ಕೇಂದ್ರ ಸರಕಾರಕ್ಕೆ ರಾಷ್ಟ್ರೀಯ ಸ್ವಯಂ ಸಂಘದ ಸಹಕಾರ್ಯವಾಹಕ ಡಾ. ಕೃಷ್ಣ ಗೋಪಾಲರ ಸಲಹೆ
ನವ ದೆಹಲಿ – ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಭಾರತವು 25-50 ಲಕ್ಷ ಟನ ಗೋಧಿಯನ್ನು ಕಳುಹಿಸಿ ನೆರೆಹೊರೆಯ ಧರ್ಮವನ್ನು ಪಾಲಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹಕ ಡಾ. ಕೃಷ್ಣ ಗೋಪಾಲರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು. ಚಲನಚಿತ್ರ ನಿರ್ಮಾಪಕ ಇಕ್ಬಾಲ ದುರ್ರಾನಿಯವರು ದೆಹಲಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಪ್ರಚಾರಕ ಇಂದ್ರೇಶ ಕುಮಾರ ಇವರೂ ಉಪಸ್ಥಿತರಿದ್ದರು.
BREAKING: India 🇮🇳 can offer Wheat to Pakistan 🇵🇰, says RSS Joint General Secy Krishna Gopal. pic.twitter.com/ts9OIFxJLc
— RashtraNow (@RashtraNow) February 24, 2023
ಡಾ. ಕೃಷ್ಣ ಗೋಪಾಲ ಮುಂದೆ ಮಾತನಾಡುತ್ತಾ,
1. ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು ಕೆಜಿಗೆ 250 ರೂಪಾಯಿ ಆಗಿದೆ. ಇದನ್ನು ಕೇಳಿ ದುಃಖವೆನಿಸುತ್ತದೆ. ನಾವು ಅವರಿಗೆ ಹಿಟ್ಟನ್ನು ಕಳುಹಿಸಲು ಸಾಧ್ಯವಿದೆ. ಪಾಕಿಸ್ತಾನ ಬೇಡುವುದಿಲ್ಲ; ಆದರೆ ಭಾರತ ಅವರಿಗೆ 25-50 ಲಕ್ಷ ಟನ್ ಗೋಧಿಯನ್ನು ಕೊಡಬಹುದು. 70 ವರ್ಷದ ಹಿಂದೆ ಅವರು ನಮ್ಮೊಂದಿಗೇ ಇದ್ದರು.
2. ಪಾಕಿಸ್ತಾನ ನಮ್ಮೊಂದಿಗೆ ಜಗಳವಾಡುತ್ತಲೇ ಇರುತ್ತದೆ. ಭಾರತದ ವಿರುದ್ಧ 4 ಯುದ್ಧಗಳಾಗಿವೆ. ದಾಳಿಯು ಯಾವಾಗಲೂ ಪಾಕಿಸ್ತಾನವೇ ಮಾಡುತ್ತದೆ. ಹಗಲು ರಾತ್ರಿ ನಮ್ಮ ಅಪಮಾನ ಮಾಡುತ್ತದೆ. ಆದರೂ ಅವರು ಸುಖವಾಗಿರಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ.
3. ಎರಡೂ ದೇಶಗಳ ನಡುವೆ ಇಷ್ಟು ಅಂತರದಿಂದ ಏನು ಲಾಭವಿದೆ ? ಅವರ ದೇಶದಲ್ಲಿ ಒಂದು ನಾಯಿಯೂ ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಇಚ್ಛೆಯಿದೆ. ನಾವು `ಸರ್ವೆ ಭವಂತು ಸುಖಿನಃ’ (ಎಲ್ಲರೂ ಸುಖವಾಗಿರಬೇಕು) ಎಂದು ನಂಬುವ ದೇಶವಾಗಿದೆ. ಪಾಕಿಸ್ತಾನ ನಮ್ಮ ಬಳಿ ಕೇಳುವುದಿಲ್ಲ; ಆದರೆ ಭಾರತವು ಪಾಕಿಸ್ತಾನಕ್ಕೆ ಗೋಧಿ ಕಳುಹಿಸಬೇಕು. ಭಾರತದ ಭೂಮಿಯ ಮೇಲೆ ಯಾವುದೇ ವ್ಯಕ್ತಿ, ಅವನು ಜೈನ, ಸೀಖ್ಕ, ವೈಷ್ಣವ, ಆರ್ಯನಿರಲಿ, `ಸರ್ವೇ ಭವಂತು ಸುಖಿನಃ’ ವಿಲ್ಲದೇ ಅಪೂರ್ಣವಾಗಿದೆ.