ಭಾರತ ಮೂರನೇ ಗುಂಪು !
ವಾಷಿಂಗ್ಟನ್ (ಅಮೇರಿಕಾ) – ರಷ್ಯಾ – ಯುಕ್ರೇನ್ ಯುದ್ಧವು ಒಂದು ವರ್ಷದ ನಂತರವು ಮುಂದುವರೆದಿರುವುದರಿಂದ ಜಗತ್ತು ಮೂರನೇ ಮಹಾಯುದ್ಧದ ಕಡೆಗೆ ವೇಗವಾಗಿ ಸಾಗುತ್ತಿದೆ ಎಂದು ಅನೇಕ ರಕ್ಷಣಾ ತಜ್ಞರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾದರೇ ಇಚ್ಛೆ ಇರಲಿ ಅಥವಾ ಇಲ್ಲದಿರಲಿ, ಅನೇಕ ದೇಶಗಳು ಈ ಮಹಾಯುದ್ಧದ ಪ್ರಪಾತಕ್ಕೆ ಹೋಗಲಿದೆ.
ಅಮೇರಿಕಾದ ‘ಫೆಡರಲ್ ಇಂಟಲಿಜೆನ್ಸಿ ಸರ್ವಿಸ್’ ನ ಮಾಜಿ ಉಪಾಧ್ಯಕ್ಷ ಹಾಗೂ ರಕ್ಷಣಾ ತಜ್ಞ ರೂಡಾಲ್ಫ ಜಿ.ಎಂ. ಇವರು ಮೂರನೇ ಮಹಾಯುದ್ಧ ನಡೆದರೆ ಜಗತ್ತು ಮೂರು ಗುಂಪಿನಲ್ಲಿ ವಿಭಜನೆ ಆಗುವುದು’, ಎಂದು ಹೇಳಿದ್ದಾರೆ. ಅವರು ಮಾತು ಮುಂದುವರಿಸಿ, ಇದರಲ್ಲಿ ಅಮೆರಿಕ ಮತ್ತು ರಷ್ಯಾ ಎದುರುಬದುರು ನಿಲ್ಲುವುದು. ಕೆಲವು ದೇಶಗಳು ಅಮೆರಿಕಕ್ಕೆ ಸಹಕಾರ ನೀಡುವುದು ಹಾಗೂ ಕೆಲವು ದೇಶ ರಷ್ಯಾದ ಪರವಾಗಿ ನಿಲ್ಲುವುದು. ಈ ಯುದ್ಧದಲ್ಲಿ ಮೂರನೇ ಗುಂಪು ಮೇಲಿನ ಎರಡು ಗುಂಪುಗಳ ದೇಶಗಳ ಜೊತೆ ಒಂದಲ್ಲ ಒಂದು ಆತ್ಮೀಯ ಸಂಬಂಧ ಇರುವ ದೇಶದೊಂದಿಗೆ ಇರಲಿದೆ; ಆದರೆ ಅವರಿಗೆ ಯುದ್ಧ ಬೇಡವಾಗಿದೆ. ಆದರೂ ಕೂಡ ಇಚ್ಛೆ ಇಲ್ಲದೆ ಇದ್ದರೂ ಅವರ ಮೇಲೆ ಕೂಡ ಯುದ್ಧ ಹೇರಲಾಗುವುದು.
https://t.co/fBD7DCcZL0 #WorldWar3 #India
— Lokmat (@lokmat) February 24, 2023
೧. ಇದರಲ್ಲಿ ಮೊದಲ ಗುಂಪಿನಲ್ಲಿ ಪಾಶ್ಚಿಮಾತ್ಯ ಪ್ರಗತಿಪರ ಮತ್ತು ಬಂಡವಾಳ ಶಾಹಿ ದೇಶಗಳು ಒಂದು ಗುಂಪಿನಲ್ಲಿ ಇರುವುದು. ಇದರಲ್ಲಿ ಅಮೇರಿಕಾ, ಕೆನಡಾ, ಇಂಗ್ಲೆಂಡ್, ಜಪಾನ, ಆಸ್ಟ್ರೇಲಿಯಾ ಮತ್ತು ಕೆಲವು ಯುರೋಪಿಯನ ದೇಶಗಳ ಸಮಾವೇಶ ಇರುವುದು. ದಕ್ಷಿಣ ಕೊರಿಯಾ ಕೂಡ ಇದೇ ಗುಂಪಿಗೆ ಹೋಗುವುದು; ಕಾರಣ ಅದಕ್ಕೆ ಸಮಯ ಸಮಯದಲ್ಲಿ ಅಮೆರಿಕಾ ಸಹಾಯ ಮಾಡಿದೆ.
೨. ಎರಡನೆಯ ಗುಂಪಿನಲ್ಲಿ ರಷ್ಯಾ ಇರುವುದು. ಅದರ ಪರವಾಗಿ ಬೆಲಾರುಸ್, ಇರಾನ್, ಸಿರಿಯಾ, ವೆನೆಜುವೆಲಾ ಮತ್ತು ಉತ್ತರ ಕೋರಿಯಾ ಈ ದೇಶಗಳು ಇರುವುದು. ಚೀನಾ ಇದೇ ಗುಂಪಿನಲ್ಲಿ ಇರುವ ಸಾಧ್ಯತೆ ಇದೆ. ಇದರ ಹಿಂದೆ ‘ಅಮೇರಿಕಾದ ಬದಲು ತನ್ನನ್ನು ಮಹಾಶಕ್ತಿ ಎಂದು ತಿಳಿಸುವ ಚೀನಾದ ಪ್ರಯತ್ನ,’ ಈ ಕಾರಣ ಇರಬಹುದು. ಹಾಗೂ ‘ಶತ್ರುವಿನ ಶತ್ರು ತಮ್ಮ ಮಿತ್ರ ‘ ಈ ಗಾದೆಯ ಪ್ರಕಾರ ಚೀನಾ ಮುತ್ಸದ್ದಿತನದ ನಡೆ ನಡೆಯಬಹುದು.
೩. ಮೂರನೇ ಗುಂಪಿನಲ್ಲಿ ಪ್ರಗತಿಶೀಲ ದೇಶಗಳ ಸಮಾವೇಶ ಇರುವುದು. ಅಭಿವೃದ್ಧಿ ದೇಶಗಳಿಗಾಗಿ ಸವಾಲೆಂದು ಮುಂದೆ ಬಂದಿರುವ ಈ ಗುಂಪಿನ ನೇತೃತ್ವ ಮಾಡಬಹುದು. ಇದರಲ್ಲಿ ಭಾರತದ ಜೊತೆ ಇತರೆ ಏಶಿಯಾ ದೇಶಗಳು ಇರುವುದು. ದಕ್ಷಿಣ ಅಮೇರಿಕಾ ಮತ್ತು ಅರಭ ದೇಶಗಳು ಕೂಡ ಇದೇ ಗುಂಪಿನಲ್ಲಿ ಇರಬಹುದು. ಇವರದು ಯುದ್ಧ ನಿಲ್ಲಿಸುವ ಪ್ರಯತ್ನ ಇರುವುದು.