ನೇಪಾಳವು ಸೈದ್ಧಾಂತಿಕವಾಗಿ ಮತ್ತು ವ್ಯವಹಾರಿಕವಾಗಿ ಹಿಂದೂ ರಾಷ್ಟ್ರವೇ ಇದೆ !

ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಪ್ರತಿಪಾದನೆ

(ಸೈದ್ಧಾಂತಿಕ ಎಂದರೆ ಧಾರ್ಮಿಕ ಸಿದ್ಧಾಂತಗಳ ಆಧಾರದ ಮೇಲಿನ )

ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಕಾಠಮಾಂಡು (ನೇಪಾಳ) – ನೇಪಾಳವು ಸೈದ್ಧಾಂತಿಕವಾಗಿ ಮತ್ತು ವ್ಯವಹಾರಿಕವಾಗಿ ಎರಡೂ ದೃಷ್ಟಿಯಲ್ಲಿ ಹಿಂದೂ ರಾಷ್ಟ್ರವೇ ಆಗಿದೆ, ಎಂದು ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ರಾಜಧಾನಿ ಕಾಠಮಾಂಡುವಿನ ಜಗತಪ್ರಸಿದ್ಧ ಪಶುಪತಿನಾಥ ದೇವಾಲಯದಲ್ಲಿ ಪ್ರತಿಪಾದಿಸಿದರು. ಮಹಾಶಿವರಾತ್ರಿಯ ನಿಮಿತ್ತವಾಗಿ ಶಂಕರಾಚಾರ್ಯರು ಈ ದೇವಾಲಯದಲ್ಲಿ ಭಗವಾನ ಶಿವನ ಪೂಜೆಮಾಡಿದರು. ಅನಂತರ ಉಪಸ್ಥಿತರನ್ನುದ್ದೇಶಿಸಿ ತಮ್ಮ ಮಾರ್ಗದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ಮುಂದೆ ಮಾತನಾಡುವಾಗ ಅವರು, “ 2006 ರಲ್ಲಿ ಯಶಸ್ವಿ ಆಂದೋಲನದ ನಂತರ, ನೇಪಾಳವನ್ನು 2008 ರಲ್ಲಿ ‘ಜಾತ್ಯತೀತ’ ರಾಷ್ಟ್ರವೆಂದು ಘೋಷಿಸಲಾಯಿತು. ಈ ಮೂಲಕ ಇಲ್ಲಿನ ಪ್ರಾಚೀನ ರಾಜಪ್ರಭುತ್ವವನ್ನು ಅಂತ್ಯಗೊಳಿಸಲಾಯಿತು. ನೇಪಾಳದಲ್ಲಿ ಹಿಂದೂ ಧರ್ಮವು ಬಹುಸಂಖ್ಯಾತವಾಗಿದೆ, ಅಂದರೆ ಶೇಕಡಾ 81 ಕ್ಕಿಂತ ಹೆಚ್ಚು ಇರುತ್ತಾರೆ. ಆದ್ದರಿಂದ ನೇಪಾಳವು ಸೈದ್ಧಾಂತಿಕವಾಗಿ ಮತ್ತು ವ್ಯವಹಾರಿಕವಾಗಿ ಹೀಗೆ ಎರಡೂ ದೃಷ್ಟಿಯಲ್ಲಿ ಹಿಂದೂ ರಾಷ್ಟ್ರವೇ ಆಗಿದೆ ಮತ್ತು ನನಗೂ ಹಾಗೆಯೇ ಅನಿಸುತ್ತದೆ.”

ಈ ಸಂದರ್ಭದಲ್ಲಿ ಶಂಕರಾಚಾರ್ಯರ ಮೂಲಕ 8ನೇ ಶತಮಾನದ ಆಧ್ಯಾತ್ಮಿಕ ಪ್ರತೀಕವಾಗಿರುವ ಆದಿ ಶಂಕರಾಚಾರ್ಯರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ಶ್ರೀ ಪಶುಪತಿನಾಥನ ದರ್ಶನಕ್ಕಾಗಿ ನೇಪಾಳದಲ್ಲಿ ಭಾರತದಿಂದ ಸಾವಿರಾರು ಸಾಧುಗಳು!

ಮಹಾಶಿವರಾತ್ರಿಯ ನಿಮಿತ್ತವಾಗಿ ಭಾರತದಿಂದ ಭಗವಾನ ಶ್ರೀ ಪಶುಪತಿನಾಥನ ದರ್ಶನಕ್ಕಾಗಿ 3,500 ಸಾಧುಗಳು ಮತ್ತು 1,000 ನಾಗಾ ಸಾಧುಗಳು ನೇಪಾಳಕ್ಕೆ ಬಂದಿದ್ದಾರೆ. ಈ ಸಾಧುಗಳಿಗೆ ದೇವಸ್ಥಾನವು ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದೆ. ಇಲ್ಲಿ ದರ್ಶನಕ್ಕಾಗಿ ಭಾರತದಿಂದ ಇತರ ನಾಗರಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಬಂದಿದ್ದಾರೆ. ಆದ್ದರಿಂದ ಭಕ್ತರ ಸಾಲು ನೆರೆದಿತ್ತು. ಇಲ್ಲಿ ಭದ್ರತೆಗಾಗಿ 7 ಸಾವಿರ ಸಿಬ್ಬಂದಿ ಹಾಗೂ 10 ಸಾವಿರ ಸ್ವಯಂಸೇವಕರನ್ನು ನೇಮಿಸಲಾಗಿತ್ತು