ಹುಡುಗಿಯ ವಿವಾಹದ ವಯಸ್ಸು ೨೧ ವರ್ಷ ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ನವ ದೆಹಲಿ – ವಿವಾಹಕ್ಕಾಗಿ ಹುಡುಗ ಮತ್ತು ಹುಡುಗಿಯ ವಯಸ್ಸು ಒಂದೇ ರೀತಿ ಅಂದರೆ ೨೧ ಮಾಡಬೇಕೆಂದು ಒತ್ತಾಯಿಸಿರುವ ಭಾಜಪದ ನಾಯಕ ಮತ್ತು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ವಿಶೇಷ ಎಂದರೆ ೨೦೨೧ ರಲ್ಲಿ ಕೇಂದ್ರದಿಂದ ಸಂಸತ್ತಿನಲ್ಲಿ ಹುಡುಗಿಯ ವಿವಾಹದ ಕನಿಷ್ಠ ವಯಸ್ಸು ೨೧ ವರ್ಷ ಮಾಡಲು ವಿಧೇಯಕ ಮಂಡಿಸಿತ್ತು. ಆ ವಿಧೇಯಕ ಸಂಸತ್ತಿನ ಸ್ಥಾಯಿ ಸಮಿತಿಯ ಬಳಿ ಕಳುಹಿಸಿದ್ದಾರೆ.

ನ್ಯಾಯವಾದಿ (ಶ್ರೀ.) ಉಪಾಧ್ಯಾಯ ಇವರು ಅರ್ಜಿಯಲ್ಲಿ, ಹುಡುಗ ಹುಡುಗಿಯ ವಿವಾಹದ ವಯಸ್ಸಿನ ಅಂತರ (ಹುಡುಗನಿಗಾಗಿ ೨೧ ವರ್ಷ ಮತ್ತು ಹುಡುಗಿಗೆ ೧೮ ವರ್ಷ) ಯೋಗ್ಯವಾಗಿಲ್ಲ. ಆದ್ದರಿಂದ ಸಂವಿಧಾನದ ಕಲಂ ೧೪,೧೫ ಮತ್ತು ೨೧ ರ ಉಲ್ಲಂಘನೆ ಆಗಿದೆ. ಆದ್ದರಿಂದ ಹುಡುಗಿಯ ವಿವಾಹದ ವಯಸ್ಸು ಕೂಡ ಹುಡುಗನ ರೀತಿಯಲ್ಲಿ ೨೧ ವರ್ಷ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು. ಇದನ್ನು ನ್ಯಾಯಾಲಯ ಈ ಅರ್ಜಿ ತಿರಸ್ಕರಿಸುತ್ತಾ ಈ ಕೆಲಸ ನ್ಯಾಯಾಲಯದಲ್ಲ. ಈ ಪ್ರಕರಣದಲ್ಲಿ ಯಾವುದೇ ಕಾನೂನು ರೂಪಿಸುವುದಿದ್ದರೆ ಅದನ್ನು ಸಂಸತ್ತಿಗೆ ಹೇಳಿರಿ. ಕಾನೂನಿನಲ್ಲಿ ಯಾವುದೇ ಬದಲಾವಣೆ ಮಾಡುವುದಿದ್ದರೆ ಅದನ್ನು ಸಂಸತ್ತಿಗೆ ವಹಿಸಬೇಕು. ಎಂದು ಹೇಳಿದೆ.