ಈಗ ಅಮೇರಿಕಾದ ವಾಯು ಕ್ಷೇತ್ರದಲ್ಲಿ ಬೇಹುಗಾರಿಕೆಯ ಬೇಲೂನ್ ಪತ್ತೆ !

ಹೊನೋಲುಲು (ಅಮೇರಿಕ) – ಅಮೇರಿಕಾದ ಹವಾಯಿ ರಾಜ್ಯದ ರಾಜಧಾನಿಯಾಗಿರುವ ಹೋನೋಲುಲು ಇಲ್ಲಿ ಬೇಹುಗಾರಿಕೆಯ ಬೇಲೂನ್ ಹಾರಾಡುವುದು ಕಾಣಿಸಿತು. ಈ ಬೇಲೂನ್ ೫೦ ಸಾವಿರ ಅಡಿ ಎತ್ತರದಲ್ಲಿರುವುದು ಮಾಹಿತಿ ದೊರೆತಿದ್ದರು, ಅಮೇರಿಕಾ ಅಧಿಕಾರಿ ಮತ್ತು ವಾಯು ಸಾರಿಗೆ ನಿಯಂತ್ರಣ ಇಲಾಖೆಯಿಂದ ಈ ವಾರ್ತೆಗೆ ಒತ್ತು ನೀಡಿಲ್ಲ.
ಈ ಹಿಂದೆ ಫೆಬ್ರುವರಿ ೨ ರಂದು ಅಮೆರಿಕಾದ ಮಂಟಾನಾ ನಗರದಲ್ಲಿ ಬೇಹುಗಾರಿಕೆ ನಡೆಸುವ ಚೀನಾದ ಬೆಲೂನ್ ಕಾಣಿಸಿತ್ತು. ಕ್ಯಾರೋಲಿನಾ ದಡದ ಹತ್ತಿರ ಫೆಬ್ರುವರಿ ೫ ರಂದು ಅಮೇರಿಕದ ವಾಯುದಳದ ಎಫ್-೨೨ ಈ ಯುದ್ಧ ವಿಮಾನವು ಅದನ್ನು ನಾಶಗೊಳಿಸಿತ್ತು.