ಮದನಿ ಇವರ ಹೇಳಿಕೆಯನ್ನು ಖಂಡಿಸಲು ಎಲ್ಲಾ ಧರ್ಮದ ಸಂತರು ವೇದಿಕೆಯಿಂದ ತಾವಾಗಿಯೇ ಕೆಳಗೆ ಇಳಿದರು !
ನವ ದೆಹಲಿ – ಇಲ್ಲಿಯ ರಾಮಲೀಲಾ ಮೈದಾನದಲ್ಲಿ ಫೆಬ್ರುವರಿ ೧೦ ರಿಂದ ೧೩ ಈ ಕಾಲಾವಧಿಯಲ್ಲಿ ಜಮಿಯತ್ ಉಲೇಮಾ-ಎ-ಹಿಂದನ ಅಧಿವೇಶನದ ಆಯೋಜನೆ ಮಾಡಿದ್ದರು. ಅದರ ಪ್ರಯುಕ್ತ ಫೆಬ್ರುವರಿ ೧೩ ರಂದು ಆಯೋಜಿಸಿರುವ ‘ಸದ್ಭಾವನಾ ಸಮ್ಮೇಳನ’ದಲ್ಲಿ ಎಲ್ಲಾ ಧರ್ಮದ ಸಂತರಿಗೆ ಆಮಂತ್ರಣ ನೀಡಿದ್ದರು. ಈ ಸಮಯದಲ್ಲಿ ಜಮಯಿತನ ಮುಖಂಡ ಮೌಲಾನ (ಇಸ್ಲಾಂನ ಅಭ್ಯಾಸಕ) ಅರ್ಶದ ಮದನಿ ಇವರು ಸರಸಂಘಚಾಲಕರ ಹೇಳಿಕೆಗೆ ವಿರೋಧಿಸುತ್ತ ‘ಅಲ್ಲಾ ಮತ್ತು ಓಂ ಒಂದೇ ಆಗಿದೆ’, ಎಂದು ಹೇಳಿಕೆ ನೀಡಿದರು. ಇದಕ್ಕೆ ವೇದಿಕೆಯಲ್ಲಿರುವ ಜೈನ ಗುರು ಲೋಕೇಶ ಮುನಿ ಇವರು ಆಕ್ಷೇಪ ವ್ಯಕ್ತಪಡಿಸಿದರು. ಅದರ ನಂತರ ಅವರ ಜೊತೆ ಇತರ ಧರ್ಮದ ಸಂತರು ವೇದಿಕೆಯಿಂದ ಕೆಳಗಿಳಿದರು. ಪ . ಪೂ. ಸರಸಂಘ ಚಾಲಕ ಡಾ. ಮೋಹನಜಿ ಭಾಗವತ ಇವರು ಇತ್ತೀಚಿಗಷ್ಟೇ ‘ಹಿಂದೂ ಮತ್ತು ಮುಸಲ್ಮಾನರ ಪೂರ್ವಜರು ಒಂದೇ ಆಗಿರುವರು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಮದನಿ ಇವರು ವಿರೋಧಿಸಿದ್ದರು.
(ಸೌಜನ್ಯ : Hindustan Times)
ಏನು ಹೇಳಿದರು ಮೌಲಾನ ಮದನಿ ?
ಮೌಲಾನ ಅರ್ಶದ ಮದನಿ ಇವರು ಜಮಿಯತನ ಮುಖಂಡ ಮಹಮೂದ ಮದನಿ ಇವರ ಸೋದರ ಸಂಬಂದಿಯಾಗಿದ್ದಾರೆ. ಮೌಲಾನ ಮದನಿ ಇವರು, ನಿಮ್ಮ ಪೂರ್ವಜರು ಹಿಂದೂ ಅಲ್ಲ, ಅವರು ಮನು ಎಂದರೆ ಆದಮ ಆಗಿದ್ದರು. ಆಗ ಯಾರು ಇರಲಿಲ್ಲ. ಶ್ರೀ ರಾಮ, ಬ್ರಹ್ಮ, ಶಿವ ಇವರ್ಯಾರು ಇರಲಿಲ್ಲ. ಆಗ ಯಾರು ಇಲ್ಲದಿರುವಾಗ ಮನು ಯಾರ ಪೂಜೆ ಮಾಡಿದನು ? ಎಂದು ನನ್ನ ಪ್ರಶ್ನೆಯಾಗಿದೆ ? ಎಂದು ಹೇಳಿದರು. ಯಾರೋ ‘ಅವರು ಮಹಾದೇವನ ಪೂಜೆ ಮಾಡುತ್ತಿದ್ದರು’, ಎಂದು ಹೇಳುತ್ತಾರೆ, ಇನ್ನು ಕೆಲವರು ಮನು ಓಂ ನ ಪೂಜೆ ಮಾಡಿದನು ಎಂದು ದಾವೇ ಮಾಡುತ್ತಾರೆ. ಓಂ ಯಾರು ? ಅನೇಕರು, ಅದು ಗಾಳಿ ಆಗಿದೆ. ಅದಕ್ಕೆ ಯಾವುದೇ ರೂಪ ಅಥವಾ ಬಣ್ಣ ಇಲ್ಲ. ಅದು ಜಗತ್ತಿನಲ್ಲಿ ಎಲ್ಲಾ ಕಡೆ ಪಸರಿಸಿದೆ. ಇದಕ್ಕೆ ನಾವು ಅಲ್ಲಾ ಎನ್ನುತ್ತೇವೆ. ನೀವು ಅದನ್ನು ದೇವರು ಎನ್ನುತ್ತಿರಿ.
ಜೈನ ಮುನಿ ಲೋಕೇಶ ಇವರಿಂದ ವಿರೋಧ !
ಮೌಲಾನ ಮದನಿ ಇವರ ಭಾಷಣ ನಡೆಯುತ್ತಿರುವಾಗಲೇ ಜೈನ ಮುನಿ ಲೋಕೇಶ್ ಇವರು ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಈ ಅಧಿವೇಶನ ಜನರನ್ನು ಜೋಡಿಸುವುದಕ್ಕಾಗಿ ಆಯೋಜಿಸಿದೆ. ಆದ್ದರಿಂದ ಈ ರೀತಿಯ ಹೇಳಿಕೆಗೆ ಯಾವುದೇ ಔಚಿತ್ಯವಿಲ್ಲ, ಎಂದು ಹೇಳುತ್ತಾ ಅವರು ವೇದಿಕೆಯಿಂದ ಕೆಳಗಿಳಿದರು. ಅದೇ ಸಮಯದಲ್ಲಿ ಇತರ ಧರ್ಮದ ಸಂತರು ಕೂಡ ವೇದಿಕೆಯಿಂದ ಕೆಳಗಿಳಿದರು.
‘You have ruined the meeting’: Jain Muni Acharya Lokesh slams Maulana Madani for making controversial remarks https://t.co/04mEvcW3pw
— The Times Of India (@timesofindia) February 12, 2023
ಮದನಿ ಮಾತು ಮುಂದುವರಿಸಿ, ಪೈಗಂಬರನ ಅವಮಾನ ಮುಸಲ್ಮಾನರು ಸಹಿಸುವುದಿಲ್ಲ. ಆದ್ದರಿಂದ ಅವರ ವಿರುದ್ಧ ಯಾರು ಹೇಳಿಕೆ ನೀಡಬಾರದು. ಭಾರತದಲ್ಲಿ ಪ್ರಸ್ತುತ ಶಿಕ್ಷಣದಲ್ಲಿ ಕೇಸರಿಕರಣವಾಗುತ್ತಿದೆ. ಅದು ಯೋಗ್ಯವಲ್ಲ. ಯಾರ ಮೇಲೆ ಕೂಡ ಇನ್ನೊಂದು ಧರ್ಮದ ಪುಸ್ತಕಗಳನ್ನು ಹೇರಬಾರದು. ಅದು ಸಂವಿದಾನದ ವಿರುದ್ಧವಾಗಿದೆ ಎಂದು ಹೇಳಿದರು.
ಸೂಫಿ ಇಸ್ಲಾಮಿಕ್ ಬೋರ್ಡ್ ನಿಂದ ಜಮಿಯತನ ಅಧ್ಯಕ್ಷ ಮೌಲಾನ ಮಹಮ್ಮದ್ ಮದನಿ ಇವರ ವಿರೋಧ !
ಭಾರತದ ಮೂಲ ಧರ್ಮ ಸನಾತನವಾಗಿದೆ !
ಜಮಿಯತ್ ಉಲೆಮಾ-ಎ-ಹಿಂದ್ ನ ಮುಖಂಡ ಮಹಮೂದ ಮದನಿ ಇವರು ಈ ಅಧಿವೇಶನದ ಹಿಂದಿನ ದಿನ, ಭಾರತ ಇದು ಇಸ್ಲಾಂನ ಮೂಲ ದೇಶವಾಗಿದೆ ಎಂದು ಹೇಳಿದ್ದರು. ಅದರ ಬಗ್ಗೆ ಸೂಫಿ ಇಸ್ಲಾಮಿಕ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದೆ. ಬೋರ್ಡನ ರಾಷ್ಟ್ರೀಯ ವಕ್ತಾರರು ಕಶಿಶ ವಾರಸಿ ಇವರು, ಇಸ್ಲಾಂ ಇದು ಭಾರತದ ಮೂಲ ಧರ್ಮವಲ್ಲ. ಇಲ್ಲಿಯ ಮೂಲ ಧರ್ಮ ಸನಾತನವಾಗಿದೆ. ಮಹಮೂದ್ ಮದನಿ ಇವರ ಬಗ್ಗೆ ಹೇಳುವುದಾದರೆ, ಅವರು ಫತವಾದ ಕಾರ್ಖಾನೆಯಾಗಿದ್ದಾರೆ. ಇಸ್ಲಾಂ ಮೊದಲ ಬರುವ ಮುಸಲ್ಮಾನರು ತಂದರು. ಹಜರತ್ ಮದಲತುಲ್ ಔಲಿಯಾ, ಮಕರಬುರ್ ಶರೀಫ್ ಬಂದರು. ಅದರ ನಂತರ ಅರಬಸ್ತಾನದಲ್ಲಿನ ಕಾಸಿಮ ಬಿನ್ ಮಲಿಕ್ ಭಾರತದಲ್ಲಿನ ಕೇರಳಗೆ ಬಂದರು. ಅದರ ನಂತರ ಪಾಕಿಸ್ತಾನದ ಖ್ವಾಜಾ ಗರಿಬ ನವಾಜ್ ಬಂದರು. ಅವರು ಇಲ್ಲಿ ಬಂದು ಇಸ್ಲಾಂನ ಪ್ರಸಾರ ಮಾಡಿದರು. ಅವರ ಚಾರಿತ್ರೆದಿಂದ ಮತ್ತು ಅವರ ಒಳ್ಳೆಯ ವರ್ತನೆಯಿಂದ ಇಲ್ಲಿ ಇಸ್ಲಾಂನ ಪ್ರಸಾರವಾಯಿತು. ಇಂದು ದೇಶದಲ್ಲಿನ ಸರಕಾರ ಯಾವುದೇ ಮುಸಲ್ಮಾನರನ್ನು ‘ಹೊರಗಿನ ಮನುಷ್ಯ’ ಎಂದು ಹೇಳುವುದಿಲ್ಲ ಎಂದು ಹೇಳಿದರು.