ಲಾಹೋರ (ಪಾಕಿಸ್ತಾನ) ಇಲ್ಲಿಯ ಮಹಾಭಾರತ ಕಾಲದ ‘ಪಂಜತೀರ್ಥ’ ಹಿಂದೂಗಳ ತೀರ್ಥಕ್ಷೇತ್ರ ಮುಸಲ್ಮಾನರ ವಶದಲ್ಲಿ !

ಗೋಧಾಮಿನಂತೆ ಉಪಯೋಗ !

ಪೇಶಾವರ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ – ಪಖ್ಟುನಾಖ್ವ ಪ್ರಾಂತದ ರಾಜಧಾನಿಯಾಗಿರುವ ಪೇಶಾವರದಲ್ಲಿ ಮಹಾಭಾರತ ಕಾಲದ ಪಂಜತೀರ್ಥ (ಪಂಜ ತೀರಥ) ಈ ಹಿಂದೂಗಳ ತೀರ್ಥಕ್ಷೇತ್ರ ಮುಸಲ್ಮಾನರು ವಶಕ್ಕೆ ಪಡೆದುಕೊಂಡು ಅದನ್ನು ಗೋದಮಿನಂತೆ ಉಪಯೋಗಿಸುತ್ತಿದ್ದಾರೆ. ಸ್ಥಳೀಯ ವೃತ್ತ ಪತ್ರಿಕೆ ‘ಬೀಟರ್ ವಿಂಟರ್’ ಇಂದ ಈ ಕುರಿತು ವಾರ್ತೆ ಪ್ರಸಾರವಾಗಿದೆ.

೧. ಪಂಜ ತೀರ್ಥದ ಸಂಬಂಧ ಪಾಂಡವರ ಜೊತೆ ಇದೆ. ಸಾವಿರಾರು ವರ್ಷಗಳ ಕಾಲ ಈ ಸ್ಥಳಕ್ಕೆ ಹಿಂದುಗಳ ತೀರ್ಥಕ್ಷೇತ್ರವೆಂದು ಪ್ರಚಲಿತವಾಗಿತ್ತು. ವಿಭಜನೆಯ ನಂತರ ಅಲ್ಲಿ ಜೀರ್ಣಾವಸ್ಥೆಯಲ್ಲಿ ಇರುವ ಕೇವಲ ಎರಡು ದೇವಸ್ಥಾನಗಳು ಉಳಿದಿದೆ.

೨. ಈ ಕ್ಷೇತ್ರ ಸ್ಥಳೀಯ ಸರಕಾರದಿಂದ ಕೈತಪ್ಪಿ ಚಾಕಾ ಯೂನಸ್ ಕುಟುಂಬದ ನಿಯಂತ್ರಣದಲ್ಲಿ ಇದೆ. ನಂತರ ಅದನ್ನು ಒಂದು ಖಾಸಗಿ ಕಂಪನಿಗೆ ಮಾರಿದ್ದಾರೆ.

೩. ಪಂಜತೀರ್ಥದಲ್ಲಿ ನೀರಿನ 5 ಕಲ್ಯಾಣಿ ಹಾಗೂ ಒಂದು ದೊಡ್ಡ ಮತ್ತು ಕೆಲವು ಚಿಕ್ಕ ದೇವಸ್ಥಾನಗಳು ಇತ್ತು. ಕಾರ್ತಿಕ ಮಾಸದಲ್ಲಿ ಹಿಂದೂಗಳು ಇಲ್ಲಿಯ ಕಲ್ಯಾಣಿ ಸ್ನಾನ ಮಾಡಿ, ಅಲ್ಲಿಯ ಮರದ ಕೆಳಗೆ ಕುಳಿತು ಪೂಜಾರ್ಚನೆ ಮಾಡುತಿದ್ದರು.

೪. ಪುರಾತತ್ವ ತಜ್ಞರು, ಯಾವಾಗ ಅವರು ಈ ತೀರ್ಥಕ್ಷೇತ್ರಕ್ಕೆ ಹೋಗುವ ಪ್ರಯತ್ನ ಮಾಡಿದರೋ, ಆಗ ಶಸ್ತ್ರಾಸ್ತ್ರ ಹೊಂದಿದ್ದ ಜನರು ಅವರನ್ನು ಬೆದರಿಸಿ ಓಡಿಸಿದರು ಎಂದು ಹೇಳಿದರು.

೫. ಫೆಬ್ರವರಿ ೧೦ ರಂದು ಪೇಶಾವರ ಉಚ್ಚ ನ್ಯಾಯಾಲಯವು ಇದರ ಬಗ್ಗೆ ಖೇದ ವ್ಯಕ್ತಪಡಿಸಿ, ೩ ವರ್ಷಗಳಾದರೂ ಕೂಡ ಈ ಸೂತ್ರದ ಬಗ್ಗೆ ಯಾವುದೇ ಉಪಾಯೋಜನೆ ಮಾಡಿಲ್ಲ. ಈ ಸೂತ್ರದ ಬಗ್ಗೆ ನ್ಯಾಯಾಲಯದಲ್ಲಿ ಇನ್ನೂ ಕೂಡ ವಿಚಾರಣೆ ನಡೆಯುತ್ತಿದೆ.

ಸಂಪಾದಕರ ನಿಲುವು

ಭಾರತದಲ್ಲಿ ಹಿಂದೂಗಳ ದೇವಸ್ಥಾನ ಕೆಡವಿ ಅಲ್ಲಿ ಮಸೀದಿ ಕಟ್ಟುವ ಕಾರ್ಯ ನಡೆಯುತ್ತಿದ್ದರೇ ಪಾಕಿಸ್ತಾನದಲ್ಲಿ ದೇವಸ್ಥಾನಗಳ ಉಪಯೋಗ ಗೋದಮಿನಂತೆ ಉಪಯೋಗಿಸುತ್ತಾರೆ ! ಹಿಂದೂಗಳ ದೇವಸ್ಥಾನದ ದೇಶವಿದೇಶಗಳಲ್ಲಿ ನಡೆಯುವ ವಿಡಂಬನೆ ತಡೆಯುವುದಕ್ಕಾಗಿ ಸರಕಾರ ಕ್ರಮ ಕೈಗೊಳ್ಳುವುದೇ ?