ರಾಜಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಜಪ್ತಿ !

ಪ್ರಧಾನಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಸಿಕ್ಕ ಸ್ಫೋಟಕಗಳು !

ಜೈಪುರ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 12 ರಂದು ರಾಜಸ್ಥಾನದ ದೌಸಾ ಜಿಲ್ಲೆಯ ಪ್ರವಾಸಕ್ಕೆ ಹೋಗುವವರಿದ್ದಾರೆ. ಈ ಪ್ರವಾಸದ ಮೊದಲು ಈ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಪ್ರಧಾನಮಂತ್ರಿಗಳ ಪ್ರವಾಸದ ಮೊದಲು ಭದ್ರತೆಯ ಸಿದ್ಧತೆಯ ಪರಿಶೀಲನೆ ನಡೆಸಲು ಪೊಲೀಸರು ಗಸ್ತು ಮಾಡುತ್ತಿದ್ದರು. ಆ ಸಮಯದಲ್ಲಿ ಜಿಲ್ಲೆಯ ಖಾನ ಬಾಂಕಾರಿ ಮಾರ್ಗದ ಹತ್ತಿರ ರಾಜೇಶ ಮೀಣಾ ಇವರ ವಾಹನದ ಪರಿಶೀಲನೆ ನಡೆಸುತ್ತಿರುವಾಗ ಅದರಲ್ಲಿ ಸ್ಫೋಟಕಗಳು ಕಂಡು ಬಂದಿತು. ಅವರನ್ನು ಬಂಧಿಸಲಾಗಿದೆ. ಈ ಸ್ಫೋಟಕಗಳಲ್ಲಿ 65 ಡಿಟೊನೇಟರಗಳೊಂದಿಗೆ 1 ಸಾವಿರ ಕೇಜಿ ಸ್ಫೋಟಕಗಳು ಮತ್ತು 360 ಜಿಲೆಟಿನ್ ಕಡ್ಡಿಗಳು ಇದ್ದವು. ಯಾವ ವಾಹನದಿಂದ ಸ್ಫೋಟಕಗಳ ಸಾಗಾಣಿಕೆ ನಡೆಸಲಾಯಿತೋ, ಆ ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ‘ಮೀಣಾರನ್ನು ವಶಕ್ಕೆ ಪಡೆದ ಬಳಿಕ ಅವರ ಬಳಿ ಸ್ಫೋಟಕಗಳನ್ನು ಸಾಗಿಸುವ ಪರವಾನಿಗೆ ಪತ್ರವನ್ನು ವಿಚಾರಿಸಿದಾಗ ಅವರು ಯಾವುದೇ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ನೀಡದ ಕಾರಣ ಅವರನ್ನು ಬಂಧಿಸಲಾಯಿತು’, ಎಂದು ಪೊಲೀಸರು ಹೇಳಿದರು.