|
ಬೆಂಗಳೂರು – ರಾಜ್ಯದ ಭಾಜಪ ಸರಕಾರವು ರಾಜ್ಯದ 2023-24 ರ ಆವವ್ಯಯವನ್ನು (ಬಜೆಟನ್ನು) ಮಂಡಿಸಿದೆ. ಅದರಲ್ಲಿ ಮುಂದಿನ 2 ವರ್ಷಗಳಲ್ಲಿ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ 1 ಸಾವಿರ ಕೋಟಿ ರೂಪಾಯಿಗಳ ಏರ್ಪಾಡು ಮಾಡಿದೆ. ಅದೇ ರೀತಿ ರಾಮನಗರದಲ್ಲಿರುವ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ. ರಾಮನಗರದ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸಿ.ಎನ್. ಅಶ್ವಥ ನಾರಾಯಣ ಇವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಇವರು ಅಯೋಧ್ಯೆಯ ಶ್ರೀರಾಮನ ಭೂಮಿಯ ಮಾದರಿಯಲ್ಲಿಯೇ ರಾಮನಗರದಲ್ಲಿನ ರಾಮದೇವರ ಬೆಟ್ಟದಲ್ಲಿ `ದಕ್ಷಿಣ ಭಾರತದ ಅಯೋಧ್ಯೆ’ಯಂತೆ ಶ್ರೀರಾಮ ಮಂದಿರ ನಿರ್ಮಿಸಲು ಒಂದು ಅಭಿವೃದ್ಧಿ ಸಮಿತಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದರು.
Dr Ashwathanarayana-ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ: ಬಜೆಟ್ ಘೋಷಣೆಗೆ ಅಶ್ವತ್ಥನಾರಾಯಣ ಸಂತಸ
#yogiadityanath https://t.co/tSocUIVJnq— vijaykarnataka (@Vijaykarnataka) February 17, 2023