‘ನಾವು ನ್ಯಾಯೋಚಿತ ವಾರ್ತೆಗಳನ್ನು ನೀಡುತ್ತಿರುತ್ತೇವೆ ! (ಅಂತೆ) – ಬಿಬಿಸಿಯ ದಾವೆ

60 ಗಂಟೆಗಳ ಬಳಿಕ ಬಿಬಿಸಿಯ ಕಾರ್ಯಾಲಯದಲ್ಲಿನ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ ಮುಕ್ತಾಯ

ನವ ದೆಹಲಿ – ಆದಾಯ ತೆರಿಗೆ ವಿಭಾಗದಿಂದ ನಡೆದ ಬಿಬಿಸಿಯ ದೆಹಲಿ ಮತ್ತು ಮುಂಬಯಿಯ ಕಚೇರಿಯ ಸಮೀಕ್ಷೆ 60 ಗಂಟೆಗಳ ಬಳಿಕ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಬಿಬಿಸಿಯ ವಕ್ತಾರ ಒಂದು ಮನವಿಯನ್ನು ಬಿಡುಗಡೆ ಮಾಡಿ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೆಹಲಿ ಮತ್ತು ಮುಂಬಯಿಯ ನಮ್ಮ ಕಚೇರಿಯಿಂದ ಹೊರಟು ಹೋಗಿದ್ದಾರೆ. ನಾವು ಆದಾಯ ತೆರಿಗೆ ಇಲಾಖೆಗೆ ಸಹಕರಿಸುತ್ತೇವೆ. ಆದಷ್ಟು ಬೇಗನೆ ಈ ಪ್ರಕರಣ ಮುಕ್ತಾಯಗೊಳ್ಳುವ ಆಸೆಯಿದೆ. ನಮ್ಮ ಓದುಗರು, ಶ್ರೋತ್ರುಗಳು ಮತ್ತು ವೀಕ್ಷಕರಿಗೆ ನ್ಯಾಯೋಚಿತವಾದ ವಾರ್ತೆಗಳನ್ನು ನೀಡಲು ನಾವು ವಚನಬದ್ಧರಾಗಿದ್ದೇವೆ. ನಾವು ಒಂದು ವಿಶ್ವಾಸಾರ್ಹ, ನ್ಯಾಯೋಚಿತ, ಅಂತರರಾಷ್ಟ್ರೀಯ ಮತ್ತು ಸ್ವತಂತ್ರ ಮಾಧ್ಯಮವಾಗಿದ್ದೇವೆ ಎಂದು ತಿಳಿಸಿದೆ. (ಇದರ ಮೇಲೆ ಯಾರು ವಿಶ್ವಾಸ ಇಡುವರು ? – ಸಂಪಾದಕರು) ನಾವು ನಮ್ಮ ಸಹೋದ್ಯೋಗಿ ಮತ್ತು ವರದಿಗಾರರನ್ನು ಬೆಂಬಲಿಸುತ್ತೇವೆ. ಅವರು ಯಾವುದೇ ಹೆದರಿಕೆ ಮತ್ತು ಆಮಿಷಕ್ಕೆ ಒಳಗಾಗದೇ ವಾರ್ತೆಗಳನ್ನು ನೀಡುತ್ತಿರಬೇಕು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಬಿಬಿಸಿಯಿಂದ ನ್ಯಾಯೋಚಿತ ವಾರ್ತೆಗಳನ್ನು ನೀಡುವ ದಾವೆಯ ವಿಷಯದ ಬಗ್ಗೆ ಯಾವುದೇ ಧರ್ಮಾಭಿಮಾನಿ ಹಿಂದೂ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ವಿಶ್ವಾಸ ಇಡಲು ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯವಾಗಿದೆ !