ವಿಮಾ ಪಾಲಿಸಿದಾರರ ಹೂಡಿಕೆ ಸುರಕ್ಷಿತ ! – ಜೀವ ವಿಮಾ ನಿಗಮದ ಭರವಸೆ

ಜೀವ ವಿಮಾ ನಿಗಮದ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದರಿಂದ ಆತಂಕ ನಿರ್ಮಾಣವಾಗಿರುವ ಪ್ರಕರಣ

ನವ ದೆಹಲಿ – ಜೀವ ವಿಮಾ ನಿಗಮದ (ಎಲ್.ಐ.ಸಿ.ಯ) ವಿಮಾದಾರರು ಮತ್ತು ಸಹಭಾಗಿದಾರರು ಹೆದರುವ ಅವಶ್ಯಕತೆ ಇಲ್ಲ. ಅವರಿಗೆ ಶೇ.1 ರಷ್ಟು ಅಪಾಯವಿಲ್ಲ. ಅವರ ಹೂಡಿಕೆಯ ಮೇಲೆ ಯಾವುದೇ ವಿಪರೀತ ಪರಿಣಾಮ ಬೀರುವುದಿಲ್ಲ. ಅವರು ತಮ್ಮ ಹೂಡಿಕೆಯ ಬಗ್ಗೆ ನಿಶ್ಚಿಂತವಾಗಿ ಇರಬೇಕು. ಅವರ ಹೂಡಿಕೆ ಸುರಕ್ಷಿತವಾಗಿದೆಯೆಂದು ಎಲ್.ಐ.ಸಿ.ಯ ಅಧ್ಯಕ್ಷ ಎಮ್.ಆರ್. ಕುಮಾರ ಇವರು ಎಲ್.ಐ.ಸಿ.ಯ ಹೂಡಿಕೆದಾರರಿಗೆ ಭರವಸೆ ನೀಡಿದರು. ಅವರು ‘ಬಿಸನೆಸ್ ಟುಡೆ’ಯ ವಾರ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರು. ಅಮೇರಿಕಾದ ‘ಹಿಂಡೇನಬರ್ಗ ರಿಸರ್ಚ್’ನ ವರದಿಯ ಬಳಿಕ ಅದಾನಿ ಸಮೂಹದ ‘ಷೇರ್’ನಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತಿದೆ. ಇದೇ ಸಮೂಹಕ್ಕೆ ಎಲ್.ಐ.ಸಿ. ದೊಡ್ಡ ಪ್ರಮಾಣದಲ್ಲಿ ಸಾಲ ನೀಡಿದೆ. ಇದರಿಂದ ಎಲ್.ಐ.ಸಿ.ಯ ಕೋಟ್ಯಾಂತರ ಗ್ರಾಹಕರಿಂದ ಚಿಂತೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಕುಮಾರ್ ಇವರು ಮೇಲಿನಂತೆ ಆಶ್ವಾಸನೆ ನೀಡಿದರು.

ಎಲ್.ಐ.ಸಿ.ಯ ಅದಾನಿ ಸಮೂಹದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ಹೂಡಿಕೆ

ಡಿಸೆಂಬರ್ 2022 ವರೆಗೆ ಎಲ್.ಐ.ಸಿ.ಯು ಅದಾನಿ ಸಮೂಹದಲ್ಲಿ 33 ಸಾವಿರದ 927 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ.