ನವ ದೆಹಲಿ – ‘ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ’ ಈ ಸಂಸ್ಥೆಯ ಬಳಿ ಎಲ್ಲಾ ನಾಗರಿಕರ ಆಧಾರ ಕಾರ್ಡಿನ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಇದೆ. ಪ್ರಾಧಿಕಾರಣದಿಂದ ಫೆಬ್ರವರಿ ೨೦ ರಂದು ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಭಾರತೀಯ ನಾಗರೀಕರಿಗೆ, ಕಳೆದ ೧೦ ವರ್ಷದಲ್ಲಿನ ಅವರ ಆಧಾರ ಕಾರ್ಡಿನಲ್ಲಿನ ಮಾಹಿತಿ ಯಥಾ ಪ್ರಕಾರ ಇರದಿದ್ದರೆ ಅದನ್ನು ಮಾಡಿಕೊಳ್ಳಬೇಕು. ಅದರಲ್ಲಿ ಅವರ ‘ಗುರುತು’ ಮತ್ತು ‘ನಿವಾಸದ ವಿಳಾಸ’ ನವೀಕರಿಸಲು ಹೇಳಿದ್ದಾರೆ. ಈ ಮಾಹಿತಿ ಆನ್ ಲೈನ್ ಪದ್ಧತಿಯಿಂದ ಅಪ್ಲೋಡ್ ಮಾಡುವದಕ್ಕೆ ೨೫ ರೂಪಾಯಿ ಹಾಗೂ ಆಫ್ ಲೈಲ್ ನಲ್ಲಿ ೫೦ ರೂಪಾಯಿ ಶುಲ್ಕ ತುಂಬಬೇಕು, ಎಂದು ಕೂಡ ಪ್ರಾಧಿಕರಣ ಸ್ಪಷ್ಟಪಡಿಸಿದೆ.
ಭಾರತ ಸರಕಾರದಿಂದ ಎಲ್ಲಾ ನಾಗರಿಕರಿಗೆ ‘ಆಧಾರ್ ಕಾರ್ಡ್’ ಜಾರಿ ಮಾಡುವ ಯೋಜನೆಯ ಮಾಧ್ಯಮದಿಂದ ವಿಶಿಷ್ಟ ಗುರುತು ನೀಡಿದೆ. ಸಪ್ಟೆಂಬರ್ ೨೯, ೨೦೧೦ ರಂದು ಈ ಯೋಜನೆಯ ಆರಂಭ ಮಾಡಿತ್ತು.