಬಹಿರಂಗವಾಗಿದೆ. ಐದು ರೂಪಾಯಿಯ ಹಳೆ ನಾಣ್ಯದ ತೂಕ ಹೆಚ್ಚಾಗಿತ್ತು. ಅದರಲ್ಲಿ ಲೋಹದ ಪ್ರಮಾಣ ಹೆಚ್ಚಾಗಿರುವುದರಿಂದ ಬಾಂಗ್ಲಾದೇಶದಲ್ಲಿ ಅದರ ಕಳ್ಳ ಸಾಗಾಣಿಕೆ ಮಾಡಿ ಅದನ್ನು ಕರಗಿಸಲಾಗುತ್ತಿತ್ತು. ಈ ನಾಣ್ಯಗಳನ್ನು ಕರಗಿಸಿ ಅದರಿಂದ ಗಡ್ಡ ತೆಗೆಯುವ ಬ್ಲೇಡ್ ತಯಾರಿಸುತ್ತಿದ್ದರು. ಒಂದು ನಾಣ್ಯದಿಂದ ೭ ಬ್ಲೇಡ್ ತಯಾರಿಸಿ ಅದನ್ನು ೧೨ ರೂಪಾಯಿಗೆ ಮಾರುತ್ತಿದ್ದರು. ಐದು ರೂಪಾಯ ಬದಲು ೭ ರೂಪಾಯಿಗಳಿಸುತ್ತಿದ್ದರು. ಈ ಮಾಹಿತಿ ದೋರೆತ ನಂತರ ರಿಸರ್ವ್ ಬ್ಯಾಂಕಿನಿಂದ ೫ ರೂಪಾಯಿಯ ಹಳೆಯ ನಾಣ್ಯ ನಿಲ್ಲಿಸಿ ಹೊಸ ನಾಣ್ಯ ತಂದಿದ್ದಾರೆ. ಅದರಲ್ಲಿನ ಧಾತು ಬದಲಾಯಿಸಿ ತೆಳ್ಳೆಗೆ ಮಾಡಿದ್ದಾರೆ.