ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಮದ್ರಾಸ ಉಚ್ಚ ನ್ಯಾಯಾಲಯದಿಂದ ಅನುಮತಿ

ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯವು ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಅನುಮತಿ ದೊರೆತಿದೆ. ತಮಿಳುನಾಡು ಪೋಲಿಸರಿಗೆ ಈ ಕುರಿತು ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಮೂರ್ತಿ ಆರ್. ಮಹಾದೇವನ ಮತ್ತು ನ್ಯಾಯಮೂರ್ತಿ ಮಹಮ್ಮದ್ ಶಫಿಕ್ ಇವರ ದ್ವಿಸದಸ್ಯ ಪೀಠವು ಈ ಆದೇಶ ನೀಡಿದೆ. ಈ ಹಿಂದೆ ಏಕಸದಸ್ಯಪೀಠದ ನ್ಯಾಯಮೂರ್ತಿಗಳು ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರು. ಇದಕ್ಕೆ ಸಂಘ ಅವಹನೆ ನೀಡಿತ್ತು. ಉಚ್ಚ ನ್ಯಾಯಾಲಯವು ಆದೇಶ ನೀಡುವಾಗ ನಾಗರಿಕರಿಗೆ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖಿಸಿದೆ.