ನಾನು ‘ಬ್ರಾಹ್ಮಣ ಅಲ್ಲ’, ‘ಪಂಡಿತ’ ಎಂದು ಪದ ಉಚ್ಚರಿಸಿದ್ದ ! – ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಸರಸಂಘಚಾಲಕರ ಹೇಳಿಕೆಯಿಂದ ವಿವಾದ ಸೃಷ್ಟಿಯಾದ ಪ್ರಕರಣ

ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಭಾಗಲಪುರ (ಬಿಹಾರ) – ನಾನು ‘ಬ್ರಾಹ್ಮಣ’ ಪದ ಉಚ್ಚರಿಸಿಲ್ಲ. ನಾನು ‘ಪಂಡಿತ’ ಎಂದು ಹೇಳಿದೆ. ಯಾರು ಬುದ್ಧಿವಂತರೋ ಅವರಿಗೆ ‘ಪಂಡಿತ’ ಎನ್ನುತ್ತಾರೆ, ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಬ್ರಾಹ್ಮಣರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಹೇಳಿದರು. ಈ ಸಮಯದಲ್ಲಿ ‘ವಿವಾದಕ್ಕೆ ಸಂಬಂಧಪಟ್ಟ ಅನಾವಶ್ಯಕ ವಿಷಯಗಳ ಬಗ್ಗೆ ಚರ್ಚಿಸುವ ಬದಲು ರಾಷ್ಟ್ರ ಕಟ್ಟುವ ವಿಷಯದ ಬಗ್ಗೆ ಮಾತನಾಡುವುದು ಬಹಳ ಒಳ್ಳೆಯದು’, ಎಂದೂ ಕೂಡ ಅವರು ಹೇಳಿದರು.

ಕೆಲವು ದಿನಗಳ ಹಿಂದೆ ಮುಂಬಯಿದ ಒಂದು ಕಾರ್ಯಕ್ರಮದಲ್ಲಿ ಸರಸಂಘ ಚಾಲಕರು ‘ಜಾತಿಯನ್ನು ದೇವರು ನಿರ್ಮಿಸಿಲ್ಲ, ಜಾತಿ ಪಂಡಿತರು ನಿರ್ಮಿಸಿದ್ದಾರೆ, ಅದು ತಪ್ಪಾಗಿದೆ’, ಎಂದು ಹೇಳಿಕೆ ನೀಡಿದ್ದರು. ಅದರ ಬಗ್ಗೆ ವಿವಾದ ಸೃಷ್ಟಿಯಾಗಿತ್ತು.