‘ಪಿ.ಎಫ್.ಐ. ನಂತೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಇವುಗಳ ಮೇಲೆಯೂ ಕೂಡ ನಿಷೇಧ ಹೇರಿ !’ (ಅಂತೆ) – ಮೌಲಾನ ತೌಕೀರ್ ರಝಾ ಖಾನ್

(ಮೌಲಾನಾ ಎಂದರೆ ಇಸ್ಲಾಮಿ ಅಭ್ಯಾಸಕ )

ಚಂಡಿಗಡ (ಹರಿಯಾಣ) – ರಾಜ್ಯದಲ್ಲಿನ ಭಿವಾನಿಯಲ್ಲಿ ೨ ಗೋವು ಕಳ್ಳ ಸಾಗಾಣಿಕೆದಾರರ ಶವ ಸಿಕ್ಕಿರುವ ಘಟನೆಯಿಂದ ‘ಇತ್ತೆಹಾದ-ಏ-ಮಿಲ್ಲದ್ ಕೌನ್ಸಿಲ್ ‘ ಈ ಇಸ್ಲಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ ಇವನು ಹಿಂದುತ್ವನಿಷ್ಠ ಸಂಘಟನೆಗಳಿಗೆ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಆಗ್ರಹಿಸಿದ್ದಾನೆ. ‘ಯಾವ ರೀತಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ನಿಷೇಧ ಹೇರಲಾಯಿತೋ, ಅದೇ ರೀತಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತು ಈ ಸಂಘಟನೆಗಳ ಮೇಲೆ ಕೂಡ ನಿಷೇಧ ಹೇರಬೇಕೆಂದು’, ತೌಕೀರ್ ರಝಾ ಹೇಳಿದರು.

೧. ರಝಾ, ಭೀವಾನಿಯಲ್ಲಿ ಫೆಬ್ರವರಿ ೧೬ ರಂದು ಗೋವು ಕಳ್ಳ ಸಾಗಾಣಿಕೆ ಮಾಡುವವರ ಹತ್ಯೆ ಮಾಡಲಾಯಿತು. ನಾವು ಆಗ ಸುಮ್ಮನಿದ್ದೆವು; ಆದರೆ ಯಾವಾಗ ಸಭೆ ಮತ್ತು ಮಹಾಪಂಚಾಯತಿಯಲ್ಲಿ ಆರೋಪಿಯ ಪರ ವಹಿಸಿದ್ದರು, ಆ ಸಮಯದಲ್ಲಿ, ಈಗ ಸಮೂಹ ಹತ್ಯೆ ಸಾಮಾನ್ಯವಾಗಿದೆ, ಎಂದೆನಿಸಿತು ಎಂದು ರಝಾ ಹೇಳಿದರು.

೨. ಈ ಹಿಂದೆಯೂ ಕೂಡ ತೌಕೀರ್ ರಝಾ ಇವರು ಅನೇಕ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ ಶಹಾ ಇವರು ‘ಕಲ್ಮಾ’ ಓದಿ ಇಸ್ಲಾಂ ತಿಳಿದುಕೊಳ್ಳುವ ಪುಕ್ಕಟ್ಟೆ ಸಲಹೆ ಕೂಡ ರಝಾ ನೀಡಿದ್ದರು. ಈ ಮೂಲಕ ಅವರಿಬ್ಬರೂ ಇಸ್ಲಾಂ ಸ್ವೀಕರಿಸುವಂತೆ ಹೇಳಿದ್ದರು. ‘ಕಲ್ಮಾ’ವನ್ನು ಓದಿ ಯಾರೇ ಮುಸಲ್ಮಾನೇತರರು ಇಸ್ಲಾಂ ಸ್ವೀಕರಿಸ ಬಹುದು ಇದೊಂದು ದ್ವಾರವಾಗಿದೆ ಎಂದು ಹೇಳಿದ್ದರು.

ಸಂಪಾದಕರ ನಿಲುವು

‘ಕ್ರೂರ ಕರ್ಮ’ ಔರಂಗಜೇಬ ಇವನು ಜಗತ್ತಿನ ಸರ್ವೋತ್ಕೃಷ್ಟ ರಾಜನಾಗಿದ್ದನು’, ಈ ರೀತಿ ವಿಷಕಾರಿರುವ ಮೌಲಾನ ತೌಕೀರ್ ರಝಾ ಖಾನ್ ಇವರು ಈ ರೀತಿ ಒತ್ತಾಯಿಸುವುದರಲ್ಲಿ ಆಶ್ಚರ್ಯ ಏನೂ ಇಲ್ಲ !