ರಾಜಸ್ಥಾನದ ಮುಖ್ಯಮಂತ್ರಿಯವರು ಬಜೆಟನ ಹಳೆಯ ಭಾಷಣ ಓದಿದರು !

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್

ಜೈಪುರ – ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್ ಇವರು ೭ ನಿಮಿಷದ ಹಳೆಯ ಬಜೆಟ್ ಭಾಷಣ ಓದಿದರು. ಇದು ವಿರೋಧ ಪಕ್ಷಗಳ ಗಮನಕ್ಕೆ ಬಂದಿತು ಮತ್ತು ಅವರು ಸಭಾಗೃಹದಲ್ಲಿ ನಗುತ್ತಿದ್ದರು. ತಪ್ಪು ಗಮನಕ್ಕೆ ಬಂದ ನಂತರ ಗೆಹಲೋತ್ ಇವರನ್ನು ತಡೆದರು. ತಪ್ಪು ಅರಿವಿಗೆ ಬಂದ ನಂತರ ಗೆಹಲೋತ್ ಇವರು ಸಭಾಗೃಹದ ಕ್ಷಮೆ ಯಾಚಿಸಿದರು. ಹಳೆಯ ಭಾಷಣ ಓದಿ ತೋರಿಸಿರುವುದರಿಂದ ವಿರೋಧ ಪಕ್ಷದವರು ಗಲಾಟೆ ಮಾಡಿದರು. ಆದ್ದರಿಂದ ವಿಧಾನಸಭೆಯ ಕಾರ್ಯಕಲಾಪ ೩೦ ನಿಮಿಷ ಸ್ಥಗಿತಗೊಳಿಸಿದರು. ವಿಧಾನಸಭೆಯಲ್ಲಿ ಹಳೆಯ ಬಜೆಟ್ ಓದಿರುವುದು ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ. ನಂತರ ಮುಖ್ಯಮಂತ್ರಿಯ ಮುಖ್ಯ ಸಚಿವೆ ಉಷಾ ಶರ್ಮ ಇವರನ್ನು ಕರೆಯಿಸಿ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್ ಪ್ರಸ್ತುತಪಡಿಸುವುದಕ್ಕೆ ಯಾವ ಬ್ಯಾಗಿನಲ್ಲಿ ಭಾಷಣದ ಕಾಗದ ಪತ್ರಗಳು ಇಡುತ್ತಾರೆ, ಅದರಲ್ಲಿ ಹಳೆಯ ಭಾಷಣ ಇಟ್ಟಿರುವುದರಿಂದ ಇದು ಅಧಿಕಾರಿಗಳ ಬೇಜವಾಬ್ದಾರಿತನ ಎಂದು ಹೇಳಿದರು. (ಅಧಿಕಾರಿಗಳ ಬೇಜವಾಬ್ದಾರಿತನ ಇದ್ದರೂ ಕೂಡ ಮುಖ್ಯಮಂತ್ರಿಗಳ ಜಾಗರೂಕತೆ ಕಡಿಮೆ ಇದೆ ಇದು ಕೂಡ ಅಷ್ಟೇ ಸತ್ಯ ! – ಸಂಪಾದಕರು)

ಈ ಘಟನೆಯ ನಂತರ ಕೆಲವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಸಂಪಾದಕೀಯ ನಿಲುವು

ಇಂತಹ ಬೇಜವಾಬ್ದಾರಿತನಕ್ಕೆ ಏನು ಹೇಳಬೇಕು ? ಇಂತಹ ಕಾಂಗ್ರೆಸ್ಸಿನವರು ಹೇಗೆ ಸರಕಾರ ನಡೆಸುತ್ತಿರಬಹುದು, ಇದರ ಯೋಚನೆ ಮಾಡದಿರುವುದು ಒಳಿತು !