ನೆರೆಹಾವಳಿಯ ಸಮಯದಲ್ಲಿ ತುರ್ಕಿಯು ಪಾಕಿಸ್ತಾನಕ್ಕೆ ಕಳುಹಿಸಿದ ಸಾಮಗ್ರಿಗಳನ್ನು ತನ್ನ ಹೆಸರಿನಲ್ಲಿ ತುರ್ಕಿಗೆ ಕಳುಹಿಸಿತು !

ಪಾಕಿಸ್ತಾನದಿಂದ ತುರ್ಕಿಯ ಭೂಕಂಪ ಪೀಡಿತರಿಗೆ ಸಹಾಯದ ಹೆಸರಿನಡಿಯಲ್ಲಿ ನಾಚಿಕೆಗೇಡಿನ ಕೃತ್ಯ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಅತ್ಯಂತ ನಾಚಿಕೆಗೇಡಿನ ಕೃತ್ಯವನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ಕಳೆದ ವರ್ಷ ಬಂದಿದ್ದ ನೆರೆಹಾವಳಿಯಲ್ಲಿ ತುರ್ಕಿ ಸಹಾಯವೆಂದು ಏನೆಲ್ಲಾ ಸಾಮಗ್ರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತೋ, ಅದೇ ಸಾಮಗ್ರಿಗಳನ್ನು ಪಾಕಿಸ್ತಾನ ತುರ್ಕಿಗೆ ಭೂಕಂಪದ ಸಹಾಯವೆಂದು ಮರಳಿ ಕಳುಹಿಸಿದೆ.

ಪಾಕಿಸ್ತಾನದಿಂದ ತುರ್ಕಿಗೆ 21 ಕಂಟೇನರ ಕಳುಹಿಸಲಾಗಿತ್ತು. ಅದನ್ನು ತೆರೆದಾಗ, ಸಾಮಗ್ರಿಗಳು ತುರ್ಕಿ ದೇಶವೇ ಪಾಕಿಸ್ತಾನಕ್ಕೆ ನೆರೆಹಾವಳಿಯ ಸಮಯದಲ್ಲಿ ಕಳುಹಿಸಿತ್ತು ಎಂಬುದು ಗಮನಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ಹಿರಿಯ ಪತ್ರಕರ್ತ ಶಾಹಿರ ಮಂಜೂರ ಇವರು ಒಂದು ವಾರ್ತಾ ವಾಹಿನಿಯೊಂದಿಗೆ ಮಾತನಾಡುತ್ತಾ, ಪಾಕಿಸ್ತಾನ ಕಳುಹಿಸಿರುವ ಸಾಮಗ್ರಿಗಳ ಮೇಲೆ ಪಾಕಿಸ್ತಾನ ತನ್ನ ಹೆಸರನ್ನು ಬರೆದಿದ್ದರೂ, ಅದರ ಮೇಲೆ ‘ತುರ್ಕಿಯಿಂದ ಪ್ರೀತಿಯ ಸಹಾಯ’ ಎಂದು ಬರೆದಿರುವುದು ಕಂಡು ಬಂದಿದೆಯೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಯಾರ ಬಳಿಕ ತನ್ನದೇ ದೇಶದ ನಾಗರಿಕರಿಗೆ ಕೊಡಲು ಏನೂ ಇಲ್ಲವೋ, ಆ ದೇಶವು ಇತರರಿಗೆ ಸಹಾಯ ಮಾಡುವ ಇಂತಹ ಲಜ್ಜಾಸ್ಪದ ಪ್ರಯತ್ನವನ್ನು ಎಂದಿಗೂ ಮಾಡಬಾರು. ಎನ್ನುವುದು ಗಮನಕ್ಕೆ ಬರುತ್ತದೆ ! ಪಾಕಿಸ್ತಾನದ ಮಾನಸಿಕತೆ ಹೇಗಿದೆಯೆನ್ನುವುದು ಇದರಿಂದ ಪುನಃ ಮತ್ತೊಮ್ಮೆ ಸ್ಪಷ್ಟವಾಗುತ್ತದೆ !