ಕೊಯಿಬಂತ್ತೂರು ಬಾಂಬ್‌ಸ್ಫೋಟ ಪ್ರಕರಣದಲ್ಲಿ ಎನ್.ಐ.ಎ.ಯ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ೬೦ ಸ್ಥಳಗಳಿಗೆ ದಾಳಿ !

ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಜನರ ಸ್ಥಳಗಳಲ್ಲಿ ದಾಳಿ !

ನವ ದೆಹಲಿ – ತಮಿಳುನಾಡುನ ಕೊಯಿಂಬತ್ತೂರಿನಲ್ಲಿ ವಾಹದಲ್ಲಿ ನಡೆದ ಬಾಂಬ್‌ಸ್ಫೋಟದ ಪ್ರರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ತಮಿಳನಾಡು, ಕೇರಳ ಮತ್ತು ಕರ್ನಾಟಕದ ೬೦ ಸ್ಥಳಗಳಿಗೆ ದಾಳಿ ಮಾಡಿದೆ. ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಜನರ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಕರ್ನಾಟಕದಲ್ಲಿ ಒಟ್ಟು ೪೫ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. ಅಕ್ಟೋಬರ ೨೩, ೨೦೨೨ ರಂದು ಕೊಯಿಬಂತ್ತೂರಿನ ಸಂಗಮೇಶ್ವರ ದೇವಸ್ಥಾನದ ಸಮೀಪ ನಿಂತಿದ್ದ ವಾಹನದಲ್ಲಿ ಸ್ಫೋಟವಾಗಿತ್ತು.

ಅದರಲ್ಲಿ ವಾಹನದ ಮಾಲಕ ಜೆಮಿಶಾ ಮುಬೀನ ಇವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಪೊಲೀಸರು ೫ ಜನರನ್ನು ಬಂಧಿಸಿದ್ದರು. ಮಹಮ್ಮದ ಥಲಕಾ, ಮಹಮ್ಮದ ಅಸರುದ್ದೀನ್, ಮಹಮ್ಮದ ರಿಯಾಝ್, ಫಿರೋಜ್ ಇಸ್ಮಾಯಿಲ್ ಮತ್ತು ಮಹಮ್ಮದ ನವಾಜ ಇದು ಬಂಧಿಸಲ್ಪಟ್ಟವರ ಹೆಸರುಗಳಾಗಿವೆ.