ಟರ್ಕಿಯಲ್ಲಿನ ಭೂಕಂಪದಿಂದ ಪೃಥ್ವಿಯಲ್ಲಿ ೩೦೦ ಕಿಲೋಮೀಟರ್ ಉದ್ದದ ಬಿರುಕು !

ಅಂಕಾರಾ (ಟರ್ಕಿ) – ಟರ್ಕಿ ಮತ್ತು ಸಿರಿಯಾದಲ್ಲಿ ಫೆಬ್ರುವರಿ ೬ ರಂದು ೭.೮ ರಿಕ್ಟರ್ ನ ವಿನಾಶಕಾರಿ ಭೂಕಂಪದಿಂದ ಪೃಥ್ವಿಯಲ್ಲಿ ೩೦೦ ಕಿಲೋಮೀಟರ್ ಉದ್ದದ ಬಿರುಕು ಬಿಟ್ಟಿರುವುದು ಕಂಡು ಬಂದಿದೆ.

ಬ್ರಿಟನ್ನಿನಲ್ಲಿ ‘ಸೆಂಟರ್ ಫಾರ್ ದಿ ಅಬ್ಸರ್ವೇಷನ್ ಅಂಡ್ ಮಾಡಲಿಂಗ್ ಅರ್ಥ್ ಕ್ವೆಕ್ಸ’ ನಿಂದ (‘ಕಾಮೆಟ’) ಭೂಮಧ್ಯ ಸಮುದ್ರದ ಈಶಾನ್ಯದ ತುದಿಯಿಂದ ಪೃಥ್ವಿಯಲ್ಲಿ ಮೂಡಿರುವ ಬಿರುಕು ೩೦೦ ಕಿಲೋಮೀಟರ್ ಗಿಂತಲೂ ಹೆಚ್ಚು ಉದ್ದವಾಗಿರುವ ಬಿರುಕಿನ ಚಿತ್ರ ಪ್ರಸಾರ ಮಾಡಿದೆ. ಈ ಭೂಕಂಪದಿಂದ ಆಗಿರುವ ವಿನಾಶದ ಪರಿಣಾಮ ಜನರೆದಿರೂ ತರುವುದಕ್ಕಾಗಿ ‘ಕಮೆಟ’ ನಿಂದ ಎರಡು ದೇಶದ ಹಿಂದಿನ ಹಾಗೂ ನಂತರದ ಛಾಯಾ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ಭೂಕಂಪದಿಂದ ಪೃಥ್ವಿಯಲ್ಲಿ ಎರಡು ದೊಡ್ಡ ಬಿರುಕು ಬಿಟ್ಟಿರುವುದು ಕಾಣಿಸುತ್ತದೆ. ಅದರಲ್ಲಿನ ಒಂದು ಬಿರುಕು ೧೨೫ ಕಿಲೋಮೀಟರ್ ಉದ್ದ ಹಾಗೂ ಇನ್ನೊಂದು ಬಿರುಕು ಅದಕ್ಕಿಂತಲೂ ಉದ್ದವಾಗಿದೆ.