ಯೂ-ಟ್ಯೂಬ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಭಾರತೀಯ ಮೂಲದ ನೀಲ ಮೋಹನರ ನೇಮಕ

ಭಾರತೀಯ ಮೂಲದ `ಯೂಟ್ಯೂಬ’ ನ ಹೊಸ ಮುಖ್ಯ ಕಾರ್ಯಕಾರಿ ಅಧಿಕಾರಿ ನೀಲ ಮೋಹನ

ನವ ದೆಹಲಿ – ಅಮೇರಿಕದಲ್ಲಿರುವ ಭಾರತೀಯ ಮೂಲದ ನೀಲ ಮೋಹನರನ್ನು `ಯೂಟ್ಯೂಬ’ ನ ಹೊಸ ಮುಖ್ಯ ಕಾರ್ಯಕಾರಿ ಅಧಿಕಾರಿಯೆಂದು ನೇಮಿಸಲಾಗಿದೆ. ಈ ವಿಷಯವನ್ನು `ಯುಟ್ಯೂಬ’ ನ ಮೂಲ ಕಂಪನಿ `ಅಲ್ಫಾಬೇಟ ಇಂಕ’ ಘೋಷಣೆ ಮಾಡಿದೆ. ಸುಸಾನ ವ್ಹೊಜಿಕಿ ಈ ಹುದ್ದೆಯಿಂದ ಕೆಳಗಿಳಿದ ಬಳಿಕ ನೀಲ ಮೋಹನರನ್ನು ನೇಮಿಸಲಾಗಿದೆ. ಕೌಟುಂಬಿಕ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಯುಟ್ಯೂಬಗೆ ತ್ಯಾಗಪತ್ರ ನೀಡುತ್ತಿರುವುದಾಗಿ ಸುಸಾನ ವ್ಹೊಜಿಕಿಯವರು ಹೇಳಿದ್ದರು. ನೀಲ ಮೋಹನ 2008 ರಲ್ಲಿ ಗೂಗಲನಲ್ಲಿ ನೌಕರಿಗೆ ಸೇರಿದ್ದರು. ನೀಲ ಮೋಹನ ಮತ್ತು ಸುಸಾನ ವ್ಹೊಜಿಕಿಯವರು 15 ವರ್ಷಗಳ ವರೆಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ.