ಐಫೋನ್ ಗಾಗಿ ಡೆಲೆವರಿ ಬಾಯ್ ನ ಹತ್ಯೆಗೈದ ಯುವಕ !

ಹಾಸನ – ಇಲ್ಲಿಯ ಅರಸೀಕೆರೆಯಲ್ಲಿ ಓರ್ವ ೨೦ ವರ್ಷದ ಯುವಕನು ೪೬ ಸಾವಿರ ರೂಪಾಯಿಯ ಐಫೋನ್ ಗಾಗಿ ೨೩ ವರ್ಷದ ಡೆಲೆವರಿ ಬಾಯ್ ನ ಹತ್ಯೆ ಮಾಡಿದನು.

೧. ಕೊಲೆಗಾರ ಹೇಮಂತ ದತ್ತ ಇವನು ೪೬ ಸಾವಿರ ರೂಪಾಯಿಯ ಐಫೋನ್ ಆನ್ ಲೈನ್ ನಿಂದ ತರಿಸಿದ್ದನು. ‘ಈ ಕಾರ್ಟ್’ ಈ ವಿತರಣೆ ಕಂಪನಿಯಲ್ಲಿ ಕೆಲಸ ಮಾಡುವ ಹೇಮಂತ ನಾಯಕನು ಐಫೋನ ತೆಗೆದು ಕೊಂಡು ಹೇಮಂತ ದತ್ತ ಅವರ ಮನೆಗೆ ಬಂದಿದ್ದನು. ಆ ಸಮಯದಲ್ಲಿ ದತ್ತನ ಬಳಿ ಐಫೋನ್ ಗಾಗಿ ನೀಡಲು ೪೬ ಸಾವಿರ ನಗದು ಇರಲಿಲ್ಲ. ಅದಕ್ಕಾಗಿ ಅವನು ನಾಯಕ ಇವನನ್ನು ಮನೆಯ ಒಳಗೆ ಕರೆದನು. ನಂತರ ಆತ ನಾಯಕನ ಮೇಲೆ ಚಾಕುವಿನಿಂದ ದಾಳಿ ಮಾಡಿ ಅವನ ಹತ್ಯೆ ಮಾಡಿದನು. ನಾಯಕ ಇವನ ಶವವನ್ನು ವಿಲೇವಾರಿ ಮಾಡಲು ಅವನಿಗೆ ತೋಚಲಿಲ್ಲ, ಆದ್ದರಿಂದ ೩ ದಿನ ಶವವನ್ನು ಮನೆಯಲ್ಲಿ ಇಟ್ಟ. ನಂತರ ಅವನು ಬೈಕ್ ನಲ್ಲಿ ಶವವನ್ನು ಅಂಚೆಕೊಪ್ಪಲು ರೈಲು ನಿಲ್ದಾಣದ ಬಳಿ ಕೊಂಡು ಹೋಗಿ ಸುಟ್ಟನು. ನಂತರ ಪೊಲೀಸರಿಗೆ ಈ ಸುಟ್ಟಿರುವ ಮೃತ ದೇಹ ಕಂಡಿತು. ಪೊಲೀಸರು ಈ ಶವದ ಸಮೀಕ್ಷೆ ನಡೆಸುವಾಗ ಮೇಲಿನ ಘಟನೆ ಬೆಳಕಿಗೆ ಬಂದಿತು.

೨. ಪೊಲೀಸರಿಗೆ ರೈಲು ನಿಲ್ದಾಣದ ಬಳಿ ಶವ ಪತ್ತೆ ಆದ ನಂತರ ಅವರು ಅಕ್ಕ-ಪಕ್ಕದ ಪರಿಸರದಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆರೋಪಿ ಸ್ಕೂಟಿಯಿಂದ ಶವ ತೆಗೆದು ಕೊಂಡು ಹೋಗುವುದು ಕಾಣಿಸಿತು. ಅದರಿಂದ ಪೊಲೀಸರು ಆರೋಪಿಯನ್ನು ಹುಡುಕಿ ಬಂಧಿಸಿದರು.

೩. ಪೊಲೀಸರು ನಡೆಸಿರುವ ವಿಚಾರಣೆಯಲ್ಲಿ ಆರೋಪಿ ಹೇಮಂತ ದತ್ತನು, ಅವನ ಬಳಿ ಡೆಲೆವರಿ ಬಾಯ್ ಗೆ ನೀಡಲು ೪೬ ಸಾವಿರ ರೂಪಾಯಿ ನಗದು ಇರಲಿಲ್ಲ ಆದರೆ ಅವನಿಗೆ ಐಫೋನ್ ಬೇಕಿತ್ತು. ಅದಕ್ಕಾಗಿ ಅವನು ಹೇಮಂತನ ಕೊಲೆ ಮಾಡುವ ನಿರ್ಣಯ ತೆಗೆದುಕೊಂಡನು.

ಸಂಪಾದಕೀಯ ನಿಲುವು

ಯುವ ಪೀಳಿಗೆಯ ಮೇಲೆ ಯೋಗ್ಯ ಸಂಸ್ಕಾರ ಇಲ್ಲದಿರುವುದರ ಪರಿಣಾಮ ! ಇದಕ್ಕೆ ಎಲ್ಲಾ ಪಕ್ಷದ ಆಡಳಿತಗಾರರು, ಪೋಷಕರು ಮತ್ತು ಸಮಾಜ ಹೊಣೆಗಾರರು !