ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ದಾವೆ !
ವಾರಾಣಸಿ (ಉತ್ತರಪ್ರದೇಶ) – ‘ಅಲ್ಲಾ’ ಈ ಶಬ್ದವು ಮಾತೃಶಕ್ತಿಯ ಪ್ರತೀಕವಾಗಿದೆ. ಅದು ಸಂಸ್ಕೃತ ಶಬ್ದವಾಗಿದೆ. ಶ್ರೀ ದುರ್ಗಾದೇವಿಯ ಆವಾಹನೆಗಾಗಿ ‘ಅಲ್ಲಾ’ ಶಬ್ದದ ಉಪಯೋಗ ಮಾಡಲಾಗುತ್ತದೆ, ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ದಾವೆ ಮಾಡಿದರು. ಅವರು ಇಲ್ಲಿಯ ದಕ್ಷಿಣಮೂರ್ತಿ ಮಠದಲ್ಲಿ ಜಿಜ್ಞಾಸುಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಜಮಿಯತ್ ಉಲೇಮಾ-ಏ-ಹಿಂದ್ ನ ನಾಯಕ ಮೌಲಾನಾ ಅರ್ಷದ ಮದನಿ ಇವರು ‘ಓಂ’ ಮತ್ತು ‘ಅಲ್ಲಾ’ ಒಂದೇ ಎಂದು ಹೇಳಿಕೆ ನೀಡಿದ್ದರು. ಅದರ ಬಗ್ಗೆ ಶಂಕರಾಚಾರ್ಯರು ಟೀಕಿಸಿದರು. ಅವರು, ಓಂ ಇದು ಪರಮಾತ್ಮನ ಹೆಸರಾಗಿದೆ. ಎಲ್ಲರ ಪೂರ್ವಜರು ಸನಾತನ ಆರ್ಯ ಹಿಂದುಗಳಾಗಿದ್ದರು. ಸನಾತನ ಧರ್ಮ ಇದೆ ಆದ್ದರಿಂದ ಎಲ್ಲಾ ಪಂಥಗಳು ಇವೆ. ಸನಾತನ ಧರ್ಮದ ಪಾಲನೆ ಮಾಡುವುದರಿಂದ ಜೀವನದಲ್ಲಿ ಸುಖ ಮತ್ತು ಮೃತ್ಯುವಿನ ನಂತರ ಸದ್ಗತಿ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
शंकराचार्य का दावा, संस्कृत शब्द है अल्लाह और मां दुर्गा के आह्वान में होता है इस्तेमाल#shankaracharya #Allah
Must Read : 👇👇https://t.co/F1XCMGBj0q
— Zee Uttar Pradesh Uttarakhand (@ZEEUPUK) February 23, 2023
ಬೈಬಲ್ ಮತ್ತು ಕುರಾನ್ ಇವುಗಳ ಕುರಿತು ಟೀಕಿಸುವ ಧೈರ್ಯ ಇದೆಯೇ ?
ಶಂಕರಾಚಾರ್ಯರು ಮಾತು ಮುಂದುವರಿಸಿ, ಹಿಂದೂ ಧರ್ಮದ ಮೇಲೆ ಪ್ರಶ್ನೆಗಳನ್ನು ಉಪಸ್ಥಿತಗೊಳಿಸುವವರು ಮೊದಲು ಸಂಸ್ಕೃತ ಮತ್ತು ವ್ಯಾಕರಣದ ಅಭ್ಯಾಸ ಮಾಡಬೇಕು. ‘ಶ್ರೀರಾಮಚರಿತ ಮಾನಸ’ ಕುರಿತು ಟೀಕೆ ಮಾಡುವವರು ಇತರ ಧರ್ಮದ ಗ್ರಂಥಗಳನ್ನು ಟೀಕಿಸುವ ಧೈರ್ಯ ಮಾಡುವುದಿಲ್ಲ. ಯಾರು ರಾಮಾಯಣದ ಬಗ್ಗೆ ಮಾತನಾಡುತ್ತಾರೆ ಅವರಲ್ಲಿ ಧೈರ್ಯ ಇದ್ದರೆ ಅವರು ಬೈಬಲ್ ಮತ್ತು ಕುರಾನ್ ಬಗ್ಗೆ ಟಿಕಿಸಿ ತೋರಿಸಲಿ; ಆಗ ಏನಾಗುತ್ತೆ ನೋಡಿರಿ ಎಂದು ಹೇಳಿದರು.
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರೀ ಇವರಿಗೆ ಹನುಮಂತನ ಆಶೀರ್ವಾದ !
ಪ್ರಸಾರ ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ ಶಂಕರಾಚಾರ್ಯರು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ಬೆಂಬಲಿಸಿದರು. ‘ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಗೆ ಹನುಮಂತನ ಆಶೀರ್ವಾದವಿದೆ’. ರಾಜಕೀಯ ಮತ್ತು ಧರ್ಮ ಒಂದರಿಂದ ಒಂದು ಬೇರೆಯಾಗಲು ಸಾಧ್ಯವಿಲ್ಲ. ಧರ್ಮ ಬಿಟ್ಟು ರಾಜಕೀಯ ಆಗಲು ಸಾಧ್ಯವಿಲ್ಲ’, ಎಂದು ಕೂಡ ಅವರು ಸ್ಪಷ್ಟಪಡಿಸಿದರು.
೨೦೨೪ ರಲ್ಲಿ ಕೂಡ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗುವವರು !
ಶಂಕರಾಚಾರ್ಯರು ಮಾತನ್ನು ಮುಂದುವರೆಸುತ್ತಾ, ೨೦೨೪ ರಲ್ಲಿ ಕೂಡ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗುವವರು; ಕಾರಣ ದೇಶವನ್ನು ಲೂಟಿ ಮಾಡಿ ಮನೆ ತುಂಬಿಸಿಕೊಳ್ಳುವ ನಾಯಕರು ಅವರಲ್ಲ, ಎಂದು ಹೇಳಿದರು.