ಭಾಗ್ಯನಗರ ವಿಶ್ವವಿದ್ಯಾಲಯದ ಎಸ್.ಎಫ್.ಐ. ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿದ್ಯಾರ್ಥಿಗಳ ನಡುವೆ ಘರ್ಷಣೆ !

೮ ವಿದ್ಯಾರ್ಥಿಗಳಿಗೆ ಗಾಯ !

ಭಾಗ್ಯನಗರ – ಇಲ್ಲಿಯ ವಿಶ್ವವಿದ್ಯಾಲಯದಲ್ಲಿ ಕಮ್ಯುನಿಸ್ಟ್ ವಿಚಾರಧಾರೆಯ ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ‘ಎಂದರೆ ‘ಎಸ್.ಎಫ್.ಐ.’ ಮತ್ತು ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ‘( ಅಭಾವಿಪ)ನ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಯಿತು. ವಿದ್ಯಾರ್ಥಿಗಳ ಹಾಸ್ಟೆಲನಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಬಾಗಿಲಿನ ಕೆಲವು ಗಾಜಗಳು ಬಡೆದಿದ್ದು ವಿದ್ಯಾರ್ಥಿಗಳ ಸೈಕಲ್ ಗಳ ಕೂಡ ಧ್ವಂಸ ಮಾಡಿದ್ದಾರೆ. ಭಾಗ್ಯನಗರ ವಿಶ್ವವಿದ್ಯಾಲಯದಲ್ಲಿ ಇತ್ತಿಚೆಗೆ ನಡೆದ ಚುನಾವಣೆಯ ನಂತರ ಈ ಘಟನೆ ನಡೆದಿದೆ.

ರೌಡಿಗಳ ಮೇಲೆ ಕ್ರಮ ಕೈಗೊಳ್ಳಿ ! – ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಈ ಪ್ರಕರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಚಿವ ಹರಿಕೃಷ್ಣ ನಗೌಥೂ ಇವರು, ನಮ್ಮ ವಿದ್ಯಾರ್ಥಿಗಳ ಮೇಲೆ ಹರಿತಾದ ಶಸ್ತ್ರಗಳಿಂದ ದಾಳಿ ಮಾಡಿದ್ದಾರೆ. ರೌಡಿಗಳ ಮೇಲೆ ಕ್ರಮ ಕೈಗೊಂಡು ನಮಗೆ ನ್ಯಾಯ ನೀಡಬೇಕು. ಈ ಪ್ರಕರಣದಲ್ಲಿ ಎಸ್.ಎಫ್.ಐ. ನ ವಿದ್ಯಾರ್ಥಿಗಳು ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆದಿವಾಸಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದರು ಎಂದು ಅಭಾವಿಪ ಆರೋಪ ಮಾಡಿದೆರೇ ಎಸ್.ಎಫ್.ಐ.ಯಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಮೊದಲು ಆಕ್ರಮಣ ನಡೆದಿರುವ ಪ್ರತ್ಯಾರೋಪ ಮಾಡಿದೆ.

ಸಂಪಾದಕೀಯ ನಿಲುವು

ತೆಲಂಗಾಣದಲ್ಲಿ ಹಿಂದೂದ್ವೇಷಿ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಇರುವುದರಿಂದ ಈ ಘಟನೆಯಲ್ಲಿ ಎಸ್.ಎಫ್.ಐ. ನ ವಿದ್ಯಾರ್ಥಿಗಳು ತಪ್ಪಿಸ್ಥರಾಗಿ ಕಂಡರೂ, ಅವರ ಮೇಲೆ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ ಇದು ಕೂಡ ಅಷ್ಟೇ ಸತ್ಯ !