ಬಾಗೇಶ್ವರಧಾಮನ ದರ್ಬಾರ್ ನಲ್ಲಿ 220 ಮತಾಂತರಗೊಂಡಿದ್ದ ಹಿಂದೂಗಳ `ಘರವಾಪಸಿ’ !

(ಘರವಾಪಸಿ’ ಎಂದರೆ ಮೊದಲು ಹಿಂದೂ ಧರ್ಮದಲ್ಲಿದ್ದು ನಂತರ ಮತಾಂತರಗೊಂಡಿರುವ ಹಿಂದೂಗಳನ್ನು ಹಿಂದೂ ಧರ್ಮದಲ್ಲಿ ಪುನರ್ ಪ್ರವೇಶ)

ಛತ್ತರಪುರ (ಮಧ್ಯಪ್ರದೇಶ) – ಬಾಗೇಶ್ವರಧಾಮನ ಪ್ರಮುಖ ಧೀರೇಂದ್ರ ಶಾಸ್ತ್ರಿಯವರ ಉಪಸ್ಥಿತಿಯಲ್ಲಿ ಫೆಬ್ರವರಿ 19 ರಂದು ಆಯೋಜಿಸಲಾಗಿದ್ದ ದರ್ಬಾರಿನಲ್ಲಿ 220 ಕ್ರೈಸ್ತರು ಘರವಾಪಸಿ ಮಾಡಿದರು. ಮೊದಲು ಹಿಂದೂ ಆಗಿದ್ದ ಈ 220 ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು. ಈಗ ಅವರಿಗೆ ದೀಕ್ಷೆಯನ್ನು ನೀಡಿ ಘರವಾಪಸಿ ಮಾಡಲಾಯಿತು. ಅಂದರೆ ಅವರನ್ನು ಪುನಃ ಹಿಂದೂ ಧರ್ಮದಲ್ಲಿ ತರಲಾಯಿತು. ಬಲವಂತವಾಗಿ ಅಥವಾ ಆಮಿಷಗಳಿಗೆ ಬಲಿಯಾಗಿ ಮತಾಂತರಗೊಂಡಿರುವ ಮತ್ತು ಈಗ ಪುನಃ ಹಿಂದೂ ಧರ್ಮದಲ್ಲಿ ಬರಲು ಇಚ್ಛಿಸುವ ಹಿಂದೂಗಳೀಗೆ ಘರವಾಪಸಿ ಅಭಿಯಾನವನ್ನು ನಡೆಸಲಾಗುತ್ತಿದೆ. ಧೀರೇಂದ್ರ ಶಾಸ್ತ್ರಿಯವರು ಈ ರೀತಿ ಇಲ್ಲಿಯವರೆಗೆ ಸಾವಿರಾರು ಹಿಂದೂಗಳನ್ನು ಘರವಾಪಸಿ ಮಾಡಿದ್ದಾರೆ.