ಗಢವಾ (ಜಾರ್ಖಂಡ್) ಇಲ್ಲಿಯ ಮದರಸಾದ ಮೌಲ್ವಿಯಿಂದ ೬ ಮಕ್ಕಳ ಮೇಲೆ ಬಲಾತ್ಕಾರ !

ದೂರು ದಾಖಲು ಆದಾಗಿನಿಂದ ಪರಾರಿ !

(ಮೌಲ್ವಿ ಎಂದರೆ ಇಸ್ಲಾಮಿ ಅಭ್ಯಾಸಕ )

ಗಢವಾ (ಜಾರ್ಖಂಡ್) – ಇಲ್ಲಿಯ ಕೊಯಿನ್ಸಿ ಗ್ರಾಮದಲ್ಲಿರುವ ಮದರಸಾದಲ್ಲಿ ಸಮರುದ್ದಿನ್ ಎಂಬ ಮೌಲ್ವಿಯಿಂದ ಸುಮಾರು ೬ ಮಕ್ಕಳ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದ ದೂರು ದಾಖಲಾಗಿದೆ. ದೂರು ದಾಖಲಾದ ನಂತರ ಅವನು ಫರಾರಿಯಾಗಿದ್ದಾನೆ. ಅವನ ಈ ದುಷ್ಕೃತ್ಯವು, ಫೆಬ್ರವರಿ ೧೯ ರಂದು ರಾತ್ರಿ ೩ ವಿದ್ಯಾರ್ಥಿಗಳನ್ನು ತನ್ನ ಕೋಣೆಗೆ ಕರೆಸಿದನು. ಸಲ್ಪ ಸಮಯದ ನಂತರ ಇತರೆ ಇಬ್ಬರನ್ನು ಹೊರಗೆ ಕಳಿಸಿ ಮೂರನೇ ಹುಡುಗನಿಗೆ ಮಾಲೀಶ್ ಮಾಡಲು ಹೇಳಿ ಅವನ ಮೇಲೆ ಬಲಾತ್ಕಾರ ಮಾಡುವ ಪ್ರಯತ್ನ ಮಾಡಿದನು. ಸಂತ್ರಸ್ತ ಹುಡುಗ ಎಲ್ಲಾ ಘಟನೆ ಅವನ ಮನೆಗೆ ಹೋಗಿ ಹೇಳಿದನು ಆಗ ಬೆಳಕಿಗೆ ಬಂತು. ಆಗ ಅವನ ಕುಟುಂಬದವರು ಮತ್ತು ಗ್ರಾಮಸ್ಥರು ಮೌಲ್ವಿಗೆ ಸರಿಯಾದ ಬುದ್ದಿ ಹೇಳಿದರು. ಆ ಸಮಯದಲ್ಲಿ ಮೌಲ್ವಿಯು ಬೆಂಬಲಿಗರನ್ನು ಒಗ್ಗೂಡಿಸಿ ಗ್ರಾಮಸ್ಥರನ್ನು ವಿರೋಧಿಸಲು ಹೇಳಿದನು ಮತ್ತು ಸಂತ್ರಸ್ತ ಹುಡುಗನ ಕುಟುಂಬದವರಿಗೆ ಥಳಿಸಲು ಆರಂಭಿಸಿದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಅದರ ನಂತರ ಪೊಲೀಸರು ಸಂತ್ರಸ್ತ ಹುಡುಗನ ಹೇಳಿಕೆ ಪಡೆದುಕೊಂಡು ಮೌಲ್ವಿಯ ವಿರುದ್ಧ ದೂರು ದಾಖಲಿಸಿದರು. ಆಗಲಿಂದ ಅವನು ಪರಾರಿಯಾಗಿದ್ದಾನೆ. ಸ್ಥಳೀಯ ಪ್ರಸಾರ ಮಾಧ್ಯಮದಿಂದ ನೀಡಿರುವ ಮಾಹಿತಿಯ ಪ್ರಕಾರ ಸಮರುದ್ದಿನ್ ಮೂಲತಃ ಬಂಗಾಲದವನಾಗಿದ್ದು ಕಳೆದ ಅನೇಕ ವರ್ಷಗಳಿಂದ ದಾರುಲ ಉಲುಂ ಸಾಮಸಿಯ ಮದರಸದಲ್ಲಿ ಹುಡುಗರಿಗೆ ಕಲಿಸುತ್ತಿದ್ದನು. ಈ ಮದರಸಾದಲ್ಲಿ ಒಟ್ಟು ೫೦ ಹುಡುಗರು ಕಲಿಯುತ್ತಿದ್ದಾರೆ.

ಸಂಪಾದಕೀಯ ನಿಲುವು

ಮದರಸಗಳಲ್ಲಿ ಈ ರೀತಿಯ ಅಸಹ್ಯಕರ ಘಟನೆ ಆಗಾಗ ಬೆಳಕಿಗೆ ಬಂದಿದೆ. ಆದ್ದರಿಂದ ಇಂಗ್ಲೆಂಡಿನಲ್ಲಿನ ಇಸ್ಲಾಮಿ ಅಭ್ಯಾಸಕ ಆರೀಫ್ ಅಜಾಕೀಯ ಇವರ ಅಭಿಪ್ರಾಯದ ಪ್ರಕಾರ ಭಾರತದಲ್ಲಿನ ಎಲ್ಲಾ ಮದರಸಾಗಳಿಗೆ ಬೀಗ ಹಾಕಿ ಎಲ್ಲಾ ಮಕ್ಕಳಿಗೆ ಮುಖ್ಯ ವಾಹಿನಿಯ ಶಾಲೆಯ ಶಿಕ್ಷಣ ನೀಡುವ ಕಾನೂನು ಜಾರಿಗೊಳಿಸುವ ಸಮಯ ಬಂದಿದೆ !