ಬಿಹಾರದಲ್ಲಿ ಭೂ ವಿವಾದದಿಂದ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರ ಸಾವು

ಪಾಟಲಿಪುತ್ರ (ಪಾಟ್ನಾ) – ಫತುಹಾ ಇಲ್ಲಿಯ ಜೆಠುಲಿ ಗ್ರಾಮದಲ್ಲಿ ಭೂ ವಿವಾದದಿಂದ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ ಹಾಗೂ ೪ ಜನರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಆಕ್ರೋಶಗೊಂಡ ಸಮೂಹದಿಂದ ಆರೋಪಿ ಬಚ್ಚಾ ರಾಯನ ಮನೆ, ಉಗ್ರಾಣ ಮತ್ತು ಕಲ್ಯಾಣ ಮಂಟಪಕ್ಕೆ ಬೆಂಕಿ ಹಚ್ಚಿದರು ಹಾಗೂ ಅಲ್ಲಿ ಬಂದಿದ್ದ ಪೊಲೀಸರ ಮೇಲೆ ಕೂಡ ಕಲ್ಲು ತೂರಾಟ ನಡೆಸಿದರು. ಅದರ ನಂತರ ಪೊಲೀಸರಿಂದ ಘಟನಾಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತು ನೇಮಿಸಿದೆ.

ಜೆಠುಲಿ ಗ್ರಾಮದಲ್ಲಿನ ಬಚ್ಚಾ ರಾಯ ಮತ್ತು ಚನಾರಿಕ ರಾಯ ಇವರಲ್ಲಿ ಒಂದು ಆಧುನಿಕ ವ್ಯಾಯಾಮ ಶಾಲೆಯ ಭೂಮಿ ಮತ್ತು ಚುನಾವಣೆಯ ಅಂಶಗಳಿಂದ ವಿವಾದ ಇದೆ. ಬಚ್ಚಾ ರಾಯ ಇವರು ಜೆಠುಲಿ ಗ್ರಾಮದ ಮುಖ್ಯಸ್ಥರ ಪತಿಯಾಗಿದ್ದಾರೆ. ಸರಾಸರಿ ೩ ಕೋಟಿ ರೂಪಾಯಿ ಬೆಲೆ ಬಾಳುವ ಈ ಭೂಮಿಯ ಮೇಲೆ ಇಬ್ಬರ ಕಣ್ಣಿತ್ತು. ಪ್ರಸ್ತುತ ಈ ಭೂಮಿ ಬಚ್ಚಾ ರಾಯ ಇವರ ವಶದಲ್ಲಿದೆ. ಅಲ್ಲಿಯವರು ಮಣ್ಣು ಹಾಕುತ್ತಿರುವಾಗ ಚನಾರಿಕ ರಾಯ ಇಲ್ಲಿ ಬಂದಿದ್ದರಿಂದ ಬಚ್ಚಾ ರಾಯ ಇವರ ಗುಂಪಿನವರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಚನಾರಿಕ ರಾಯ ಇವರ ಸಂಬಂಧಿಕರಾದ ಗೌತಮ್ ಕುಮಾರ (೨೫ ವರ್ಷ) ಮತ್ತು ರೋಷನ್ ರಾಯ (೧೮ ವರ್ಷ) ಇವರು ಸಾವನ್ನಪ್ಪಿದರು ಹಾಗೂ ೪ ಸಂಬಂಧಿಕರು ಗಾಯಗೊಂಡರು.

ಅಪರಾಧವನ್ನು ನಿಯಂತ್ರಣಕ್ಕೆ ತರಲು ಪೊಲೀಸರ ಸಭೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ !

ಪಾಟ್ನಾದಲ್ಲಿನ ಅಪರಾಧಗಳು ನಿಯಂತ್ರಣಕ್ಕೆ ತರುವ ಅಂಶಗಳ ಕುರಿತು ಬಿಹಾರದ ಪೋಲಿಸ ಮಹಾಸಂಚಾಲಕ ಆರ್.ಎಸ್. ಭಟ್ಟಿ ಇವರು ಫೆಬ್ರವರಿ ೧೯ ರಂದು ಮಧ್ಯಾಹ್ನ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಅಲ್ಲಿಂದ ೩೦ ಕಿಲೋಮೀಟರ್ ಅಂತರದಲ್ಲಿರುವ ಫತೂಹದಲ್ಲಿನ ಜೆಟುಲಿ ಗ್ರಾಮದಲ್ಲಿ ಮೇಲಿನ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

ಇದರಿಂದ ಬಿಹಾರದಲ್ಲಿ ಮತ್ತೊಮ್ಮೆ ಜಂಗಲರಾಜ ನಿರ್ಮಾಣವಾಗುತ್ತಿರುವುದು ಸಿದ್ಧವಾಗುತ್ತದೆ !