ದಾರುಲ ಉಲೂಮ ದೇವಬಂದ ಶಿಕ್ಷಣ ಸಂಸ್ಥೆಯು ಗಡ್ಡ ತೆಗೆದಿದ್ದ 4 ವಿದ್ಯಾರ್ಥಿಗಳನ್ನು ಉಚ್ಛಾಟನೆ ಮಾಡಿದೆ !

ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ಬೆಳೆಸುವಂತೆ ಆದೇಶ !

ಸಹಾರನಪುರ (ಉತ್ತರಪ್ರದೇಶ) – ಇಲ್ಲಿಯ ದಾರೂಲ ಉಲೂಮ ದೇವಬಂದ ಸಂಸ್ಥೆಯ ಶಿಕ್ಷಣ ವಿಭಾಗದ ಮೌಲಾನಾ (ಇಸ್ಲಾಮ ಅಧ್ಯಯನಕಾರ) ಹುಸೈನ ಅಹಮದ ಇವರು ಒಂದು ಆದೇಶ ಜಾರಿಗೊಳಿಸಿದ್ದಾರೆ. ಈ ಆದೇಶದಲ್ಲಿ ` ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಗಡ್ಡ ತೆಗೆಯಬಾರದು. ಯಾವ ವಿದ್ಯಾರ್ಥಿ ಗಡ್ಡ ತೆಗೆಯುವರೋ ಅವರನ್ನು ಉಚ್ಛಾಟನೆಗೊಳಿಸಲಾಗುವುದು. ಯಾವ ವಿದ್ಯಾರ್ಥಿ ಗಡ್ಡ ತೆಗೆದು ಪ್ರವೇಶ ಪಡೆಯಲು ಬರುವನೋ, ಅವನಿಗೆ ಪ್ರವೇಶ ನೀಡಲಾಗುವುದಿಲ್ಲ’, ಗಡ್ಡ ತೆಗೆದಿರುವ 4 ವಿದ್ಯಾರ್ಥಿಗಳನ್ನು ಉಚ್ಛಾಟಣೆ ಮಾಡಿದ ಬಳಿಕ ಈ ಆದೇಶವನ್ನು ಜಾರಿಗೊಳಿಸಲಾಗಿದೆ.

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡನ ಹಿರಿಯ ಸದಸ್ಯ ಮತ್ತು ಲಕ್ಷ್ಮಣಪುರಿಯ ಖಾಜಿ (ಶರಿಯತ ಕಾನೂನಿನಂತೆ ನ್ಯಾಯದಾನ ನೀಡುವವ) ಮೌಲಾನಾ ಖಾಲಿದ ರಶೀದ ಫರಂಗಿ ಮಹಲಿಯವರು, ಮಹಮ್ಮದ ಪೈಗಂಬರ ಗಡ್ಡ ಬಿಡುತ್ತಿದ್ದರು. ಇದರಿಂದ ಇಸ್ಲಾಂನಲ್ಲಿ ಗಡ್ಡ ಬೆಳೆಸುವುದು ಮಹತ್ವದ್ದು ಎಂದು ತಿಳಿಯಲಾಗುತ್ತದೆ. ಇಸ್ಲಾಂನಲ್ಲಿ ಗಡ್ಡಕ್ಕೆ ಬಹಳ ಮಹತ್ವವಿದೆ ಎಂದು ಹೇಳಿದರು.