ನವ ದೆಹಲಿ – ಆದಾಯ ತೆರಿಗೆ ಇಲಾಖೆಯಿಂದ ಬಿಬಿಸಿಯ ದೆಹಲಿ ಮತ್ತು ಮುಂಬಯಿಯಲ್ಲಿನ ಕಚೇರಿಗಳಲ್ಲಿ ಎರಡನೆಯ ದಿನವೂ ಸಮೀಕ್ಷೆ ನಡೆಯುತ್ತಿದೆ. ತೆರಿಗೆ ವಿಭಾಗದ ಅಧಿಕಾರಿಗಳು ಇಲ್ಲಿನ ಹಣಕಾಸು ಇಲಾಖೆಯ ಸಿಬ್ಬಂಧಿಗಳ ಸಂಚಾರಿವಾಣಿ, ಸಂಚಾರಿ ಗಣಕಯಂತ್ರಗಳನ್ನು ಮತ್ತು ಗಣಕಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸಮೀಕ್ಷೆಯ ಸಮಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಬಿಬಿಸಿ ಇಂಡಿಯಾದ ಸಂಪಾದಕರ ನಡುವೆ ವಾಗ್ವಿವಾದ ನಡೆದಿದೆ ಎಂದು ಹೇಳಲಾಗುತ್ತದೆ. ಸಂಪಾದಕರು ಅಧಿಕಾರಿಗಳಿಗೆ ಸಂಪಾದಕೀಯ ವಿಭಾಗದ ಬರಹವನ್ನು ನೀಡಲು ನಿರಾಕರಿಸಿದರು. ಆದಾಯ ತೆರಿಗೆ ವಿಭಾಗದ ಅಧಿಕಾರಿಗಳು ಬಿಬಿಸಿಯ ಮೇಲೆ ಅಂತರರಾಷ್ಟ್ರೀಯ ತೆರಿಗೆಯಲ್ಲಿ ಏರುಪೇರಾಗಿದೆ ಎಂದು ಆರೋಪಿಸಿದ್ದಾರೆ. ಅನೇಕ ತಾಸುಗಳಿಂದ ಅಧಿಕಾರಿಗಳು ಸಂಚಾರಿ ಸಂಗಣಕ ಹಾಗೂ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.
ದೆಹಲಿ, ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆ: ಯುಎಸ್ ಪ್ರತಿಕ್ರಿಯೆ!#InternationalNews #TaxSurvey #BBC #Delhi #Mumbai #ಒನ್ಇಂಡಿಯಾಕನ್ನಡಸುದ್ದಿhttps://t.co/rXrs4DQjfz
— oneindiakannada (@OneindiaKannada) February 15, 2023
ಸದ್ಯ ಏನೂ ಹೇಳುವ ಹಾಗಿಲ್ಲ ! – ಅಮೇರಿಕಾ
ಅಮೇರಿಕಾದ ರಾಜ್ಯ ವಿಭಾಗದ ವಕ್ತಾರ ನೇಡ್ ಪ್ರೈಸ್ ಇವರಿಗೆ ಬಿಬಿಸಿಯ ಸಮೀಕ್ಷೆಯ ಬಗ್ಗೆ ವಿಚಾರಿಸಿದಾಗ ಅವರು, ನಮಗೆ ಅದರಲ್ಲಿನ ಸತ್ಯ ತಿಳಿದಿದೆ; ಆದರೆ ಸದ್ಯ ಆ ವಿಷಯದಲ್ಲಿ ಏನೂ ಹೇಳುವ ಹಾಗಿಲ್ಲ. ಈ ವಿಷಯದ ಮಾಹಿತಿಗಾಗಿ ನೀವು ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿರಿ ಎಂದು ಹೇಳಿದರು.