ಗಾಂಧೀ ಕುಟುಂಬದವರು ನೆಹರುರವರ ಅಡ್ಡ ಹೆಸರು ಇಟ್ಟುಕೊಳ್ಳಲು ಏಕೆ ಹೆದರುತ್ತದೆ ?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜ್ಯಸಭೆಯಲ್ಲಿನ ಪ್ರಶ್ನೆ !

ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ಯಾವುದೇ ಕಾರ್ಯಕ್ರಮದಲ್ಲಿ ನೆಹರೂರ ಹೆಸರು ಹೇಳುವುದಿಲ್ಲ, ಇನ್ನು ಕೆಲವರ ಮೈ ಕೂದಲು ನಿಲ್ಲುತ್ತವೆ, ರಕ್ತ ಬಿಸಿಯಾಗುತ್ತದೆ. ಅವರ ಪೀಳಿಗೆಯಲ್ಲಿನ ವ್ಯಕ್ತಿ ನೆಹರು ಅಡ್ಡ ಹೆಸರು ಇಟ್ಟುಕೊಳ್ಳಲು ಏಕೆ ಹೆದರುತ್ತಾರೆ, ಇದು ನನಗೆ ತಿಳಿದಿಲ್ಲ. ನೆಹರು ಅಡ್ಡ ಹೆಸರು ಇಟ್ಟುಕೊಳ್ಳುವುದರಲ್ಲಿ ನಾಚಿಕೆ ಏಕೆ ? ಇಷ್ಟು ಮಹಾನ ವ್ಯಕ್ತಿ ನಿಮಗೆ ನಿಮ್ಮ ಕುಟುಂಬಕ್ಕೆ ಒಪ್ಪಿಗೆ ಇಲ್ಲ ಮತ್ತು ನೀವು ನಮ್ಮ ಲೆಕ್ಕ ಕೇಳುತ್ತೀರಿ ?, ಈ ಪದಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಗಾಂಧೀ ಪರಿವಾರದ ಮೇಲೆ ಕಠೋರ ಟೀಕೆ ಮಾಡಿದರು. ರಾಷ್ಟ್ರಪತಿಯ ಆಯವ್ಯಯ ಮುಂಗಡ ಪತ್ರದ ಅಧಿವೇಶನದಲ್ಲಿನ ಭಾಷಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಧಾನಮಂತ್ರಿ ಮೋದಿ ಅವರ ಭಾಷಣದಲ್ಲಿ ಅಡಚಣೆ ತರುವ ಪ್ರಯತ್ನ ಮಾಡಿದರು. ಅವರು ಸಂಪೂರ್ಣ ಭಾಷಣದ ಸಮಯದಲ್ಲಿ ‘ಮೋದಿ-ಅದಾನಿ ಭಾಯಿ ಭಾಯಿ’ ಎಂದು ಘೋಷಣೆ ನೀಡುತ್ತಿದ್ದರು.

(ಸೌಜನ್ಯ :The Economic Times)

ಪ್ರಧಾನಮಂತ್ರಿ ಮೋದಿ ಇವರು ಅವರ ಭಾಷಣದಲ್ಲಿ ಮಂಡಿಸಿರುವ ಸೂತ್ರಗಳು !

ಒಬ್ಬ ವ್ಯಕ್ತಿ ಎಲ್ಲರಿಗೆ ತಲೆನೋವಾದನು !

ದೇಶ ನೋಡುತ್ತಿದೆ, ಒಬ್ಬ ವ್ಯಕ್ತಿ ಎಲ್ಲರಿಗೆ ತಲೆನೋವಾಗಿದ್ದಾನೆ. ಘೋಷಣೆ ಕೂಗಲು ಮನುಷ್ಯರನ್ನು ಬದಲಾಯಿಸಬೇಕಾಗುತ್ತದೆ. ನಾನು ಒಬ್ಬನೇ ಗಂಟೆಗಟ್ಟಲೆ ಮಾತನಾಡುತ್ತಿದ್ದೆ ಮತ್ತು ನಾನು ಎಲ್ಲೂ ನಿಲ್ಲಲಿಲ್ಲ. ಅವರಲ್ಲಿ (ವಿರೋಧ ಪಕ್ಷದಲ್ಲಿ) ಧೈರ್ಯ ಇಲ್ಲ, ಅವರು ಪಲಾಯನದ ಮಾರ್ಗ ಹುಡುಕುತ್ತಿದ್ದಾರೆ.

ಭಾರತ ಒಂದು ಕುಟುಂಬದ ಆಸ್ತಿ ಅಲ್ಲ !

ಭಾರತ ಸಾಮಾನ್ಯರ ಬೆವರಿನಿಂದ ಕಟ್ಟಿರುವ ಮತ್ತು ತಲತಲಾಂತರದಿಂದ ನಡೆಸುತ್ತಿರುವ ಪರಂಪರೆಯ ದೇಶವಾಗಿದೆ. ಇಲ್ಲಿ ಕೆಲವು ಜನರು ತಿಳಿದುಕೊಳ್ಳಬೇಕು. ಇದು ಕೌಟುಂಬಿಕ ಆಸ್ತಿ ಅಲ್ಲ. ಧ್ಯಾನಚಂದ ಇವರ ಹೆಸರಿನಿಂದ ನಾವು ಖೆಲರತ್ನ ಪ್ರಶಸ್ತಿ ನೀಡುತ್ತೇವೆ. ನಾವು ಅಂದಮಾನ ದ್ವೀಪದ ಹೆಸರು ಪರಮವೀರ ಚಕ್ರ ವಿಜೇತರ ಹೆಸರು ಇಟ್ಟಿದ್ದೇವೆ.

ಬಡತನ ಹೋಗಲಾಡಿಸಲು ಏನನ್ನು ಮಾಡಿಲ್ಲ !

ಯಾವುದೇ ಸರಕಾರ ಬಂದರೇ, ದೇಶಕ್ಕಾಗಿ ಏನಾದರು ಮಾಡುವ ಆಶ್ವಾಸನೆ ನೀಡುತ್ತೇವೆ. ‘ಗರೀಬಿ ಹಠವೋ’ ಇದು ಒಂದು ಕಾಲದಲ್ಲಿ ಹೇಳುತ್ತಿದ್ದರು, ೪ ದಶಕಗಳು ಕಳೆದರೂ ಏನನ್ನು ಮಾಡಲಿಲ್ಲ. ವಿಕಾಸದ ಗತಿ ಏನು ಇದೆ, ವಿಕಾಸದ ಉದ್ದೇಶ ಏನಾಗಿದೆ, ಅದರ ದಿಕ್ಕು, ಪ್ರಯತ್ನ ಮತ್ತು ಪರಿಣಾಮ ಏನು ಇದೆ ಇದು ಮಹತ್ವದ್ದಾಗಿದೆ. ಜನರ ಅವಶ್ಯಕತೆಗಾಗಿ ಶ್ರಮ ಮಾಡಬೇಕು.

ಮತಗಳು ಇಲ್ಲದೇ ಇರುವ ಈಶಾನ್ಯ ಭಾರತದಲ್ಲಿ ವಿದ್ಯುತ್ ಪೂರೈಕೆ ಕೂಡ ಆಗಿಲ್ಲ !

ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ಸಿನ ಮತಗಳು ಇರಲಿಲ್ಲ. ಆದ್ದರಿಂದ ಅಲ್ಲಿ ವಿದ್ಯುತ್ ಪೂರೈಕೆ ಕಡೆ ಗಮನ ನೀಡಲಿಲ್ಲ. ನಾವು ೧೮ ಸಾವಿರ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಿದ್ದೇವೆ. ಅದರ ವಿಕಾಸ ಆಗಿದೆ ಮತ್ತು ದೇಶದ ವ್ಯವಸ್ಥೆಯಲ್ಲಿನ ವಿಶ್ವಾಸ ಹೆಚ್ಚಿದೆ. ಅವರ ವಿಶ್ವಾಸ ನಾವು ಗೆದ್ದಿದ್ದೇವೆ. ಸ್ವಾತಂತ್ರ್ಯದ ಇಷ್ಟು ವರ್ಷದ ನಂತರ ದುರ್ಗಮ ಗ್ರಾಮಗಳಿಗೂ ಆಸೆಯ ಕಿರಣ ಕಂಡಿದೆ, ಇದರ ಆನಂದ ಇದೆ.

ಕಾಂಗ್ರೆಸ್ಸ ರೈತರನ್ನು ರಾಜಕೀಯಕ್ಕಾಗಿ ಬಳಸಿದರು

ಸಣ್ಣ ರೈತರ ಕಡೆಗೆ ನಿರ್ಲಕ್ಷಿಸಲಾಯಿತು, ಅವರ ಕಷ್ಟ ಯಾರೂ ಕೇಳಲಿಲ್ಲ. ನಮ್ಮ ಸರಕಾರದಿಂದ ಸಣ್ಣ ರೈತರ ಮೇಲೆ ಗಮನ ಕೇಂದ್ರೀಕೃತ ಮಾಡಿದೆವು. ಅವರಿಗೆ ಬ್ಯಾಂಕ್ ನೊಂದಿಗೆ ಜೋಡಿಸಿದೆವು ಮತ್ತು ಇಂದು ಕಿಸಾನ್ ಸನ್ಮಾನ ನಿಧಿ ವರ್ಷದಲ್ಲಿ ೩ ಬಾರಿ ಅವರ ಖಾತೆಗೆ ಜಮೆ ಮಾಡುತ್ತೇವೆ.

ಲಸಿಕೆ ತಯಾರಿಸುವ ವಿಜ್ಞಾನಿಗಳ ಅವಮಾನ ಮಾಡುವ ಪ್ರಯತ್ನವಾಯಿತು !

ಕೊರೊನಾ ಪ್ರತಿರೋಧಕ ಲಸಿಕೆ ತಯಾರಿಸುವ ವಿಜ್ಞಾನಿಗಳ ಅವಮಾನ ಮಾಡುವ ಎಷ್ಟೋ ಪ್ರಯತ್ನಗಳಾದವು. ಲೇಖನಗಳು ಬರೆದರು. ಟಿಕಿಸಿದರು, ‘ಈ ಜನರು ವಿಜ್ಞಾನ ವಿರೋಧಿ ಇರುವರು, ಇವರು ತಂತ್ರಜ್ಞಾನ ವಿರೋಧಿ ಇರುವರು’, ಈ ರೀತಿಯ ಟೀಕೆಗಳು ಮಾಡಿದರು. ನಮ್ಮ ವಿಜ್ಞಾನಿಗಳ ಅವಮಾನ ಮಾಡುವ ಒಂದೇ ಒಂದು ಅವಕಾಶ ಕೂಡ ಬಿಡಲಿಲ್ಲ. ಅವರಿಗೆ ದೇಶದ ಕಾಳಜಿ ಇಲ್ಲ ಅವರಿಗೆ ಅವರ ರಾಜಕೀಯದ ಚಿಂತೆ ಆಗಿದೆ.