‘ಓಂ’ ಮತ್ತು ‘ಅಲ್ಲಾ’ ಒಂದೇ ಆಗಿದ್ದರೆ, ಕಾಬಾ ಮಸೀದಿಯ ಮೇಲೆ ಓಂ ಬರೆಯಬೇಕು !

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಂದ ಮೌಲಾನಾ ಅರ್ಶದ ಮದನಿಯವರಿಗೆ ಆಹ್ವಾನ !

ನವ ದೆಹಲಿ – ಜಮಿಯತ ಉಲೇಮಾ-ಎ- ಹಿಂದನ ಮುಖಂಡ ಮೌಲಾನಾ (ಇಸ್ಲಾಂ ಅಧ್ಯಯನಕಾರ) ಅರ್ಶದ ಮದನಿಯವರು ಇಲ್ಲಿಯ ಸದ್ಭಾವನಾ ಸಮ್ಮೇಳನದಲ್ಲಿ ಮಾತನಾಡುವಾಗ ‘ಓಂ’ ಮತ್ತು ‘ಅಲ್ಲಾ’ ಒಂದೇ ಆಗಿದೆಯೆಂದು ಹೇಳಿದ್ದರು. ಅದಕ್ಕೆ ಅಲ್ಲಿ ಉಪಸ್ಥಿತರಿದ್ದ ಆಚಾರ್ಯ ಲೊಕೇಶ ಮುನಿಯವರು ವಿರೋಧಿಸುತ್ತಾ ಇತರೆ ಧರ್ಮದವರ ಸಂತರೊಂದಿಗೆ ವೇದಿಕೆಯನ್ನು ಬಿಟ್ಟು ಕೆಳಗೆ ಇಳಿದಿದ್ದರು. ಈ ಹೇಳಿಕೆಯ ಬಗ್ಗೆ ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಮಾತನಾಡುತ್ತಾ, ಒಂದು ವೇಳೆ ಅರ್ಶದ ಮದನಿಯವರು ‘ಓಂ’ ಮತ್ತು ‘ಅಲ್ಲಾ’ ಒಂದೇ ಆಗಿದೆ ಎಂದು ದಾವೆ ಮಾಡಿದ್ದರೇ, ಅವರು ಇದನ್ನು ಪ್ರಮಾಣೀಕರಿಸಲು ಅವರ ಮಶೀದಿಯ ಮೇಲೆ ‘ಓಂ’ ಬರೆಯಬೇಕು.

ಇದರ ಪ್ರಾರಂಭವನ್ನು ಮಕ್ಕಾದಲ್ಲಿರುವ ಕಾಬಾ ಮಶೀದಿಯಿಂದ ಮಾಡಬೇಕು. ಅಲ್ಲಿ ಬಂಗಾರದ ತಗಡನ್ನು ಉಪಯೋಗಿಸಿ ಓಂ ಬರೆಯಬೇಕು. ತದನಂತರ ದೆಹಲಿಯ ಜಾಮಾ ಮಸಿದಿಯ ಮೇಲೆ ಹಾಗೆ ಬರೆಯಬೇಕು. ಎಲ್ಲೆಲ್ಲಿ ‘ಅಲ್ಲಾ’ ಎಂದು ಬರೆಯಲಾಗಿದೆಯೋ ಅಲ್ಲಲ್ಲಿ ‘ಓಂ’ ಎಂದು ಬರೆಯಬೇಕು; ಏಕೆಂದರೆ ಅವರ ದೃಷ್ಟಿಯಲ್ಲಿ ಎರಡೂ ಒಂದೇ ಆಗಿದೆ, ಎಂದು ಹೇಳಿದ್ದಾರೆ.